ಬಂಟ್ವಾಳ: ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Spread the love

ಬಂಟ್ವಾಳ: ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಅ.ಕ್ರ:260/2014 ಕಲಂ 306 ಐಪಿಸಿ ಪ್ರಕರಣದ ಆರೋಪಿ, ಬಂಟ್ವಾಳ ಕರಿಯಂಗಳ ನಿವಾಸಿ ದುನಿಯಾ ಶರೀಫ್ @ ಮಹಮ್ಮದ್ ಶರೀಫ್ (52) ಎಂಬಾತನು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ವಿದೇಶದಲ್ಲಿ ತಲೆಮರೆಸಿಕೊಂಡಿದ್ದನು.

ಆರೋಪಿ ದಿನಾಂಕ 05-05-2026ರಂದು ವಿದೇಶದಿಂದ ಹಿಂದಿರುಗುತ್ತಿದ್ದ ವೇಳೆ, ಮುಂಬೈ ಸಹರಾ ಪೊಲೀಸ್ ಠಾಣೆಯ ಪೊಲೀಸರ ಸಹಕಾರದೊಂದಿಗೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ದಿನಾಂಕ 06-05-2026ರಂದು ಮಾನ್ಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.


Spread the love
Subscribe
Notify of

0 Comments
Inline Feedbacks
View all comments