ಕೈಕಂಬದ ಜೀವದಾನ ಚಾರಿಟೇಬಲ್ ಟ್ರಸ್ಟ್‌ನಿಂದ ಮಹಿಳೆ ನಾಪತ್ತೆ

Spread the love

ಕೈಕಂಬದ ಜೀವದಾನ ಚಾರಿಟೇಬಲ್ ಟ್ರಸ್ಟ್‌ನಿಂದ ಮಹಿಳೆ ನಾಪತ್ತೆ

ಮಂಗಳೂರು: ಕೈಕಂಬದ ಜೀವದಾನ ಚಾರಿಟೇಬಲ್ ಟ್ರಸ್ಟ್‌ನಲ್ಲಿ ದಾಖಲಾಗಿದ್ದ ಲಲಿತಾ (52) ಎಂಬ ಮಹಿಳೆ ನವೆಂಬರ್ 2ರಂದು ಯಾರ ಗಮನಕ್ಕೂ ಬಾರದೆ ಸಂಸ್ಥೆಯಿಂದ ಹೊರಹೋಗಿ ನಾಪತ್ತೆಯಾಗಿದ್ದಾರೆ. ಈ ಕುರಿತು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಲಿತಾ ಅವರು ಎಚ್‌ಐವಿ ಸೋಂಕಿತರಾಗಿದ್ದು, ಪುತ್ತೂರು ಸರ್ಕಾರಿ ಆಸ್ಪತ್ರೆಯಿಂದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಶಿಫಾರಸು ಪತ್ರದೊಂದಿಗೆ ಜೀವದಾನ ಟ್ರಸ್ಟ್‌ಗೆ ದಾಖಲಿಸಲಾಗಿತ್ತು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ನಾಪತ್ತೆಯಾದ ಮಹಿಳೆಯ ಚಹರೆ ಸುಮಾರು 4.8 ಅಡಿ ಎತ್ತರ, ಬಿಳಿ ಮೈಬಣ್ಣ ಹಾಗೂ ಅಂಡಾಕಾರದ ಮುಖ ಹೊಂದಿದ್ದಾರೆ. ನಾಪತ್ತೆಯಾದ ದಿನ ಮರೂನ್ ಬಣ್ಣದ, ಕಡು ಹಸಿರು ಅಂಚು ಹೊಂದಿರುವ ಸೀರೆ ಮತ್ತು ಕಪ್ಪು ಬಣ್ಣದ ರವಿಕೆ ಧರಿಸಿದ್ದರು. ಅವರು ಹಿಂದಿ, ಕನ್ನಡ ಹಾಗೂ ತೆಲುಗು ಭಾಷೆ ಮಾತನಾಡುತ್ತಾರೆ.

ಮಹಿಳೆಯ ಬಗ್ಗೆ ಯಾವುದೇ ಮಾಹಿತಿ ಲಭಿಸಿದಲ್ಲಿ ಬಜಪೆ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments