ದೇಶದಲ್ಲಿ ಎಸ್‌ಐಆರ್ ಮೂಲಕ ಬಿಜೆಪಿಯಿಂದ ಮತ ಕಳ್ಳತನದ ಹಾದಿ ಜಗಜ್ಜಾಹೀರು: ರಮಾನಾಥ ರೈ

Spread the love

ದೇಶದಲ್ಲಿ ಎಸ್‌ಐಆರ್ ಮೂಲಕ ಬಿಜೆಪಿಯಿಂದ ಮತ ಕಳ್ಳತನದ ಹಾದಿ ಜಗಜ್ಜಾಹೀರು: ರಮಾನಾಥ ರೈ

ಮಂಗಳೂರು: ಪ್ರಜಾಪ್ರಭುತ್ವದ ಮೌಲ್ಯಗಳ ಸಂರಕ್ಷಣೆ ಉದ್ದೇಶದಿಂದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ದೇಶವ್ಯಾಪಿ ಹಮ್ಮಿಕೊಂಡಿರುವ ‘ವೋಟ್ ಬಚಾವೋ-ದೇಶ್ ಬಚಾವೋ’ಬೃಹತ್ ಜನಾಂದೋಲನದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಗುರುವಾರ ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು.

ಪ್ರತಿಭಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಬಿ. ರಮಾನಾಥ ರೈ ಅವರು ‘ದೇಶದಲ್ಲಿ ಎಸ್‌ಐಆರ್ ಮೂಲಕ ಬಿಜೆಪಿ ಮತ ಕಳ್ಳತನದ ಹಾದಿ ಹಿಡಿದಿರುವುದು ಜಗಜ್ಜಾಹೀರಾಗಿದೆ. ಜನಸಾಮಾನ್ಯರು ಇದರ ಗಂಭೀರತೆ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಆ ದೇಶದಲ್ಲಿ ಹಿನ್ನಡೆಯಾಗಿದ್ದು, ಅದೇ ಪರಿಸ್ಥಿತಿ ನಮ್ಮ ದೇಶದಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಟ್ಟಿದೆ. ಮುಂದಿನ ದಿನಗಳಲ್ಲಿ ಅದರ ಪರಿಣಾಮ ಗೊತ್ತಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್ ಅವರು ಮಾತನಾಡಿ ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಒಂದು ದೊಡ್ಡ ಶಕ್ತಿಯಾಗಿದ್ದು, ಆ ಹಕ್ಕನ್ನು ಮತದಾರನಿಂದ ಕಿತ್ತು ಬಿಜೆಪಿಗೆ ಲಾಭ ಮಾಡುವ ಹುನ್ನಾರ ವನ್ನು ಚುನಾವಣಾ ಆಯೋಗ ಮಾಡುತ್ತಿದೆ. ಜನರ ಹಕ್ಕಿನ ರಕ್ಷಣೆಗೆ ದೇಶಾದ್ಯಂತ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯವಾಗಿದೆ ’ಎಂದು ಹೇಳಿದರು.

ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಅವರು‘ ಕೇಂದ್ರದ ಬಿಜೆಪಿ ಸರಕಾರವು ಚುನಾವಣಾ ಆಯೋಗ ಆಯುಕ್ತರ ಆಯ್ಕೆ, ಅಧಿಕಾರ ವಿಚಾರದಲ್ಲಿ ತಮಗೆ ಬೇಕಾದಂತೆ ಕಾನೂನು ರೂಪಿಸಿದೆ. ಇದು ಕೇಂದ್ರ ಬಿಜೆಪಿ ಸರಕಾರ ಮಾಡಿದ ವೋಟ್ ಚೋರಿ ಷಡ್ಯಂತ್ರವಾಗಿದೆ ಎಂದು ಬಣ್ಣಿಸಿದರು.

ಪ್ರತಿಭಟನೆಯಲ್ಲಿ ಮಹಿಳಾ ಕಾಂಗ್ರೆಸ್ ನಗರ ಅಧ್ಯಕ್ಷೆ ಅಪ್ಪಿ.ಎಸ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಕೋಟ್ಯಾನ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಲೀಂ, ಪ್ರಮುಖರಾದ ಶಾಹುಲ್ ಹಮೀದ್, ಬುಡಾ ಅಧ್ಯಕ್ಷ ಬೇಬಿ ಕುಂದರ್, ಪಕ್ಷದ ಪ್ರಮುಖರಾದ ಶಶಿಧರ ಹೆಗ್ಡೆ, ಅಬ್ದುಲ್ ರವೂಫ್, ವಿನಯರಾಜ್ ಎಸಿ, ನವೀನ್ ಡಿ ಸೋಜ, ಅಬ್ಬಾಸ್ ಅಲಿ, ಲುಕ್ಮಾನ್ ಬಂಟ್ವಾಳ, ಇಬ್ರಾಹೀಂ ನವಾಝ್ ಮತ್ತಿತರರು ಭಾಗವಹಿಸಿದ್ದರು.


Spread the love
Subscribe
Notify of

0 Comments