ಆ.1 ರಿಂದ ಮೀನುಗಾರಿಗೆ ಋುತು ಆರಂಭ: ಆ.10ರ ಬಳಿಕ ಪರ್ಸಿನ್‌ ಮೀನುಗಾರಿಕೆ, ಹವಾಮಾನ ಗಮನಿಸಿ ಟ್ರಾಲ್‌ ಫಿಶಿಂಗ್‌

Spread the love

ಆ.1 ರಿಂದ ಮೀನುಗಾರಿಗೆ ಋುತು ಆರಂಭ: ಆ.10ರ ಬಳಿಕ ಪರ್ಸಿನ್‌ ಮೀನುಗಾರಿಕೆ, ಹವಾಮಾನ ಗಮನಿಸಿ ಟ್ರಾಲ್‌ ಫಿಶಿಂಗ್‌

ಮಂಗಳೂರು: 2 ತಿಂಗಳ ನಿಷೇಧದ ಬಳಿಕ ಕರಾವಳಿಯಲ್ಲಿ ಆಗಸ್ಟ್ 1 ರಿಂದ 2025ರ ಸಾಲಿನ ಮೀನುಗಾರಿಕೆ ಋತು ಆರಂಭವಾಗಲಿದೆ. ಹವಾಮಾನದ ವೈಪರೀತ್ಯಗಳನ್ನು ಗಮನದಲ್ಲಿಟ್ಟುಕೊಂಡು ಟ್ರಾಲ್ ಬೋಟ್‌ಗಳು ಮೀನುಗಾರಿಕೆಗೆ ಸಿದ್ಧವಾಗುತ್ತಿವೆ. ಆದರೆ ಪರ್ಸಿನ್ ಬೋಟ್‌ಗಳು ಆಗಸ್ಟ್ 9ರ ಸಮುದ್ರ ಪೂಜೆಯ ನಂತರವಷ್ಟೇ ಸಮುದ್ರಕ್ಕೆ ಇಳಿಯಲು ನಿರ್ಧರಿಸಿವೆ. ಈ ಬಾರಿ ಉತ್ತಮ ಮೀನುಗಾರಿಕೆ ನಿರೀಕ್ಷೆಯಲ್ಲಿದ್ದಾರೆ.

ಒಂದೂವರೆ ತಿಂಗಳಿಂದ ಭಾರಿ ಮಳೆ ಗಾಳಿ ಇತ್ತಾದರೂ, ಎರಡು ದಿನಗಳಿಂದ ಬಿಸಿಲು ಬಂದಿದ್ದು, ಮೀನುಗಾರಿಕೆ ಅನುಕೂಲವಾಗಿದೆ..ಫೆಬ್ರವರಿ ತಿಂಗಳನಿಂದಲೇ ಬಿಸಿಲಿನ ಝಳದಿಂದಾಗಿ ಮೀನು ಸಂಗ್ರಹದಲ್ಲಿ ತೀವ್ರ ಇಳಿಕೆಯಾಗಿ ಮೀನುಗಾರರು ಕಂಗಾಲಾಗಿದ್ದರು. ಸರಕಾರಿ ನಿಯಮದಂತೆ ಆ.1ರಿಂದ ಮೀನುಗಾರಿಕೆ ಆರಂಭಗೊಳ್ಳಲಿದೆ. ಟ್ರಾಲ್‌ ಬೋಟ್‌ಗಳು ಅಂದು ಹವಾಮಾನ ಇಲಾಖೆಯ ವರದಿ ಗಮನಿಸಿ ಮೀನುಗಾರಿಕೆಗೆ ತೆರಳಲಿದ್ದಾರೆ.

ಮೀನುಗಾರಿಕೆ ಇಲಾಖೆ ನಿಯಮದಂತೆ ಆ.1ರಿಂದ ಮೀನುಗಾರಿಕೆ ಆರಂಭಿಸಬಹುದು. ಅಂದೇ ತೆರಿಗೆ ರಹಿತ ಡೀಸೆಲ್‌ ಪೂರೈಕೆ ಮಾಡಲಿದ್ದು, ಟ್ರಾಲ್‌ ಬೋಟ್‌ನವರು ಕಡಲಿಗೆ ಇಳಿಯಲಿದ್ದು, ಮಂಜುಗಡ್ಡೆ ತುಂಬಿಸುವ, ಬಲೆ ಸರಿಪಡಿಸುವ ಕಾರ್ಯ ನಡೆಯುತ್ತಿದೆ.

ಒಂದೂವರೆ ತಿಂಗಳಿಂದ ಭಾರಿ ಮಳೆ ಗಾಳಿ ಇತ್ತಾದರೂ, ಎರಡು ದಿನಗಳಿಂದ ಬಿಸಿಲು ಬಂದಿದ್ದು, ಮೀನುಗಾರಿಕೆ ಅನುಕೂಲವಾಗಿದೆ. ರಜೆಯಲ್ಲಿ ಊರಿಗೆ ಮರಳಿದ್ದ ಹೊರ ರಾಜ್ಯಗಳ ಕಾರ್ಮಿಕರು ವಾಪಸಾಗುತ್ತಿದ್ದು, ದಕ್ಕೆ ಪ್ರದೇಶಗಳಲ್ಲಿ ಟ್ರಾಲ್‌ ಹಾಗೂ ಪರ್ಸೀನ್‌ ಬೋಟ್‌ಗಳನ್ನು ಸಿದ್ಧಗೊಳಿಸಲಾಗುತ್ತಿದೆ.

ಕಳೆದ ಅವಧಿಯಲ್ಲಿ ಹವಾಮಾನ ವೈಪರೀತ್ಯದ ಜತೆಗೆ ಫೆಬ್ರವರಿ ತಿಂಗಳನಿಂದಲೇ ಬಿಸಿಲಿನ ಝಳದಿಂದಾಗಿ ಮೀನು ಸಂಗ್ರಹದಲ್ಲಿ ತೀವ್ರ ಇಳಿಕೆಯಾಗಿ ಮೀನುಗಾರರು ಕಂಗಾಲಾಗಿದ್ದರು. ಈ ಬಾರಿ ಉತ್ತಮ ಮೀನುಗಾರಿಕೆಯ ನಿರೀಕ್ಷೆಯೊಂದಿಗೆ ಧಕ್ಕೆ ಪ್ರದೇಶಗಳಲ್ಲಿ ಮೀನುಗಾರರು ಪೈಂಟಿಂಗ್‌, ಎಂಜಿನ್‌ ದುರಸ್ತಿ, ಬಲೆ ದುರಸ್ತಿ, ಡೀಸೆಲ್‌ ಪಡೆಯಲು ಬೇಕಾದ ಪ್ರಕ್ರಿಯೆಗಳು ಸೇರಿದಂತೆ ಬೋಟುಗಳನ್ನು ಕಡಲಿಗಿಳಿಸಲು ಪೂರ್ವ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.

ಯಾಂತ್ರೀಕೃತ ಮೀನುಗಾರಿಕೆ ನಿಷೇಧ ಸಂದರ್ಭ ಕರಾವಳಿಯಲ್ಲಿ ಸಾಂಪ್ರದಾಯಿಕ ದೋಣಿಗಳ ಮೂಲಕ ನಡೆಸಲಾಗುವ ನಾಡದೋಣಿ ಮೀನುಗಾರಿಕೆ ಚುರುಕು ಪಡೆಯುತ್ತದೆ. ಎರಡು ತಿಂಗಳ ಅವಧಿಯಲ್ಲಿಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ನಾಡದೋಣಿ ಮೀನುಗಾರಿಕೆಯೂ ಕ್ಷೀಣವಾಗಿದೆ.

ಮಾರುಕಟ್ಟೆಗಳಲ್ಲಿ ತಾಜಾ ಮೀನಿನ ಕೊರತೆ ಜತೆಗೆ ಮೀನಿನ ದರವೂ ಮೀನು ಪ್ರಿಯರನ್ನು ಕಂಗೆಡಿಸಿದೆ. ಪ್ಯಾಕ್‌ ಮಾಡಿ ಐಸ್‌ನಲ್ಲಿಇರಿಸಲಾದ ಮೀನಿನ ಜತೆಗೆ ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್‌, ಒಡಿಸಾ ರಾಜ್ಯಗಳ ತಾಜಾ ಮೀನು ಮಾರುಕಟ್ಟೆಗೆ ಬರುತ್ತಿದೆ. ದರವೂ ಏರಿಳಿತ ಕಾಣುತ್ತಿದೆ.

2024-25ನೇ ಸಾಲಿನ ಆಗಸ್ಟ್‌ನಿಂದ ಮಾರ್ಚ್ ವರೆಗೆ ಮೀನುಗಾರಿಕೆಯಲ್ಲಿ ಭಾರಿ ಕುಸಿತ ಕಂಡು ಬಂದಿತ್ತು. ಮೀನುಗಾರಿಕಾ ಇಲಾಖೆ ಮಾಹಿತಿ ಪ್ರಕಾರ, 2025ರ ಏಪ್ರಿಲ್‌ನಲ್ಲಿ 7100 ಮೆಟ್ರಿಕ್‌ ಟನ್‌ ಮೀನು ಸಂಗ್ರಹವಾಗಿದ್ದರೆ, ಮೇ ತಿಂಗಳಲ್ಲಿ 6210 ಮೆಟ್ರಿಕ್‌ ಟನ್‌ ಮೀನುಗಾರಿಕೆಯಾಗಿದೆ. 2023-24ರಲ್ಲಿ 2.39 ಲಕ್ಷ ಟನ್‌, 2024-25ರಲ್ಲಿ 1.72 ಲಕ್ಷ ಟನ್‌ ಮೀನುಗಾರಿಕೆಯಾಗಿದೆ.

ಮಂಗಳೂರು ದಕ್ಕೆಯನ್ನು ಪ್ರಧಾನ ಮಂತ್ರಿ ಮತ್ಸ್ಯ ಸಮೃದ್ಧಿ ಯೋಜನೆಯಡಿ 37.50 ಕೋಟಿ ರೂ. ಮೊತ್ತದಲ್ಲಿಆಧುನೀಕರಣ ಮತ್ತು ಮೂರನೇ ಹಂತದ ದಕ್ಕೆ ಕಾಮಗಾರಿ ಕೂಡಾ ನಡೆಯಲಿದೆ. ಬಹಳ ಹಳೆಯ ಹರಾಜು ಪ್ರಾಂಗಣ ತೆರವು ಮಾಡಲಾಗಿದೆ. ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ಮೀನುಗಾರಿಕೆ ಆರಂಭದ ವೇಳೆ ಅಡಚಣೆಯಾಗಲಿದೆ.


Spread the love
Subscribe
Notify of

0 Comments
Inline Feedbacks
View all comments