ಉಡುಪಿ: ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ
ಶಿಕ್ಷಕರ ದಿನಾಚರಣೆಯ ಹಿನ್ನಲೆಯಲ್ಲಿ ಕೊಡಮಾಡುವ ಉಡುಪಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯ ಪಟ್ಟಿಯನ್ನು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಆಡಳಿತ)ರು ಪ್ರಕಟಿಸಿದ್ದಾರೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗ, ಹಿರಿಯ ಪ್ರಾಥಮಿಕ ಶಾಲಾ ವಿಭಾಗ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ತಲಾ 5ರಂತೆ ಒಟ್ಟು 15 ಮಂದಿಗೆ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಸೆ.5ರಂದು ಪ್ರಶಸ್ತಿ ಪ್ರದಾನ ಕಾರ್ಯ ನಡೆಯಲಿದೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗ: ಗಣೇಶ್ ಸಹ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಲಿಮಕ್ಕಿ ಬೈಂದೂರು, ರವಿ ಸಹ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಆಲಡ್ಕ ಬ್ರಹ್ಮಾವರ, ಉಷಾಕುಮಾರಿ ಸಹಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಲ್ಬಾಡಿ ಮೂರು ಕೈ ಕುಂದಾಪುರ, ಸುವಾಸಿನಿ ಸಹಶಿಕ್ಷಕರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಳಕಾಡು ಉಡುಪಿ, ಲೀಲಾವತಿ ನಾಯ್ಕ ಸಹ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಟಿ ಟಿ ರೋಡ್ ಕುಂದಾಪುರ, ಶ್ರೀಕಾಂತ್ ಭಟ್ ಸಹಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆರ್ಮುಂಡೆ ಕಾರ್ಕಳ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗ: ಮಂಜುಳ ಜಯಕರ್, ಪ್ರಭಾರ ಮುಖ್ಯ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೇರೂರು ಬ್ರಹ್ಮಾವರ, ಶೈಲಜಾ ಶೆಟ್ಟಿ ಮುಖ್ಯ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೂಜಾಡಿ ಕುಂದಾಪುರ, ವೀಣಾ ಆರ್ ಸಹ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಯಾ ಕಾರ್ಕಳ, ಪಾರ್ವತಿ ಎಂ ಸಹ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೀಜಾಡಿ – ಪಡು ಕುಂದಾಪುರ, ಸತೀಶ್ಚಂದ್ರ ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡು-ಅಲೆವೂರು ಉಡುಪಿ
ಪ್ರೌಢಶಾಲಾ ವಿಭಾಗ: ಕೃಷ್ಣ ಶೆಟ್ಟಿ ಸಹ ಶಿಕ್ಷಕರು ಕರ್ನಾಟಕ ಪಬ್ಲಿಕ್ ಸ್ಕೂಲ್ ಕೊಕ್ಕರ್ಣೆ ಬ್ರಹ್ಮಾವರ, ರವಿರಾಜ್ ಶೆಟ್ಟಿ ಸಹ ಶಿಕ್ಷಕರು ಕರ್ನಾಟಕ ಪಬ್ಲಿಕ್ ಸ್ಕೂಲ್ ವಂಡ್ಸೆ ಬೈಂದೂರು, ಆರ್ ನಾರಾಯಣ ಶೆಣೈ ಮುಖ್ಯ ಶಿಕ್ಷಕರು ಶ್ರೀಮದ್ ಭುವನೇಂದ್ರ ಪ್ರೌಢ ಶಾಲೆ ಕಾರ್ಕಳ, ಶಾಂತಪ್ಪ ಮೂಲಂಗಿ ಪ್ರಭಾರ ಮುಖ್ಯ ಶಿಕ್ಷಕರು ಯು ಎಸ್ ನಾಯಕ್ ಪ್ರೌಢ ಶಾಲೆ ಪಟ್ಲ ಉಡುಪಿ, ಪಿಯುಸ್ ಡಿಸೋಜಾ ಸಹ ಶಿಕ್ಷಕರು ಸರ್ಕಾರಿ ಪ್ರೌಢ ಶಾಲೆ ಬಸ್ರೂರು ಕುಂದಾಪುರ













