ನ. 27: ವಿಮಾನ ದುರಂತ ಅಣಕು ಕಾರ್ಯಾಚರಣೆ: ಸಂಚಾರ ವ್ಯತ್ಯಯ

Spread the love

ನ. 27: ವಿಮಾನ ದುರಂತ ಅಣಕು ಕಾರ್ಯಾಚರಣೆ: ಸಂಚಾರ ವ್ಯತ್ಯಯ

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಲ್ಲಿ ಸಮಗ್ರ ಅಣಕು ಕಾರ್ಯಾಚರಣೆ ಶುಕ್ರವಾರ ನಡೆಯಲಿದೆ. ಈ ಬಾರಿ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಸಂಭವಿಸುವ ವಿಮಾನ ಅಪಘಾತದ ಸನ್ನಿವೇಶವನ್ನು ಆಧರಿಸಿ ಅಣಕು ಕಾರ್ಯಾಚರಣೆ ನಡೆಯಲಿದೆ.

ಅಣಕು ಕಾರ್ಯಾಚರಣೆಯ ಭಾಗವಾಗಿ ವಿಮಾನ ದುರಂತ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ತುರ್ತು ಪರಿಹಾರ ಕಾರ್ಯಾಚರಣೆಯ ಪರಿಣಾಮಕಾರಿ ಅನುಷ್ಠಾನ ನಡೆಯಲಿದೆ. ವಿಮಾನ ನಿಲ್ದಾಣದ ಆವರಣದೊಳಗಿನ ತುರ್ತು ಪರಿಸ್ಥಿತಿಗಿಂತ ಭಿನ್ನವಾಗಿ, ಈ ಬಾರಿ ವಿಮಾನ ನಿಲ್ದಾಣದ ಗಡಿಗೆ ಹೊಂದಿಕೊಂಡಿರುವ ಸಮತಟ್ಟಾದ ಹೊರ ಪ್ರದೇಶದಲ್ಲಿ ವಿಮಾನ ಅಪಘಾತ ಸಂಭವಿಸಿದ ಸನ್ನಿವೇಶವನ್ನು ಸೃಷ್ಟಿಸಲಾಗುತ್ತದೆ.

ಈ ಅಣಕು ಕಾರ್ಯಾಚರಣೆ ಭಾಗವಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ರಸ್ತೆಗಳಲ್ಲಿ ಶುಕ್ರವಾರ ಅಗ್ನಿಶಾಮಕ ದಳ, ಪೊಲೀಸ್, ಅಂಬ್ಯುಲೆನ್ಸ್ಗಳ ಓಡಾಟ ಇರಲಿದೆ. ಸಂತ್ರಸ್ತರನ್ನು, ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡಲು ನಗರದ ಎ.ಜೆ.ಆಸ್ಪತ್ರೆ, ಫಾದರ್ ಮುಲ್ಲರ್ ಆಸ್ಪತ್ರೆ, ವೆನ್ಲಾಕ್ ಆಸ್ಪತ್ರೆಗಳಿಗೆ ಕರೆದೊಯ್ಯಲಾಗುವುದು. ಈ ಸಂದರ್ಭದಲ್ಲಿ ಏರ್ಪೋರ್ಟ್ನಿಂದ ಈ ಆಸ್ಪತ್ರೆಗಳಿಗೆ ಹೋಗುವ ರಸ್ತೆಗಳನ್ನು ಗ್ರೀನ್ ಕಾರಿಡಾರ್ ಆಗಿ ಪರಿವರ್ತಿಸಿ, ವಾಹನ ಸಂಚಾರವನ್ನು ನಿರ್ಬಂಧಿಸಲಾಗುವುದು. ಇದರಿಂದ ರಾಷ್ಟ್ರೀಯ ಹೆದ್ದಾರಿ ಮತ್ತು ನಗರದ ಕೆಲವು ರಸ್ತೆಗಳಲ್ಲಿ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

ಶುಕ್ರವಾರ ಬೆಳಿಗ್ಗೆ 9:55 ರಿಂದ ಮಧ್ಯಾಹ್ನದವರೆಗೆ ಈ ಅಣಕು ಪ್ರದರ್ಶನ ನಡೆಯಲಿದೆ. ಸಾರ್ವಜನಿಕರು ಈ ಸಂದರ್ಭದಲ್ಲಿ ಸಹಕರಿಸಲು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.


Spread the love
Subscribe
Notify of

0 Comments