Spread the love
ವಿಶ್ವ ಕೊಂಕಣಿ ಸಂಗೀತ ಮಹಾಮೇಳ: 100 ಗಂಟೆಗಳ ನಿರಂತರ ಗಾಯನ ಪೂರ್ಣ, ಗಿನ್ನೆಸ್ ದಾಖಲೆಯತ್ತ ಮುನ್ನಡೆ
ಮಂಗಳೂರು: ನಗರದ ಪುರಭವನದಲ್ಲಿ ಮಾಂಡ್ ಸೊಭಾಣ್ ಸಂಸ್ಥೆಯು ದಿ. ಎರಿಕ್ ಒಝೇರಿಯೊ ಅವರ ಸ್ಮರಣಾರ್ಥ ಆಯೋಜಿಸಿರುವ 12 ದಿನ, 12 ಗಂಟೆ, 12 ನಿಮಿಷಗಳ ವಿಶ್ವ ಕೊಂಕಣಿ ಸಂಗೀತ ಮಹಾಮೇಳದಲ್ಲಿ ನಡೆಯುತ್ತಿರುವ ಕೊಂಕಣಿ ಮಾತೃಭಾಷಿಕರ ನಿರಂತರ ಸಂಭಾಷಣೆ ಹಾಗೂ ಗಾಯನದ ಗಿನ್ನೆಸ್ ವಿಶ್ವ ದಾಖಲೆಯ ಪ್ರಯತ್ನವು 100 ಗಂಟೆಗಳನ್ನು ಪೂರ್ಣಗೊಳಿಸಿದೆ.

ಗಿನ್ನೆಸ್ ವಿಶ್ವ ದಾಖಲೆಯ ಗುರಿಯೊಂದಿಗೆ ನಡೆಯುತ್ತಿರುವ ಈ ನಿರಂತರ ಕಾರ್ಯಕ್ರಮವು ಮಹತ್ವದ ಮೈಲಿಗಲ್ಲು ತಲುಪಿದ್ದು, ದಾಖಲೆಯತ್ತ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
100 ಗಂಟೆಗಳ ನಿರಂತರ ಗಾಯನ ಪೂರ್ಣಗೊಂಡ ಸಂದರ್ಭದಲ್ಲಿ ಬೆಳಿಗ್ಗೆ 10 ಗಂಟೆಗೆ ಕೊಂಕಣಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಮೂಲಕ ಮಹಾಮೇಳದ ಸಂಭ್ರಮ ಮತ್ತಷ್ಟು ಹೆಚ್ಚಾಯಿತು.
Spread the love













