ಕಿಲ್ಪಾಡಿಯಲ್ಲಿ ಕಳ್ಳತನ ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ

Spread the love

ಕಿಲ್ಪಾಡಿಯಲ್ಲಿ ಕಳ್ಳತನ ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ

ಮೂಲ್ಕಿ: ಕಿಲ್ಪಾಡಿ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ಲಕ್ಷಾಂತರ ರೂ. ಮೌಲ್ಯದ ಸೊತ್ತು ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂಲ್ಕಿ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ದಾವಣಗೆರೆ ನಿವಾಸಿಗಳಾದ ಅಬ್ದುಲ್ ಜುಮಾಲ್ (24), ಮಹಮ್ಮದ್ ಆಫ್ರಿದ್ (24) ಬಂಧಿತರು. ಇದುವರೆಗೆ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿದೆ. ಪಡುಬಿದ್ರೆಯ ಕಂಚಿನಡ್ಕ ನಿವಾಸಿ ಜಾಹಿದ್ ಸಿನಾನ್ (26), ಕಾರ್ಕಳ ನಿಟ್ಟೆ ನಿವಾಸಿ ಪ್ರಸ್ತುತ ಕಾರ್ನಾಡ್ ಬಳಿ ವಾಸ್ತವ್ಯವಿರುವ ನಿವಾಸಿ ಯಾಸಿನ್ (36)ರನ್ನು ಈಗಾಗಲೇ ಬಂಧಿಸಲಾದೆ. ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.


Spread the love
Subscribe
Notify of

0 Comments