NSUI ಹೆಬ್ರಿ ಡಿಗ್ರಿ ಪ್ರೀಮಿಯರ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ

Spread the love

NSUI ಹೆಬ್ರಿ ಡಿಗ್ರಿ ಪ್ರೀಮಿಯರ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ 

ಹೆಬ್ರಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಹೆಬ್ರಿ ಇಲ್ಲಿ ವಿದ್ಯಾರ್ಥಿ ತಂಡಗಳ ನಡುವೆ ಕ್ರಿಕೆಟ್ ಪಂದ್ಯಾಟ – ಡಿಗ್ರಿ ಪ್ರೀಮಿಯರ್ ಲೀಗ್ -2017 ಜರಗಿತು.

ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೋ ಎಂ.ಆರ್ ಮಂಜುನಾಥ ಇವರು ವಿದ್ಯಾರ್ಥಿಗಳಿಗೆ ಕ್ರೀಡೆಗಳಿಂದ ಆಗುವ ಪ್ರಯೋಜನದ ಕುರಿತು ಹೇಳಿ ಶುಭ ಹಾರೈಸಿದರು.

ಒಟ್ಟು ಏಳು ತಂಡಗಳ 84 ಆಟಗಾರರು ಭಾಗವಹಿಸಿದರು, ಈ ಗುಂಪುಗಳಲ್ಲಿ (A ಮತ್ತು B)ಲೀಗ್ ಪಂದ್ಯಾಟಗಳು ಜರುಗಿ , ಮತ್ತೆ ಸೆಮಿಫೈನಲ್ ಹಾಗೂ ಫೈನಲ್ ನಡೆಯಿತು. ಅಂತಿಮವಾಗಿ ಸಂದೀಪ್ ಆಚಾರ್ಯ ಇವರ ತಂಡ ಪ್ರಶಸ್ತಿ ಹಾಗೂ ಟ್ರೋಫಿ ಪಡೆಯಿತು ದ್ವಿತೀಯ ಸ್ಥಾನವನ್ನು ಪ್ರಮೋದ್ ಕುಮಾರ್ ಇವರ ತಂಡ ಪಡೆಯಿತು ಪ್ರಥಮ ಬಹುಮಾನ ರೂ.5000.00 ಹಾಗೂ ದ್ವಿತೀಯ ಬಹುಮಾನ 3000.00 ನಗದು ಪುರಸ್ಕಾರವನ್ನು ಪ್ರಾಂಶುಪಾಲರ ಜೊತೆಗೂಡಿ ಕ್ರೀಡಾ ಉಪನ್ಯಾಸಕರಾದ ಅರುಣ್ ಕುಮಾರ್ ಶೆಟ್ಟಿ ಹಾಗೂ ಇತರೆ ಉಪನ್ಯಾಸಕರಾದ ಕೆ.ಜಿ ಸುಧಾಕರ, ಡಾ.ಎಚ್ ಗಣಪತಿ,ಎಸ್ ಗಣೇಶ್ ಹಾಗೂ ವಿಷ್ಣುಮೂರ್ತಿ ಪ್ರಭು ವಿತರಿಸಿದರು.

ಚಾರ ಪಂಚಾಯತ್ ಸದಸ್ಯರಾದ ಶ್ರೀ ದಿನೇಶ್ ಕುಮಾರ್ ಶೆಟ್ಟಿ ಇವರು ಟ್ರೋಫಿಗಳನ್ನು NSUI ಹೆಬ್ರಿ ಘಟಕದ ಅಧ್ಯಕ್ಷರು ಪ್ರತಾಪ್ ಜೆ ಶೆಟ್ಟಿ ಹಾಗೂ ಉಪಾಧ್ಯಕ್ಷರು ವಿನಯ್ ಪ್ರಸಾದ್, ಶರತ್ ಕುಮಾರ್, ವಿಜಯ್ ಶೆಟ್ಟಿ , ಮಂಜುನಾಥ್ ಪೂಜಾರಿ ಕಾರ್ಯದಶಿಗಳಾದ ಸುವಿನ್ ಶೆಟ್ಟಿ ಹಾಗೂ ಪ್ರಜ್ವಲ್ ಆಚರ್ಯ ಇವರು ವಿಜೇತ ತಂಡಗಳಿಗೆ ಶುಭಹಾರೈಸಿದರು. ವಿದ್ಯಾರ್ಥಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ನಿಖಿಲ್.ಎಸ್.ಶೆಟ್ಟಿ ಹಾಗೂ ವಿದ್ಯಾರ್ಥಿ ಕ್ರೀಡಾಕಾರ್ಯದಶಿ ಕೀರ್ತನ್ ಉಪಸ್ಥಿತರಿದ್ದರು.


Spread the love