ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ವರ್ಗಾವಣೆ, ಚೇತನ್ ಆರ್ ನೂತನ ಐಜಿಪಿ

Spread the love

ಮಂಗಳೂರು: ರಾಜ್ಯ ಸರ್ಕಾರ ಪೊಲೀಸ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ನಡೆಸಿದ್ದು, ಹಲವು ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಹೊಸ ಜವಾಬ್ದಾರಿಗಳನ್ನು ನೀಡಿದೆ. ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಒಂದೇ ಸಲಕ್ಕೆ ಬರೋಬ್ಬರಿ 15 ಐಪಿಎಸ್ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಿ ಮಹತ್ವದ ಆದೇಶ ಹೊರಡಿಸಿದೆ. ಈ ಮೂಲಕ ಗೃಹ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ.

ಪಶ್ಚಿಮ ವಲಯ ಐಜಿಪಿ ಆಗಿದ್ದ ಅಮಿತ್ ಸಿಂಗ್ ಅವರನ್ನು ವರ್ಗಾವಣೆ ಮಾಡಿದ್ದು ಅವರ ಸ್ಥಾನಕ್ಕೆ 2010 ಬ್ಯಾಚಿನ ಐಪಿಎಸ್ ಅಧಿಕಾರಿ ಚೇತನ್ ಆರ್ ಅವರನ್ನು ನಿಯುಕ್ತಿಗೊಳಿಸಿದೆ.

ನಿರ್ಗಮನ ಐಜಿಪಿ ಅಮಿತ್ ಸಿಂಗ್ ಅವರನ್ನು ರಾಜ್ಯ ರಿಸರ್ವ್ ಪೊಲೀಸ್ ಐಜಿಪಿಯಾಗಿ ವರ್ಗಾವಣೆಗೊಳಿಸಿದೆ.

ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಉಪ ಆಯುಕ್ತರಾಗಿದ್ದ ಮಿಥುನ್ ಎಚ್.ಎನ್. ಅವರನ್ನು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಳಿಸಲಾಗಿದೆ. ಮಿಥುನ್ ಅವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಸದ್ಯ ಯಾರನ್ನೂ ನಿಯೋಜಿಸಿಲ್ಲ.

ಮುಖ್ಯವಾಗಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾಗಿದ್ದ ಎನ್ ಶಶಿಕುಮಾರ್ ಅವರನ್ನೂ ಸಹ ವರ್ಗಾವಣೆ ಮಾಡಲಾಗಿದ್ದು, ಇವರ ಜಾಗಕ್ಕೆ ಭೂಷಣ್ ಬೊರಸೆ ಅವರನ್ನು ನೇಮಕ ಮಾಡಲಾಗಿದೆ. ಇನ್ನು ಶಶಿಕುಮಾರ್ ಅವರಿಗೆ ಸರ್ಕಾರ ಇನ್ನೂ ಯಾವುದೇ ಸ್ಥಳ ತೋರಿಸದೇ ವರ್ಗಾಯಿಸಿದೆ.

ಯಾರು- ಎಲ್ಲಿಗೆ ವರ್ಗಾವಣೆ?

  • ಪಿ.ಹರಿಶೇಖರನ್, (ಎಡಿಜಿಪಿ)- ಡಿಸಿಆರ್​ಇಗೆ ವರ್ಗಾವಣೆ
  • ನಂಜುಂಡಸ್ವಾಮಿ (ಎಡಿಜಿಪಿ)– ಮಾನವಹಕ್ಕುಗಳ ಆಯೋಗ
  • ದಿವ್ಯಜ್ಯೋತಿ ರೇ-(ಎಡಿಜಿಪಿ), ಅಪರಾಧ ಮತ್ತು ತಾಂತ್ರಿಕ ವಿಭಾಗ
  • ಅಮಿತ್ ಸಿಂಗ್, (ಐಜಿಪಿ)- ಕೆಎಸ್ಆರ್​ಪಿ
  • ಆರ್.ಚೇತನ್, (ಐಜಿಪಿ)– ಪಶ್ಚಿಮ ವಲಯ, ಮಂಗಳೂರು
  • ನಿಕ್ಕಮ್ ಪ್ರಕಾಶ್, (ಐಜಿಪಿ)– ಪೊಲೀಸ್ ಆಯುಕ್ತ, ಬೆಳಗಾವಿ
  • ಭೂಷಣ್ ಬೊರಸೆ, (ಡಿಐಜಿಪಿ) – ಆಯುಕ್ತ, ಹುಬ್ಬಳ್ಳಿ-ಧಾರವಾಡ
  • ಡಿಐಜಿಪಿ ಎನ್.ಶಶಿಕುಮಾರ್​ಗೆ ಸ್ಥಳ ತೋರಿಸದೆ ವರ್ಗಾವಣೆ
  • ಶಿವಪ್ರಕಾಶ ದೇವರಾಜ್, ಎಸ್​ಪಿ, ಮಾದಕದ್ರವ್ಯ ನಿಗ್ರಹ ಪಡೆ
  • ಪದ್ಮಿನಿ ಸಾಹು, ಪೊಲೀಸ್ ವರಿಷ್ಠಾಧಿಕಾರಿ)- ಚಿಕ್ಕಬಳ್ಳಾಪುರ
  • ಆರ್.ಶ್ರೀನಿವಾಸಗೌಡ, (ಡಿಸಿಪಿ) ಸಿಸಿಬಿ-1 ಬೆಂಗಳೂರು
  • ಡಾ.ಶಿವಕುಮಾರ್, (ಎಸ್​ಪಿ) -ಕರ್ನಾಟಕ ಲೋಕಾಯುಕ್ತ
  • ಕುಶಲ್ ಚೌಕ್ಸೆ, (ಡಿಸಿಪಿ);ಆಡಳಿತ ವಿಭಾಗ, ಬೆಂಗಳೂರು
  • ಸಾಹಿಲ್ ಬಾಗ್ಲಾ, ಪೊಲೀಸ್ ವರಿಷ್ಠಾಧಿಕಾರಿ, ಕೊಪ್ಪಳ
  • ರೋಹನ್ ಜಗದೀಶ್ (ಎಸ್​ಪಿ)- ಬೆಂಗಳೂರು ದಕ್ಷಿಣ ಜಿಲ್ಲೆ
  • ಹೆಚ್.ಎನ್.ಮಿಥುನ್, ಪೊಲೀಸ್ ವರಿಷ್ಠಾಧಿಕಾರಿ- ಗದಗ

Spread the love