ಕ್ರೈಸ್ತ ಸಮುದಾಯದ ವಿದ್ಯಾರ್ಥಿಗಳು ಅರಿವು ವಿದ್ಯಾಭ್ಯಾಸ ಸಾಲದ ಪ್ರಯೋಜನ ಪಡೆದುಕೊಳ್ಳಿ : ಪ್ರಶಾಂತ್ ಜತ್ನನ್ನ

Spread the love

ಕ್ರೈಸ್ತ ಸಮುದಾಯದ ವಿದ್ಯಾರ್ಥಿಗಳು ಅರಿವು ವಿದ್ಯಾಭ್ಯಾಸ ಸಾಲದ ಪ್ರಯೋಜನ ಪಡೆದುಕೊಳ್ಳಿ : ಪ್ರಶಾಂತ್ ಜತ್ನನ್ನ

ಉಡುಪಿ: ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ಮೂಲಕ ಅನುಷ್ಠಾನ ಮಾಡುತ್ತಿರುವ ಅರಿವು ವಿದ್ಯಾಭ್ಯಾಸ ಸಾಲಕ್ಕೆ ಆನ್ಲೈನ್ ಮೂಲಕ ಅರ್ಜಿಗಳನ್ನು ‘ ಆಹ್ವಾನಿಸಿದ್ದು ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುವಂತೆ ನಿಗಮದ ನಿರ್ದೇಶಕರಾದ ಪ್ರಶಾಂತ್ ಜತ್ತನ್ನ ಮನವಿ ಮಾಡಿದ್ದಾರೆ

ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ 2026-27ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಅನುಮೋದಿತ ಕಾರ್ಯಕ್ರಮವಾದ ಅರಿವು ವಿಧ್ಯಾಭ್ಯಾಸ ಸಾಲ ಯೋಜನೆಯಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿ.ಇ.ಟಿ ಅಥವಾ ನೀಟ್ ಅಥವಾ ಜೆಇಇ ಮೂಲಕ ಆಯ್ಕೆಯಾದ MBBS, MD/MS ಕೋರ್ಸ್ಗಳಿಗೆ ಸರ್ಕಾರಿ ಕಾಲೇಜು/ಖಾಸಗಿ/ಮ್ಯಾನೇಜ್ಮೆಂಟ್ ಕೋಟಾದಡಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗರಿಷ್ಠ ರೂ. 5.00 ಲಕ್ಷದವರೆಗೆ ಸಾಲ ನೀಡುತ್ತಿದ್ದು, ವೃತ್ತಿಪರ F (MBBS, MD, BDS, MDS, B. Ayush, M. Ayush, BE, B. Tech, M. Tech, ME, B. Arch, M. Arch, MBA, MCA, LLB, BSc in Horticulture, Agriculture, Agriculture Engineering, Dairy Technology, Forestry, Veterinary and Animal Sciences, Food Technology, Biotechnology, Fisheries, Sericulture, Home/Community Sciences, Food Nutrition & Dietetics, B. Pharma, M. Pharma, Pharma, D, D. Pharma) ಈ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅನ್ಲೈನ್ ಮೂಲಕ ಅರಿವು ವಿಧ್ಯಾಭ್ಯಾಸ ಸಾಲಕ್ಕೆ ಅರ್ಜಿಗಳನ್ನು ಆಹ್ವಾನಿಸಿದ್ದು, ಕ್ರೈಸ್ತ ಸಮುದಾಯದ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯುವಂತೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ


Spread the love
Subscribe
Notify of

0 Comments