ಅ.13ರಂದು ಉಚ್ಚಿಲ ದಸರಾ ಕುಸ್ತಿ ಪಂದ್ಯಾಕೂಟ
- ಪುರುಷ ಹಾಗೂ ಮಹಿಳಾ ವಿಭಾಗಗಳಲ್ಲಿ ವಿವಿಧ ತೂಕದ ಸ್ಪರ್ಧೆಗಳು
ಉಚ್ಚಿಲ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ವತಿಯಿಂದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸನ್ನಿಧಿಯಲ್ಲಿ ನಡೆಯಲಿರುವ ಉಡುಪಿ ಉಚ್ಚಿಲ ದಸರಾ ಮಹೋತ್ಸವ-2026ರ ಅಂಗವಾಗಿ ಅ.13ರಂದು ಉಚ್ಚಿಲ ದಸರಾ ಕುಸ್ತಿ ಪಂದ್ಯಾಕೂಟ ಆಯೋಜಿಸಲಾಗಿದೆ.
ಉಡುಪಿ: ಉಭಯ ಜಿಲ್ಲೆಗಳಲ್ಲಿ ಕುಸ್ತಿ ಕ್ರೀಡೆಯನ್ನು ಉತ್ತೇಜಿಸುವ ಉದ್ದೇಶದಿಂದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಕುಸ್ತಿಪಟುಗಳಿಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ. ಪುರುಷರ ವಿಭಾಗದಲ್ಲಿ ‘ಉಚ್ಚಿಲ ದಸರಾ ಕೇಸರಿ’ ಹಾಗೂ ‘ಉಚ್ಚಿಲ ದಸರಾ ಕುಮಾರ್’, ಮಹಿಳೆಯರ ವಿಭಾಗದಲ್ಲಿ ‘ಉಚ್ಚಿಲ ದಸರಾ ಕುವರಿ’ ಪ್ರಶಸ್ತಿಗಾಗಿ ಸ್ಪರ್ಧೆಗಳು ನಡೆಯಲಿವೆ.
ಅ.13ರಂದು ಬೆಳಗ್ಗೆ 8 ಗಂಟೆಗೆ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಮುಂಭಾಗದಲ್ಲಿ ಕುಸ್ತಿ ಪಂದ್ಯಾಕೂಟ ನಡೆಯಲಿದೆ.
ಪುರುಷರ ವಿಭಾಗದಲ್ಲಿ 34ರಿಂದ 38 ಕೆಜಿ, 41 ಕೆಜಿ, 46 ಕೆಜಿ, 50 ಕೆಜಿ, 57 ಕೆಜಿ, 61 ಕೆಜಿ ಹಾಗೂ 65 ಕೆಜಿ ವಿಭಾಗಗಳಲ್ಲಿ ‘ಉಚ್ಚಿಲ ಕುಮಾರ್’ ಪ್ರಶಸ್ತಿಗಾಗಿ ಸ್ಪರ್ಧೆ ನಡೆಯಲಿದೆ. 74 ಕೆಜಿ ವಿಭಾಗದಲ್ಲಿ ‘ಉಚ್ಚಿಲ ದಸರಾ ಕೇಸರಿ’ ಪ್ರಶಸ್ತಿಗಾಗಿ ಸ್ಪರ್ಧೆ ನಡೆಯಲಿದ್ದು, 86 ಕೆಜಿ ಹಾಗೂ 86ರಿಂದ 97 ಕೆಜಿ ವಿಭಾಗಗಳಲ್ಲಿಯೂ ಸ್ಪರ್ಧೆಗಳು ನಡೆಯಲಿವೆ.
ಮಹಿಳೆಯರ ವಿಭಾಗದಲ್ಲಿ 32ರಿಂದ 36 ಕೆಜಿ, 43 ಕೆಜಿ, 46 ಕೆಜಿ ಹಾಗೂ 53 ಕೆಜಿ ವಿಭಾಗಗಳಲ್ಲಿ ‘ಉಚ್ಚಿಲ ದಸರಾ ಕುವರಿ’ ಪ್ರಶಸ್ತಿಗಾಗಿ ಸ್ಪರ್ಧೆ ನಡೆಯಲಿದೆ. ಇದರೊಂದಿಗೆ 59 ಕೆಜಿ, 65 ಕೆಜಿ, 68 ಕೆಜಿ ಹಾಗೂ 68ರಿಂದ 76 ಕೆಜಿ ವಿಭಾಗಗಳಲ್ಲಿಯೂ ಸ್ಪರ್ಧೆಗಳು ನಡೆಯಲಿವೆ.
ಸ್ಪರ್ಧೆಯ ನಿಯಮಗಳು
- ಕುಸ್ತಿ ಪಂದ್ಯಾಕೂಟದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜನಿಸಿದ ಕುಸ್ತಿಪಟುಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ. ಇತರ ಜಿಲ್ಲೆಗಳ ಕ್ರೀಡಾಪಟುಗಳಿಗೆ ಅವಕಾಶ ಇರುವುದಿಲ್ಲ.
- ದೇಹದ ತೂಕ ಪರೀಕ್ಷೆಯ ಸಂದರ್ಭದಲ್ಲಿ ಪ್ರತಿಯೊಬ್ಬ ಸ್ಪರ್ಧಾಳು ಮೂಲ ಆಧಾರ್ ಕಾರ್ಡ್ ಹಾಗೂ ಪಾಸ್ಪೋರ್ಟ್ ಅಳತೆಯ ಭಾವಚಿತ್ರ ತರಬೇಕು. ಯಾವುದೇ ವಿಭಾಗದಲ್ಲಿ ನಾಲ್ಕಕ್ಕಿಂತ ಕಡಿಮೆ ಸ್ಪರ್ಧಾಳುಗಳು ಇದ್ದಲ್ಲಿ ಆ ವಿಭಾಗದ ಸ್ಪರ್ಧೆಯನ್ನು ರದ್ದುಗೊಳಿಸಲಾಗುವುದು.
- ಅಶಿಸ್ತಿನ ವರ್ತನೆ ತೋರುವ ಕುಸ್ತಿಪಟು ಅಥವಾ ಅವರ ತಂಡದ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಪ್ರತಿ ವಿಭಾಗದಲ್ಲಿ ಮೊದಲ ಮೂರು ಸ್ಥಾನ ಪಡೆಯುವ ಸ್ಪರ್ಧಾಳುಗಳಿಗೆ ಮಾತ್ರ ಪದಕ, ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ನೀಡಲಾಗುವುದು. ಸಂಘಟಕರು ಹಾಗೂ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
- ದೇಹದ ತೂಕ ಪರೀಕ್ಷೆ: ಅ.12ರಂದು ಸೋಮವಾರ ಮಧ್ಯಾಹ್ನ 2.30ರಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ. ನಿಗದಿತ ಸಮಯದ ಬಳಿಕ ಆಗಮಿಸುವ ಸ್ಪರ್ಧಾಳುಗಳ ದೇಹದ ತೂಕವನ್ನು ಪರೀಕ್ಷಿಸಲಾಗುವುದಿಲ್ಲ.
- ಕುಸ್ತಿ ಪಂದ್ಯಾಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾಳುಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.













