ಸ್ವಚ್ಛ ನಗರಕ್ಕೆ ಪೌರ ಕಾರ್ಮಿಕರ ಶ್ರಮವೇ ಆಧಾರ : ಡೆನಿಸ್ ಡಿಸಿಲ್ವ

Spread the love

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಪೌರ ಕಾರ್ಮಿಕರ ಜೊತೆ ಗಾಂಧೀ ಜಯಂತಿ ಕಾರ್ಯಕ್ರಮ 

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ “ಗೌರವ ನಮನ” ಸಲ್ಲಿಸುವ ಕಾರ್ಯಕ್ರಮವನ್ನು ನಗರದ ಮಲ್ಲಿಕಟ್ಟೆಯಲ್ಲಿರುವ ಮಾರ್ಕೆಟ್ ಕಟ್ಟಡದಲ್ಲಿ   ಆಚರಿಸಲಾಯಿತು.

ಪ್ರಾಸ್ತವಿಕವಾಗಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡೆನಿಸ್ ಡಿಸಿಲ್ವ ಮಾತನಾಡಿ, ಸ್ವಚ್ಛ ನಗರಕ್ಕೆ ಪೌರ ಕಾರ್ಮಿಕರ ಶ್ರಮವೇ ಆಧಾರ. ಅವರ ಸೇವೆಯನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿಯಾಗಿದೆ. ಗಾಂಧೀಜಿ ಯವರು ಪ್ರತಿಪಾದಿಸಿದ ಸ್ವಚ್ಛತೆ, ಸಮಾನತೆಯ ಮೌಲ್ಯಗಳನ್ನು ಕಾರ್ಯ ರೂಪಕ್ಕೆ ತರುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಮಾಜಿ ಶಾಸಕ ಜೆ. ಆರ್. ಲೋಬೊ ಅವರು, ಗಾಂಧೀಜಿಯವರು ಸ್ವಚ್ಛತೆಗೆ ಅತೀ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರು. ಇಂದು ನಗರದ ಸುಂದರೀಕರಣಕ್ಕೆ ಪೌರ ಕಾರ್ಮಿಕರ ಕೊಡುಗೆ ಅವಿಸ್ಮರಣೀಯ. ಅವರು ಮಾಡಿದ ಸೇವೆಯಿಂದಲೇ ಪಾಲಿಕೆಗೆ ಉತ್ತಮ ಹೆಸರು ಬಂದಿದೆ. ಅವರಿಗೆ ಗೌರವಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ ಎಂದರು.

ಇನ್ನೊರ್ವ ಅತಿಥಿ ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ ಅವರು, ಪೌರ ಕಾರ್ಮಿಕರ ಸೇವೆ ನಗರದ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದೆ. ಅವರ ನಿರಂತರ ಸ್ವಚ್ಛತೆ ಕಾರ್ಯದಿಂದ ಮಂಗಳೂರು ತನ್ನದೇ ಆದ ಹೆಸರು ಪಡೆದುಕೊಂಡಿದೆ. ಪ್ರತೀ ದಿನ ಮನೆ ಬಾಗಿಲು ಬಳಿ ಬಂದು ಕಸ ವಿಲೇವಾರಿ ಮಾಡಿಕೊಂಡು ಬಂದಿರುವ ಅವರಿಗೆ ಸಾರ್ವಜನಿಕರು ಸಹಕರಿಸಬೇಕು ಎಂದರು.

ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಎಸ್. ಅಪ್ಪಿ ಸಂದೋರ್ಬಿಚಿತವಾಗಿ ಮಾತನಾಡಿದರು. ಕಾರ್ಯಕ್ರಮ ದಲ್ಲಿ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಗಾಣಿಗ ಅಭಿವೃದ್ಧಿ ಅಧ್ಯಕ್ಷ ವಿಶ್ವಾಸ್ ದಾಸ್, ವಸಂತ್ ಬರ್ನಾಡ್, ಅನಿಲ್ ಕುಡ್ಕೋರಿಗುಡ್ಡೆ , ಪ್ರಕಾಶ್ ಸಾಲ್ಯಾನ್, ಮೋಹನ್ ಕೋಟ್ಯಾನ್, ರಮಾನಂದ ಪೂಜಾರಿ, ಉದಯ ಕುಂದರ್, ಆಸೀಫ್ ಅಹ್ಮದ್, ಟಿ. ಕೆ. ಸುಧೀರ್ ಅಬ್ದುಲ್ ಶಫೀಕ್, ಶುಭೋದಯ ಆಳ್ವ, ಯೋಗೇಶ್ ಕುಮಾರ್, ಕವಿತಾ ವಾಸು, ಶಾಂತಲಾ ಗಟ್ಟಿ, ಚಂದ್ರಕಲಾ ರಾವ್, ರಫೀಕ್ ಕಣ್ಣೂರು, ವಿನೋದ್ ರಾಜ್,ಹರ್ಬಟ್ ಡಿಸೋಜಾ, ಪದ್ಮನಾಭ ಅಮೀನ್, ಗೋಪಾಲಕೃಷ್ಣ ಆಚಾರ್ಯ, ಪ್ರಕಾಶ್ ಕೋಡಿಕಲ್, ಚಂದ್ರಕಲಾ ಜೋಗಿ, ನಾಗೇಶ್ ಪಿ. ಎಸ್., ಉದಯ ಆಚಾರ್ಯ, ಸುಮನ್ ಬೆಂಗ್ರೆ, ಶಬ್ಬೀರ್ ಅಹ್ಮದ್,ಪ್ರಶಾಂತ್ ಸನಿಲ್ ಮೊದಲಾದವರು ಉಪಸ್ಥಿತರಿದ್ದರು. ಹಿರಿಯ ಪೌರ ಕಾರ್ಮಿಕರಾದ ಶ್ರೀಮತಿ ಕಮಲ ಮತ್ತು ಶ್ರೀ ಸೇಸಪ್ಪ ಅವರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಪೌರ ಕಾರ್ಮಿಕರೊಂದಿಗೆ ಸಹ ಭೋಜನ ಸೇವಿಸಲಾಯಿತು.


Spread the love
Subscribe
Notify of

0 Comments