Spread the love
ಕಾಂಗ್ರೆಸ್ ಗೆ ಹೋಗಲ್ಲ ಪಾಲೆಮಾರ್ ಸ್ಪಷ್ಟನೆ
ಮಂಗಳೂರು: ‘ಕಾಂಗ್ರೆಸ್ಗೆ ಹೋಗಲ್ಲ, ಬಿಜೆಪಿಯಲ್ಲೇ ಇರುತ್ತೇನೆ’ ಎಂದು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಪತ್ರಿಕಾ ಭವನಕ್ಕೆ ಆಗಮಿಸಿದ ಅವರು ಸುದ್ದಿಗಾರರ ಜತೆ ಮಾತನಾಡಿ, ಬಿಜೆಪಿ ಪಕ್ಷ ನನಗೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಿದ ಕಾರಣ ಜನರ ಆಶೀರ್ವಾದದಿಂದ ಶಾಸಕ, ಸಚಿವನಾಗುವ ಅವಕಾಶ ಲಭ್ಯವಾಗಿತ್ತು. ಈಗಲೂ ಪಕ್ಷದಲ್ಲಿ ಸಕ್ರೀಯನಾಗಿದ್ದೇನೆ. ಬೇರೆ ಪಕ್ಷಕ್ಕೆ ಹೋಗುವ ಬಗ್ಗೆ ನಿರ್ಧಾರ ಮಾಡಿಲ್ಲ ಎಂದು ಕೆಲವು ದಿನಗಳಿಂದ ವ್ಯಕ್ತವಾದ ಊಹಾಪೋಹಗಳಿಗೆ ತೆರೆ ಎಳೆದರು.
ಕಾಂಗ್ರೆಸ್ ಪಕ್ಷದಲ್ಲಿ ಹಲವರು ನನ್ನ ಆತ್ಮೀಯ ಸ್ನೇಹಿತರಿದ್ದಾರೆ. ಅವರು ನಮ್ಮ ಮನೆಗೆ ಬರುತ್ತಾರೆ. ನಾನು ಅವರ ಮನೆಗೆ ಹೋಗುತ್ತೇನೆ. ಒಟ್ಟಿಗೆ ಊಟ ಮಾಡುತ್ತೇವೆ. ಪಕ್ಷದ ವಿಚಾರ ಬಂದಾಗ ನನ್ನ ಪಕ್ಷ ನನಗೆ, ಅವರ ಪಕ್ಷ ಅವರಿಗೆ ಎಂದು ಪಾಲೆಮಾರ್ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
Spread the love













