ಅಡ್ಯಾರ್ ಕಣ್ಣೂರಿನಲ್ಲಿ ಮಂಗಳೂರಿಗೆ ನೀರು ಪೂರೈಸುವ ಪೈಪ್ ಲೈನ್ ಬ್ಲಾಸ್ಟ್ ; ಎರಡು ದಿನಗಳಿಂದ ನೀರು ವ್ಯತ್ಯಯ
ಮಂಗಳೂರು: ನೀರು ವ್ಯತ್ಯಯದಿಂದಾಗಿ ಪಡೀಲ್, ಮರೋಳಿ, ಕಂಕನಾಡಿ, ಮಂಗಳಾದೇವಿ, ಜೆಪ್ಪು ಪನ್ನೀರ್, ಮುಳಿಹಿತ್ತು ಬೋಳಾರ, ಕಾರ್ ಸ್ಟ್ರೀಟ್, ಮಣ್ಣಗುಡ್ಡ, ಪಾಂಡೇಶ್ವರ, ಸ್ಟೇಟ್ ಬ್ಯಾಂಕ್, ಶಕ್ತಿನಗರ, ಕಣ್ಣೂರು, ಬಜಾಲ್, ಜಪ್ಪಿನಮೊಗರು, ಅಳಪೆ, ಅತ್ತಾವರ, ಉಲ್ಲಾಸ್ ನಗರ, ಚಿಲಿಂಬಿ, ಕೋಡಿಕಲ್, ಉರ್ವಾ ಸ್ಟೋರ್, ಅಶೋಕನಗರ, ಕುಡುಪು, ವಾಮಂಜೂರು, ಬೋಂದೆಲ್, ಕಾವೂರು, ಮರಕದ ಮುಂತಾದ ಭಾಗದಲ್ಲಿ ನೀರು ಸರಬರಾಜಿನಲ್ಲಿ ತೊಂದರೆಯಾಗಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರು ಮಹಾನಗರಕ್ಕೆ ನೀರು ಪೂರೈಸುವ ತುಂಬೆ ರೇಚಕ ಸ್ಥಾವರದಿಂದ ಸಂಪರ್ಕಿಸುವ 1100 ಮಿಮೀ ವ್ಯಾಸದ ಮುಖ್ಯ ಕೊಳವೆ ಅಡ್ಯಾರ್ ಕಣ್ಣೂರಿನಲ್ಲಿ ಒಡೆದು ಹೋಗಿದೆ. ಖಾಸಗಿ ಜಮೀನಿನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಈ ವೇಳೆ ನೀರಿನ ಪೈಪ್ ಮೇಲೆ ಮಣ್ಣು ತುಂಬಿದ್ದರಿಂದ ಹಾನಿಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕಳೆದ ಬಾರಿ ಎನ್ನಾರ್ಸಿ ವಿರುದ್ಧ ನಡೆದ ಪ್ರತಿಭಟನೆಗೆ ಬಳಕೆಯಾಗಿದ್ದ ಮೈದಾನದಲ್ಲಿ ಖಾಸಗಿಯವರು ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದಾರೆ. ಇದಕ್ಕಾಗಿ ಭಾರೀ ಪ್ರಮಾಣದಲ್ಲಿ ಹೆದ್ದಾರಿಗೆ ಸಂಪರ್ಕಕ್ಕಾಗಿ ಮಣ್ಣು ಹಾಕಲಾಗಿದೆ. ತುಂಬೆಯಿಂದ ನೀರು ಪೂರೈಸುವ ಕೊಳವೆಯ ಮೇಲಿನಿಂದಲೇ ಮಣ್ಣು ತುಂಬಿದ್ದು ಜೆಸಿಬಿ, ಟಿಪ್ಪರ್ ಇನ್ನಿತರ ವಾಹನಗಳ ಸಾಗಾಟದಿಂದಾಗಿ ಪೈಪ್ ಒಡೆದು ಹೋಗಿದೆ.
ಭಾನುವಾರ ರಾತ್ರಿಯಿಂದ ನೀರು ಹೊರ ಚೆಲ್ಲುತ್ತಿದ್ದು ಎರಡು ದಿನಗಳಿಂದ ನೀರು ನಿಲ್ಲಿಸಲಾಗದೆ ಪಾಲಿಕೆಯ ಅಧಿಕಾರಿಗಳು ಪರದಾಡಿದ್ದಾರೆ. ಸ್ಥಳದಲ್ಲಿ ನೀರು ಭಾರೀ ಪ್ರಮಾಣದಲ್ಲಿ ಶೇಖರಣೆಯಾಗಿದ್ದು ಅದನ್ನು ಹೊರಗೆ ಹಾಕುವುದಕ್ಕಾಗಿ ಪಂಪ್ ಇಡಲಾಗಿದೆ. ಇದರಿಂದಾಗಿ ಮಂಗಳೂರು ನಗರಕ್ಕೆ ನೀರು ವ್ಯತ್ಯಯವಾಗಿದ್ದು ಮಂಗಳವಾರ ಸಂಜೆಯಿಂದ ದುರಸ್ತಿ ಕಾರ್ಯ ನಡೆದಿದ್ದು ನ.19ರ ಬುಧವಾರ ಸಂಜೆ ವೇಳೆಗೆ ಸರಿಪಡಿಸಬಹುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ನೀರು ವ್ಯತ್ಯಯದಿಂದಾಗಿ ಪಡೀಲ್, ಮರೋಳಿ, ಕಂಕನಾಡಿ, ಮಂಗಳಾದೇವಿ, ಜೆಪ್ಪು ಪನ್ನೀರ್, ಮುಳಿಹಿತ್ಯು ಬೋಳಾರ, ಕಾರ್ ಸ್ಟ್ರೀಟ್, ಮಣ್ಣಗುಡ್ಡ, ಪಾಂಡೇಶ್ವರ, ಸ್ಟೇಟ್ ಬ್ಯಾಂಕ್, ಶಕ್ತಿನಗರ, ಕಣ್ಣೂರು, ಬಜಾಲ್, ಜಪ್ಪಿನಮೊಗರು, ಅಳಪೆ, ಅತ್ತಾವರ, ಉಲ್ಲಾಸ್ ನಗರ, ಚಿಲಿಂಬಿ, ಕೋಡಿಕಲ್, ಉರ್ವಾ ಸ್ಟೋರ್, ಅಶೋಕನಗರ, ಕುಡುಪು, ವಾಮಂಜೂರು, ಬೋಂದೆಲ್, ಕಾವೂರು, ಮರಕದ ಮುಂತಾದ ಭಾಗದಲ್ಲಿ ನೀರು ಸರಬರಾಜಿನಲ್ಲಿ ತೊಂದರೆಯಾಗಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ನೀರು ಪೂರೈಸುವ ಪೈಪ್ ಮೇಲೆ ಮಣ್ಣು ಹಾಕುವುದಕ್ಕೆ ಅವಕಾಶ ಇಲ್ಲ. ಆದರೆ ತುಂಬೆಯಿಂದ ಹೆದ್ದಾರಿ ಉದ್ದಕ್ಕೂ ಇರುವ ನೀರಿನ ಪೈಪ್ ಮೇಲೆ ಅಲ್ಲಲ್ಲಿ ಅಕ್ರಮವಾಗಿ ಮಣ್ಣು ಹಾಕಲಾಗಿದೆ. ಈ ಜಾಗದಲ್ಲಿ ಇತ್ತೀಚೆಗೆ ಮಣ್ಣು ತುಂಬಿ ಅದರ ಬೆನ್ನಲ್ಲೇ ಟಿಪ್ಪರ್, ಜೆಸಿಬಿ ಚಲಿಸಿದ್ದರಿಂದ ಒತ್ತಡ ಬಿದ್ದು ಪೈಪ್ ಒಡೆದಿದೆ ಎನ್ನಲಾಗುತ್ತಿದೆ.













