ಮಂಗಳೂರಿನಲ್ಲಿ ತುಳುವಿನಲ್ಲಿ ಭಾಷಣ ಆರಂಭಿಸಿದ ಕೇಂದ್ರ ಸಚಿವ ಸುರೇಶ್ ಗೋಪಿ; ಕರಾವಳಿಗರ ಮನಗೆದ್ದ ಆತ್ಮೀಯ ಮಾತು

Spread the love

ಮಂಗಳೂರಿನಲ್ಲಿ ತುಳುವಿನಲ್ಲಿ ಭಾಷಣ ಆರಂಭಿಸಿದ ಕೇಂದ್ರ ಸಚಿವ ಸುರೇಶ್ ಗೋಪಿ; ಕರಾವಳಿಗರ ಮನಗೆದ್ದ ಆತ್ಮೀಯ ಮಾತು

ಮಂಗಳೂರು: ಮಂಗಳೂರಿನಲ್ಲಿ ನಡೆದ ಬಿಜೆಪಿ ಬೃಹತ್ ಪಾದಯಾತ್ರೆ ಹಾಗೂ ಸಾರ್ವಜನಿಕ ಸಮಾವೇಶದಲ್ಲಿ ಕೇಂದ್ರ ಸಚಿವ ಹಾಗೂ ಮಲಯಾಳಂ ಚಿತ್ರನಟ ಸುರೇಶ್ ಗೋಪಿ ಅವರು ತುಳುವಿನಲ್ಲಿ ಭಾಷಣ ಆರಂಭಿಸುವ ಮೂಲಕ ಕರಾವಳಿಗರ ಗಮನ ಸೆಳೆದರು.

ಬಿಜೆಪಿ ಮಂಗಳೂರು ವಿಭಾಗದ ವತಿಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬಿಜೆಪಿ ಕಾರ್ಯಕರ್ತರಿಗಾಗಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆರಂಭದಲ್ಲೇ ತುಳುವಿನಲ್ಲಿ ಆತ್ಮೀಯವಾಗಿ ಸಂಭಾಷಿಸಿದರು.

YouTube player

“ಮಾತೆರೆಗ್ಲಾ ನಮಸ್ಕಾರ, ಎಂಚ ಉಲ್ಲರ್, ಸೌಖ್ಯ?” ಎಂದು ತುಳುವಿನಲ್ಲಿ ನೆರೆದಿದ್ದ ಜನರನ್ನು ಮಾತನಾಡಿಸಿದ ಅವರು, “ದೇವೆರ್ನ ಆಶೀರ್ವಾದ ಮಾತೆರೆಗ್ಲಾ ಇಪ್ಪಡ್” ಎಂದು ತುಳುವಿನಲ್ಲೇ ಶುಭ ಹಾರೈಸಿದರು. ಅವರ ಈ ಮಾತುಗಳು ಸಭೆಯಲ್ಲಿ ನೆರೆದಿದ್ದ ಕರಾವಳಿಗರಲ್ಲಿ ಸಂತಸ ಮೂಡಿಸಿದವು.

ನಗರದಲ್ಲಿ “ಪ್ರಜಾಪ್ರಭುತ್ವವನ್ನು ಉಳಿಸಿ, ಅರಾಜಕತೆ ಅಳಿಸಿ” ಎಂಬ ಘೋಷವಾಕ್ಯದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ತುಳುವಿನ ಮೂಲಕ ಸ್ಥಳೀಯ ಜನರೊಂದಿಗೆ ಆತ್ಮೀಯತೆ ಹಂಚಿಕೊಂಡ ಸುರೇಶ್ ಗೋಪಿ ಅವರ ಭಾಷಣ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಯಿತು.


Spread the love
Subscribe
Notify of

0 Comments