ಐದು ಕೋಟಿ ರೂ. ವೆಚ್ಚದಲ್ಲಿ ಬಂಕೇರಕಟ್ಟ ನೂತನ ಸೇತುವೆ ನಿರ್ಮಾಣದ ಕನಸು ಶೀಘ್ರ ನನಸಾಗಲಿದೆ : ಶಾಸಕ ಯಶ್ಪಾಲ್ ಸುವರ್ಣ

Spread the love

ಐದು ಕೋಟಿ ರೂ. ವೆಚ್ಚದಲ್ಲಿ ಬಂಕೇರಕಟ್ಟ ನೂತನ ಸೇತುವೆ ನಿರ್ಮಾಣದ ಕನಸು ಶೀಘ್ರ ನನಸಾಗಲಿದೆ : ಶಾಸಕ ಯಶ್ಪಾಲ್ ಸುವರ್ಣ

ಉಡುಪಿ : ಕಲ್ಮಾಡಿ-ಕಿದಿಯೂರು ಮುಖ್ಯ ರಸ್ತೆಯಲ್ಲಿ ಬಹು ವರ್ಷಗಳ ಬೇಡಿಕೆಯಾಗಿದ್ದ ಬಂಕೇರಕಟ್ಟ ನೂತನ ಸೇತುವೆ ಕಾಮಗಾರಿಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಶಾಸಕ ಯಶ್ಪಾಲ್ ಸುವರ್ಣ ಅವರು ಮಾತನಾಡಿ ಉದ್ಯಾವರದಿಂದ ಮಲ್ಪೆಯನ್ನು ಸಂಪರ್ಕಿಸುವ ಈ ಪ್ರಮುಖ ರಸ್ತೆಯ ಬಂಕೇರಕಟ್ಟ ಸೇತುವೆ ಪ್ರತಿವರ್ಷ ಮಳೆಗಾಲದ ಸಂದರ್ಭದಲ್ಲಿ ಜಲಾವೃತವಾಗಿ ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದ್ದು, ತೀರ ಹಳೆಯದಾಗಿ ಶಿಥಿಲಾವಸ್ಥೆಯಲ್ಲಿದೆ. ಸ್ಥಳೀಯರ ಬೇಡಿಕೆಯಂತೆ ಸೇತುವೆಯನ್ನು ಮರು ನಿರ್ಮಾಣದ ಯೋಜನೆಯಲ್ಲಿ ಲೋಕೋಪಯೋಗಿ ಇಲಾಖೆಯ ಮೂಲಕ ರೂ.5 ಕೋಟಿ ವೆಚ್ಚದಲ್ಲಿ ಅತ್ಯಂತ ವೈಜ್ಞಾನಿಕ ರೀತಿಯಲ್ಲಿ 10 ಮೀಟರ್ ಅಗಲದಲ್ಲಿ ನೂತನ ಸೇತುವೆ ನಿರ್ಮಿಸಲು ಗುದ್ದಲಿ ಪೂಜೆ ನೆರವೇರಿಸಿದ್ದು ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ. ಈಗಾಗಲೇ ಕಳೆದ ವರ್ಷ ಸುಮಾರು ರೂ.4 ಕೋಟಿ ವೆಚ್ಚದಲ್ಲಿ ಕಲ್ಮಾಡಿಯಿಂದ ಸಂಪಿಗೆ ನಗರ ವರೆಗೆ ಫೇವರ್ ಫಿನಿಷ್ ರಸ್ತೆ ಅಭಿವೃದ್ಧಿ ಮಾಡಿದ್ದು, ಸೇತುವೆ ನಿರ್ಮಾಣದ ಬಳಿಕ ವಾಹನ ಸವಾರರಿಗೆ ಅನುಕೂಲವಾಗಲಿದೆ ಎಂದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ನಾರಾಯಣ ಕರ್ಕೇರ ಮಾತನಾಡಿ ಈ ರಸ್ತೆ ಮಲ್ಪೆ ಬಂದರಿಗೆ ಆಗಮಿಸುವ ವಾಹನಗಳು ರಾಷ್ಟ್ರೀಯ ಹೆದ್ದಾರಿಗೆ ಪರ್ಯಾಯವಾಗಿ ಸಾಗುವ ಪ್ರಮುಖ ರಸ್ತೆಯಾಗಿದ್ದು, ನೂತನ ಸೇತುವೆ ನಿರ್ಮಾಣದ ಮೂಲಕ ಸಹಕಾರಿಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಮೀನುಗಾರ ಮುಖಂಡರಾದ ದಯಾನಂದ ಸುವರ್ಣ, ರಾಮಚಂದ್ರ ಕುಂದರ್, ರತ್ನಾಕರ ಸಾಲ್ಯಾನ್, ದಯಾಕರ ಸುವರ್ಣ, ಜಗನ್ನಾಥ ಕಡೆಕಾರು, ಸ್ಥಳೀಯ ನಿಕಟಪೂರ್ವ ನಗರಸಭಾ ಸದಸ್ಯ ಸುಂದರ ಕಲ್ಮಾಡಿ, ಅಂಬಲಪಾಡಿ ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯರಾದ ಶಶಿಧರ ಸುವರ್ಣ, ರಾಜೇಶ್ ಸುವರ್ಣ, ಭಾರತಿ ಭಾಸ್ಕರ್, ಸುಂದರ ಪೂಜಾರಿ, ಪ್ರಮೋದ್ ಸಾಲ್ಯಾನ್, ಸುಜಾತ ಶೆಟ್ಟಿ, ಉಷಾ ಶೆಟ್ಟಿ, ಸೋಮನಾಥ ಬಿ.ಕೆ., ಪ್ರಮುಖರಾದ ಪ್ರವೀಣ್ ಕುಮಾರ್ ಶೆಟ್ಟಿ, ಶಿವಕುಮಾರ್ ಅಂಬಲಪಾಡಿ, ವಿನಯ್ ಕಲ್ಮಾಡಿ, ರಾಜೇಂದ್ರ ಪಂದುಬೆಟ್ಟು, ರಾಮರಾಜ್ ಕಿದಿಯೂರು, ಜಗದೀಶ್ ಆಚಾರ್ಯ, ಲಕ್ಷ್ಮೀಶ ಬಂಗೇರ, ದಯಾಶಿನಿ, ಮಾಜಿ ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ವಿಜಯ ಕೊಡವೂರು ಸಹಿತ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.


Spread the love
Subscribe
Notify of

0 Comments