ಇಂಡಿಯನ್ ಸೋಶಿಯಲ್ ಫೋರಮ್ ವತಿಯಿಂದ ಫ್ಯಾಸಿಸ್ಟ್ ವಿರೋಧಿಸಿ ಪ್ರಜಾಪ್ರಭುತ್ವ ಉಳಿಸಿ ಅಭಿಯಾನ 

Spread the love

ಇಂಡಿಯನ್ ಸೋಶಿಯಲ್ ಫೋರಮ್ ವತಿಯಿಂದ ಫ್ಯಾಸಿಸ್ಟ್ ವಿರೋಧಿಸಿ ಪ್ರಜಾಪ್ರಭುತ್ವ ಉಳಿಸಿ ಅಭಿಯಾನ 
ರಿಯಾದ್:   ಭಾರತದ ಪ್ರಜಾಪಭುತ್ವದ ಮೂಲ ಕಂಬ ಗಳಾದ ನ್ಯಾಯಾಂಗ ಶಾಸಕಾಂಗ ಮತ್ತು ಕಾರ್ಯಂಗ ವನ್ನು  ಫ್ಯಾಸಿಸ್ಟ್ ಶಕ್ತಿಗಳು ಅಲುಗಾಡಿಸಲು ಪ್ರಯತ್ನಿಸುತ್ತಿರು ಹಿನ್ನಲೆಯಲ್ಲಿ   ಮತ್ತು ಪ್ರಜಾಪ್ರಭುತ್ವವನ್ನು ಭದ್ರಗೊಳಿಸುವ ಉದ್ದೇಶದಿಂದ. ಅನಿವಾಸಿ ಭಾರತೀಯರನ್ನು ಜಾಗೃತಿ ಗೊಳಿಸಲು  ಒಂದು ತಿಂಗಳು ಅವಧಿಯ ಅಭಿಯಾನವನ್ನು ನಡೆಸಲಾಗುವುದು ಎಂದು ಇಂಡಿಯನ್ ಸೋಶಿಯಲ್ ಫೋರಮ್ ರಿಯಾದ್ ಕೇಂದ್ರ ಸಮಿತಿಯು ತನ್ನ  ಪ್ರಕಟಣೆಯಲ್ಲಿ ತಿಳಿಸಿದೆ.
ಫ್ಯಾಸಿಸಂ ಸಿದ್ಧಾಂತವನ್ನು  ಪ್ರತಿ ಹಂತಗಳಲ್ಲಿಯೂ ಹೋರಾಟದ ಮೂಲಕ ಸೋಲಿಸುವುದೇ ಅದನ್ನು  ತಡೆಗಟ್ಟಲು ಇರುವ  ಏಕೈಕ ಮಾರ್ಗವೆಂದು ಕೇಂದ್ರ ಸಮಿತಿಯ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ.
ಫೆಬ್ರವರಿ 3 ರಿಂದ ಮಾರ್ಚ್ 10 ರವರೆಗೆ ಅಭಿಯಾನನಡೆಯಲಿದೆ ಮತ್ತು ಫೆಬ್ರವರಿ 3 ರ ಶನಿವಾರದಂದು 8.30 ಕ್ಕೆ ಭತ್ತ ಕ್ಲಾಸಿಕ್ ಆಡಿಟೋರಿಯಂ ನಲ್ಲಿ ಅಭಿಯಾನದ ಉದ್ಘಾಟನಾ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳ ಸಾಂಸ್ಕೃತಿಕ ಮತ್ತು ಸಾಮುದಾಯಿಕ ನಾಯಕರುಗಳು ಭಾಗವಹಿಸಲಿದ್ದಾರೆ. ಅಭಿಯಾನದ ಭಾಗವಾಗಿ,ಫ್ಯಾಸಿಸ್ಟ್ ವಿರೋಧಿ ಸಂದೇಶಗಳನ್ನು 30,000 ಜನರಿಗೆ ನೇರವಾಗಿ ಮತ್ತು 50,000 ಮಂದಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ತಲುಪಿಸಲಾಗುವುದು. ವಿಚಾರಗೋಷ್ಠಿಗಳು ಮತ್ತು ಚರ್ಚಾಕೂಟಗಳನ್ನು ವಿವಿಧ ರಾಜ್ಯ ಸಮಿತಿಗಳ ಅಡಿಯಲ್ಲಿ ಆಯೋಜಿಸಲಾಗುವುದು ಎಂದು ಇಂಡಿಯನ್ ಸೋಶಿಯಲ್ ಫೋರಮ್ ಕೇಂದ್ರ ಉಪಾಧ್ಯಕ್ಷರಾದ ರಶೀದ್ ಖಾನ್ ಮತ್ತು  ಪ್ರಧಾನ ಕಾರ್ಯದರ್ಶಿ ಬಶೀರ್ ಕರಂತೂರ್ ಹೇಳಿದ್ದಾರೆ

Spread the love