ಎಮ್ ಆರ್ ಪಿ ಎಲ್ ವತಿಯಿಂದ ಸ್ವಚ್ಚತಾ ಪಕ್ವಾಡ

Spread the love

ಎಮ್ ಆರ್ ಪಿ ಎಲ್ ವತಿಯಿಂದ ಸ್ವಚ್ಚತಾ ಪಕ್ವಾಡ

ಮಂಗಳೂರು: ಸ್ವಚ್ಚತೆ ಎಂಬುವುದು ನಮ್ಮಿಂದಲೇ ಪ್ರಾರಂಭವಾಗಬೇಕು ಈ ಮೂಲಕ ಗ್ರಾಮ ರಾಜ್ಯ ದೇಶ ಸ್ವಚ್ಚತೆಯಿಂದಿರಲು ಸಾದ್ಯ ಎಂದು ಎಂ.ಆರ್.ಪಿ.ಎಲ್ ಸಂಸ್ಥೆಯ ಸಿ.ಎಸ್.ವಿಭಾಗದ ಜನರಲ್ ಮ್ಯಾನೇಜರ್ ಮಂದಾರ ವಿ ಕಾಲೆ ಹೇಳಿದರು
ಅವರು ಎಂ.ಆರ್.ಪಿ ಎಲ್ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಗೋವಿಂದದಾಸ ಪದವೀ ಪೂರ್ವ ಕಾಲೇಜು ಸುರತ್ಕಲ್ ವತಿಯಿಂದ, ಎಂ.ಆರ್.ಪಿ.ಎಲ್ ಸಂಸ್ಥೆಯ ವತಿಯಿಂದ ೧೫ ದಿನಗಳ ಕಾಲ ನಡೇಯುವ ಸ್ವಚ್ಚತಾ ಪಕ್ವಾಡದ ಅಂಗವಾಗಿ ಸುರತ್ಕಲ್ ನಲ್ಲಿ ನಡೆದ ಸ್ವಚ್ಚತಾ ಜಾಥ ಮತ್ತು ಬೀದಿ ನಾಟಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಾಗವಹಿಸಿ ಮಾತನಾಡಿದರು

ಸ್ವಚತೆಯ ಬಗ್ಗೆ ಜನರಿಗೆ ತಿಳಿದಿದೆ ಆದರೆ ಬೇಜಾವಾಬ್ದಾರಿ ತನದಿಂದ ಪರಿಸರ ಕೆಡುತ್ತಿದೆ, ನಮ್ಮ ಕಸ ನಮ್ಮ ಜವಾಬ್ದಾರಿ ಎಂಬುದು ಮನಸಿನಲ್ಲಿರಬೇಕು, ಜನ ಆರೋಗ್ಯದಿಂದ ಇರಬೇಕಾದರೆ ಪರಿಸರ ಸ್ವಚತೆಯಿಂದ ಇರಬೇಕು ಎಂದರು. ಕಾಲೇಜು ವಿದ್ಯಾರ್ಥಿಗಳು ಕಾಲೇಜಿನಿಂದ ಸುರತ್ಕಲ್ ಜಂಕ್ಷನ್ ವರೆಗೆ ಸ್ವಚ್ಚತಾ ಜಾಥ ನಂತರ ಸ್ವಚ್ಚತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಬೀದಿ ನಾಟಕ ಹಮ್ಮಿಕೊಂಡರು.

ಈ ಸಂದರ್ಭ ಎಂ.ಆರ್.ಪಿ.ಎಲ್ ಸಂಸ್ಥೆಯ ಸಿ.ಎಸ್.ಆರ್. ವಿಭಾಗದ ಅಧಿಕಾರಿ ಕೇಶವ ಪಾಟಾಳಿ, ಕಾಲೇಜು ಪ್ರಾಂಶುಪಾಲೆ ಲಕ್ಷೀ, ಸುರತ್ಕಲ್ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ರಾಜ್ ಮೋಹನ್ ರಾವ್ ಕಾರ್ಯದರ್ಶಿ ಸತೀಶ್ ಸದಾನಂದ, ಕಾಲೇಜು ವಿದ್ಯಾರ್ಥಿ ಸೇವಾ ಪಾಲಕ ವೆಂಕಟರಮಣ ಮತ್ತಿತರರು ಉಪಸ್ಥಿತರಿದ್ದರು.


Spread the love
Subscribe
Notify of

0 Comments