ಅಕ್ರಮ ಗೋಹತ್ಯೆ ಪ್ರಕರಣ: ಮನೆ, ದನದ ಕೊಟ್ಟಿಗೆ ಜಪ್ತಿ

Spread the love

ಅಕ್ರಮ ಗೋಹತ್ಯೆ ಪ್ರಕರಣ: ಮನೆ, ದನದ ಕೊಟ್ಟಿಗೆ ಜಪ್ತಿ

ಬಂಟ್ವಾಳ: ಅಕ್ರಮ ಗೋಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯ ನಡೆದ ಸ್ಥಳವನ್ನು ಪೊಲೀಸರು ಜಪ್ತಿ ಮಾಡುವ ಮೂಲಕ ಮಹತ್ವದ ಕ್ರಮ ಕೈಗೊಂಡಿದ್ದಾರೆ.

ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅಪರಾಧ ಸಂಖ್ಯೆ 68/2026ರ ಪ್ರಕರಣದಲ್ಲಿ, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020ರ ಕಲಂ 4, 7 ಹಾಗೂ 12ರಡಿ ತನಿಖೆ ನಡೆಯುತ್ತಿದೆ.

ಪ್ರಕರಣದ ತನಿಖೆಯ ಭಾಗವಾಗಿ ಬಂಟ್ವಾಳ ತಾಲೂಕಿನ ಸಜೀಪ ಮೂಡಾ ಗ್ರಾಮದ ಕೊಳಕೆ ಪಂಜಾಜೆ ಪ್ರದೇಶದಲ್ಲಿರುವ ಆರೋಪಿ ಮುಸ್ತಫಾ ಬಾಬ್ತು ಅವರ ಮನೆ ಹಾಗೂ ದನದ ಕೊಟ್ಟಿಗೆಯನ್ನು ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020’ರ ಕಲಂ 8(1)ರ ಅನ್ವಯ ಜಪ್ತಿ ಮಾಡಲಾಗಿದೆ.

ಜಪ್ತಿ ಕ್ರಮದ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಸಲುವಾಗಿ ಮಂಗಳೂರು ಉಪವಿಭಾಗದ ಮಾನ್ಯ ಉಪ ವಿಭಾಗೀಯ ದಂಡಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


Spread the love
Subscribe
Notify of

0 Comments