ಎಂಡೋಸಲ್ಫಾನ್ ಪೀಡಿತರಿಗೆ ಎಂ ಆರ್ ಪಿ ಎಲ್ ವತಿಯಿಂದ ಸ್ವಚ್ಛತಾ ಕಿಟ್ ವಿತರಣೆ

Spread the love

ಎಂಡೋಸಲ್ಫಾನ್ ಪೀಡಿತರಿಗೆ ಎಂ ಆರ್ ಪಿ ಎಲ್ ವತಿಯಿಂದ ಸ್ವಚ್ಛತಾ ಕಿಟ್ ವಿತರಣೆ

ಮಂಗಳೂರು: ಎಂಡೋಸಲ್ಫಾನ್ ಪೀಡಿತರಾಗಿ ಹಾಸಿಗೆ ಹಿಡಿದಿರುವ 210 ಕುಟುಂಬಗಳಿಗೆ ಎಂಆರ್ಪಿಎಲ್ ಸಂಸ್ಥೆಯ ವತಿಯಿಂದ ಸ್ವಚ್ಛತಾ ಕಿಟ್ ಹಾಗೂ ಪೌಷ್ಟಿಕ ಆಹಾರ ಕಿಟ್ಗಳನ್ನು ವಿತರಿಸಲಾಗುತ್ತಿದೆ ಎಂದು ಎಂಆರ್ಪಿಎಲ್ನ ಸಿಎಸ್ಆರ್ ವಿಭಾಗದ ಜನರಲ್ ಮ್ಯಾನೇಜರ್ ಮಂದಾರ ವಿ. ಕಾಲೆ ತಿಳಿಸಿದರು.

ಎಂಆರ್ಪಿಎಲ್ ಸಂಸ್ಥೆಯ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಜುಲೈ 1ರಿಂದ 15ರವರೆಗೆ ನಡೆಯುತ್ತಿರುವ ಸ್ವಚ್ಛತಾ ಪಕ್ವಾಡ ಅಂಗವಾಗಿ ಎಂಡೋಸಲ್ಫಾನ್ ಪೀಡಿತರಿಗೆ ಕಿಟ್ ವಿತರಿಸಿ ಅವರು ಮಾತನಾಡಿದರು.

ಸಂಸ್ಥೆಯು 15 ದಿನಗಳ ಕಾಲ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸ್ವಚ್ಛತೆಗೆ ಮಹತ್ವ ನೀಡುವ ನಿಟ್ಟಿನಲ್ಲಿ ಜಾಗೃತಿ ಜಾಥಾ, ಬೀದಿ ನಾಟಕ, ಶ್ರಮದಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೊಕ್ಕಡ, ಬೆಳ್ತಂಗಡಿ, ಅರಸಿನಮಕ್ಕಿ ಸೇರಿದಂತೆ ವಿವಿಧ ಪ್ರದೇಶಗಳ ಎಂಡೋಸಲ್ಫಾನ್ ಪೀಡಿತ ಕುಟುಂಬಗಳಿಗೆ ಸ್ವಚ್ಛತಾ ಕಿಟ್ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಎಂಆರ್ಪಿಎಲ್ ಸಿಎಸ್ಆರ್ ವಿಭಾಗದ ಅಧಿಕಾರಿ ಕೇಶವ ಪಾಟಾಲಿ, ಬೆಳ್ತಂಗಡಿ ತಾಲೂಕು ಆರೋಗ್ಯಾಧಿಕಾರಿ ಡಾ. ಸಂಜಾತ್, ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರಕಾಶ್, ಎಂಡೋಸಲ್ಫಾನ್ ದಕ್ಷಿಣ ಕನ್ನಡ ಜಿಲ್ಲಾ ಸಂಯೋಜಕ ಸಜಿವುದ್ದೀನ್ ಎಂ.ಎಸ್. ಹಾಗೂ ಇತರರು ಉಪಸ್ಥಿತರಿದ್ದರು.


Spread the love
Subscribe
Notify of

0 Comments