ಉಡುಪಿ ಉಚ್ಚಿಲ ದಸರಾ – 2026 : ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ

Spread the love

ಉಡುಪಿ ಉಚ್ಚಿಲ ದಸರಾ – 2026 : ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ

ಕಾಪು: ಶ್ರೀಕ್ಷೇತ್ರ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಐದನೇ ವರ್ಷದ ಉಡುಪಿ ಉಚ್ಚಿಲ ದಸರಾ 2026ರ ಪ್ರಯುಕ್ತ ನಡೆಯುತ್ತಿರುವ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ ಧಾರ್ಮಿಕ ಕಾರ್ಯಕ್ರಮಕ್ಕೆ ಈ ಬಾರಿಯೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಉಚ್ಚಿಲ ದಸರಾ ರೂವಾರಿ ನಾಡೋಜ ಡಾ| ಜಿ. ಶಂಕರ್‌ಉಪ ಸ್ಥಿತಿಯಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ವೇ | ಮೂ| ರಾಘವೇಂದ್ರ ಉಪಾಧ್ಯಾಯ ಅವರ ಪೌರೋಹಿತ್ಯದೊಂದಿಗೆ ಶಾರದೆ ಮತ್ತು ನವದುರ್ಗೆಯರ ಸಹಿತ ಶ್ರೀ ಮಹಾಲಕ್ಷ್ಮೀ ಮಂಟಪದಲ್ಲಿ ಸಾಮೂಹಿಕ ಕುಂಕುಮಾರ್ಚನೆ ನಡೆದು, ಬಳಿಕ ಮಹಾಮಂಗಳಾರತಿ ಬೆಳಗಿ, ಪ್ರಸಾದ ವಿತರಿಸಲಾಗುತ್ತದೆ.

ಈವರೆಗೆ ಕೋಟ್ಯಂತರ ಸಂಖ್ಯೆ ಯಲ್ಲಿ ಕುಂಕುಮಾರ್ಚನೆ ಸೇವೆ ನಡೆಸಲಾಗಿದೆ. ದಸರಾ ಮುಖ್ಯ ವೇದಿಕೆಯ ಮುಂಭಾಗದಲ್ಲೇ ಪ್ರತೀ ದಿನ ಸಂಜೆ 5.45ರಿಂದ 6.15ರ ವರೆಗೆ ಸಾಮೂಹಿಕ ಕುಂಕುಮಾರ್ಚನೆ ನಡೆಯುತ್ತಿದೆ.

ಮಂಗಳವಾರ ಚಂದ್ರಘಂಟಾ ದೇವಿಯ ಆರಾಧನೆಯಂದು ನಾಡೋಜ ಡಾ| ಜಿ. ಶಂಕರ್ ನೇತೃತ್ವದಲ್ಲಿ ಉದ್ಯಮಿ ಶೇಖರ್ ಸಾಲ್ಯಾನ್ ಎರ್ಮಾಳು ವತಿಯಿಂದ ಸಾಮೂಹಿಕ ಕುಂಕುಮಾರ್ಚನೆ ಸೇವೆ ಯಲ್ಲಿ ಪಾಲ್ಗೊಂಡ ಎರಡು ಸಾವಿರಕ್ಕೂ ಹೆಚ್ಚು ಮಂದಿ ಮಹಿಳೆಯರಿಗೆ ಶೇಷವಸ್ತ್ರ ಸಹಿತ ಬಳೆ, ಅರಸಿನ, ಕುಂಕುಮ ವಿತರಿಸಲಾಯಿತು.

ದ.ಕ. ಮೊಗವೀರ ಮಹಾಜನ ಸಂಘದ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮಹಿಳಾ ಸಂಚಾಲಕಿ ಸಂಧ್ಯಾದೀಪ ಸುನಿಲ್, ಪ್ರಮುಖರಾದ ಶಾಲಿನಿ ಜಿ. ಶಂಕರ್, ಮೋಹನ್ ಬೇಂದ್ರೆ, ಶರಣ್ ಕುಮಾರ್‌ಮಟ್ಟು, ರತ್ನಾಕರ್‌ಸಾಲ್ಯಾನ್, ವಾಸುದೇವ ಸಾಲ್ಯಾನ್, ಗುಂಡು ಬಿ. ಅಮೀನ್, ಕವಿತಾ ಶರತ್, ಸುಗುಣಾ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.


Spread the love
Subscribe
Notify of

0 Comments