56 ಇಂಚಿನ ಎದೆಯನ್ನು ಕುಗ್ಗಿಸಿದ ಝೆನ್ ಝೀ ಹೋರಾಟ- ಸಂತೋಷ್ ಬಜಾಲ್

Spread the love

56 ಇಂಚಿನ ಎದೆಯನ್ನು ಕುಗ್ಗಿಸಿದ ಝೆನ್ ಝೀ ಹೋರಾಟ- ಸಂತೋಷ್ ಬಜಾಲ್

ಮಂಗಳೂರು: ಎಸ್ಐಆರ್ ರದ್ಧತಿಗೆ ಆಗ್ರಹಿಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ದೇಶದಾದ್ಯಂತ ನಡೆಯುತ್ತಿರುವ ಎಸ್ ಎಫ್ ಐ, ಡಿ ವೈ ಎಫ್ ಐ ಸೇರಿದಂತೆ ಎಡಪಂಥೀಯ ಸಂಘಟನೆಗಳು ರಾಜ್ಯವ್ಯಾಪಿ ಹೋರಾಟಕ್ಕೆ ಕರೆನೀಡಿದ ಭಾಗವಾಗಿ ಇಂದು (09-10-26) ಎಸ್ಎಫ್ಐ, ಡಿವೈಎಫ್ಐ ನೇತೃತ್ವದಲ್ಲಿ ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನೆಯು ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಡಿವೈಎಫ್ ಐನ ರಾಜ್ಯ ಕಾರ್ಯದರ್ಶಿಯಾದ ಸಂತೋಷ್ ಬಜಾಲ್ ಮಾತನಾಡುತ್ತಾ ದೇಶದ ನಾಗರಿಕತ್ವ ಕಾನೂನು ವಿರೋಧಿ, ಸಂವಿಧಾನ ವಿರೋಧಿ ಎಸ್ಐಆರ್ ವಿರುದ್ಧ ನಡೆಯುತ್ತಿರುವ ದೇಶದ ಹೋರಾಟವನ್ನು ಹತ್ತಿಕ್ಕಲಾಗುತ್ತಿದೆ. ಚಳುವಳಿಗಳನ್ನು ಹತ್ತಿಕ್ಕುವ ಸಲುವಾಗಿ ದೆಹಲಿಯ 57 ಸ್ಟೇಷನ್ಗಳಲ್ಲಿ ಮೆಟ್ರೋ ರೈಲು ತಡೆ ಹಿಡಿಯಲಾಗಿದೆ. ವಿವಿಧ ರಾಜ್ಯಗಳಿಂದ ದೆಹಲಿಗೆ ತೆರಳುವ ರೈಲು, ವಿಮಾನಯಾನವನ್ನು ರದ್ದುಗೊಳಿಸಲಾಗಿದೆ. ಅಲ್ಲದೇ ದೆಹಲಿ ಹೋರಾಟಕ್ಕೆ ತೆರಳುತ್ತಿರುವ ಡಿವೈಎಫ್ಐ, ಎಸ್ಎಫ್ಐ ಸಹಿತ ಹೋರಾಟಗಾರರನ್ನು ಬಂಧಿಸಲಾಗಿದೆ. ಅಲ್ಲದೇ ದೆಹಲಿ ಗಡಿಭಾಗದಲ್ಲಿ ತಡೆಯುವ, ಇಂಟರ್ ನೆಟ್ ಕಡಿತ ಮಾಡುವ ಮೂಲಕ ಅಘೋಷಿತ ತುರ್ತು ಪರಿಸ್ಥಿತಿ ಹೇರಿರುವ ಕೇಂದ್ರ ಸರಕಾದ ನಡೆಯನ್ನು ಖಂಡಿಸಿದರು. ವಿದ್ಯಾರ್ಥಿಗಳು ದೆಹಲಿಯಲ್ಲಿ ನಡೆಸಲಿರುವ ಹೋರಾಟವು ಕೇಂದ್ರದ ಅಧಿಕಾರದ ಗದ್ದುಗೆಯಲ್ಲಿ ಕೂತಿರುವ 56 ಇಂಚಿನ ಎದೆಯಲ್ಲು ಭಯ ಹುಟ್ಟಿಸಿದೆ ಎಂದು ಟೀಕಿಸಿದರು.

ದೇಶದ ರಾಜಧಾನಿ ದೆಹಲಿಯು ಅಕ್ಷರಶಃ ರಣರಂಗವಾಗಿದ್ದು ಬೀದಿ ಬೀದಿಗಳಲ್ಲಿ ಬಹುಗಾತ್ರದ ಬ್ಯಾರಿಗೆಟ್ಗಳ ಕೋಟೆ ನಿರ್ಮಿಸಿ ಸಾವಿರಾರು ಸಂಖ್ಯೆಯಲ್ಲಿ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಗಳನ್ನು ನೇಮಿಸುವ ಮೂಲಕ ಹೋರಾಟವನ್ನು ಹತ್ತಿಕ್ಕಲು ನಡೆಸುತ್ತಿರುವ ಬೆಳವಣೆಗೆಯು ಹಿಂದೆ ಭಾರತದಲ್ಲಿ ಬ್ರಿಟಿಷ್ ಸರ್ಕಾರವು ಹೇರಿದ್ದ ರೌಲತ್ ಕಾಯ್ದೆಯನ್ನು ನೆನಪಿಸುತ್ತದೆ. ಬ್ರಿಟೀಷರ ವಿರುದ್ದ ನಡೆದ ದೇಶಿಯ ಚಳುವಳಿಯನ್ನು ಹತ್ತಿಕ್ಕಿದ ವಿಧಾನಕ್ಕಿಂತಲೂ ಇದು ಅತೀ ಕ್ರೂರವಾಗಿದೆ. ಆದರೆ ದೇಶದ ವಿದ್ಯಾರ್ಥಿಗಳು ಸಂಘಟಿಸುವ ಝೆನ್ಸೀ ಹೋರಾಟವು ಯಾವುದಕ್ಕು ಜಗ್ಗದೆ ಮುನ್ನುಗುತ್ತಿರುವ ನಡೆಯು ವಿಶ್ವಗುರು 56 ಇಂಚಿನ ನರೇಂದ್ರ ಮೋದಿಯ ಎದೆಯನ್ನು ಕುಗ್ಗಿಸಿದೆ ಎಂದರು.

ಡಿ ವೈ ಎಫ್ ಐ ನ ಜಿಲ್ಲಾ ಅಧ್ಯಕ್ಷರಾದ ಮನೋಜ್ ವಾಮಂಜೂರ್ ಮಾತನಾಡುತ್ತಾ ದೇಶದ ಇತಿಹಾಸದಲ್ಲಿ ಯಾವುದೇ ಕಾಲದಲ್ಲೂ ಕೂಡ ಚುನಾವಣಾ ಆಯೋಗವು ದೇಶದ ಪೌರತ್ವವನ್ನು ನಿರ್ಧರಿಸಿಲ್ಲ. ಆದರೆ ಎಸ್ಐಆರ್ ಮೂಲಕ ಗ್ಯಾನೇಶ್ ನೇತ್ರತ್ವದ ಚುನಾವಣಾ ಆಯೋಗವು ದೇಶದ ಪೌರತ್ವವನ್ನೇ ಪ್ರಶ್ನಿಸುತ್ತಿದ್ದು ಇದು ಭಾರತದ ಆದಿವಾಸಿ, ಅಲೆಮಾರಿ, ಅಲ್ಪಸಂಖ್ಯಾತ ಮತ್ತು ಬಡವರ ಮತಗಳನ್ನು ಕಸಿದು ಕೊಳ್ಳುತ್ತಿದ್ದು ಈ ಮೂಲಕ ದೇಶ ಕಟ್ಟಿದ ಅವರನ್ನು ದೇಶದಿಂದ ಹೊರ ದೂಡುವ ಕೆಸವನ್ನು ಮಾಡುತ್ತಿದೆ ಇದರ ವಿರುಧ್ದದ ಹೋರಾಟಗಳು ಮೋದಿಯ ಮುಖದಲ್ಲೂ ಬೆವರಿಳಿಸುತ್ತಿದ್ದು ಈ ಚಳುವಳಿಯು ದೇಶವನ್ನು ಮತ್ತೆ ಕಟ್ಟುವ ಪ್ರೀತಿ ತುಂಬಿದ ಚಳುವಳಿಯಾಗಿದೆ ಎಂದರು.


Spread the love
Subscribe
Notify of

0 Comments