ಬನ್ನಂಜೆ ನಾರಾಯಣ ಗುರು ವೃತ್ತ ತೆರವಿಗೆ ಪ್ರಸಾದ್ ರಾಜ್ ಕಾಂಚನ್ ಆಕ್ರೊಶ

Spread the love

ಬನ್ನಂಜೆ ನಾರಾಯಣ ಗುರು ವೃತ್ತ ತೆರವಿಗೆ ಪ್ರಸಾದ್ ರಾಜ್ ಕಾಂಚನ್ ಆಕ್ರೊಶ

  • ನಗರಸಭೆ ವತಿಯಿಂದ ಶಾಶ್ವತ ವೃತ್ತ ನಿರ್ಮಿಸುವಂತೆ ಆಗ್ರಹ

ಉಡುಪಿ: ಬನ್ನಂಜೆ ನಾರಾಯಣ ಗುರು ಮಂದಿರದ ಎದುರುಗಡೆ ಇದ್ದ ನಾರಾಯಣ ಗುರು ವೃತ್ತವನ್ನು ತೆರವುಗೊಳಿಸಿರುವ ಬಗ್ಗೆ ಕಾಂಗ್ತೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶ್ವಕ್ಕೆ ಶಾಂತಿಯ ಸಂದೇಶವನ್ನು ಪಸರಿಸಿದ,ಅದ್ಯಾತ್ಮಿಕ ಗುರುಗಳು ಜಾತಿ ಪದ್ದತಿಯ ವಿರುದ್ದ ಹೋರಾಡಿ, ಸಾಮಾಜಿಕ ಸಮಾನತೆಗಾಗಿ ಪಣತೊಟ್ಟಂತಹ ನಾರಾಯಣ ಗುರುಗಳ ವೃತ್ತ ವನ್ನು ತೆರವುಗೊಳಿಸಿರುವುದು ಶ್ರೀ ನಾರಾಯಣ ಗುರುಗಳಿಗೆ ಅವಮಾನ ಮಾಡಿದಂತೆ. ಅಷ್ಟೇ ಅಲ್ಲದೇ ನಾರಾಯಣಗುರುಗಳ ವೃತ್ತ ವನ್ನು ಪೊದೆಯಲ್ಲಿ ಹಾಕಿ ಖಾಸಗಿ ಬ್ಯಾಂಕಿನ ಜಾಹೀರಾತಿನ ವೃತ್ತ ನಿರ್ಮಿಸಿರುವುದು ಖಂಡನೀಯ.

ಗುರು ನಾರಾಯಣಗುರುಗಳ ವೃತ್ತ ವನ್ನು ಹಲವು ವರ್ಷಗಳ ಹಿಂದೆಯೇ ಘೊಷಿಸಲಾಗಿದ್ದು ಇದನ್ನು ತೆರವುಗೊಳಿಸಿದವರ ವಿರುದ್ದ ಕಠಿಣ ಕ್ರಮ ಜರಗಿಸಬೇಕು. ನಗರ ಸಭೆ ಇಲ್ಲಿ ಶಾಶ್ವತ ನಾರಾಯಣಗುರುಗಳ ವೃತ್ತ ಸ್ಥಾಪಿಸುವ ಪ್ರಸಾದ್ ರಾಜ್ ಕಾಂಚನ್ ಆಗ್ರಹಿಸಿದ್ದಾರೆ.

2025 ಸರಕಾರದ ಆದೇಶದ ಪ್ರಕಾರ ಬನ್ನಂಜೆಯ ನಾರಾಯಣ ಗುರು ವ್ರತ್ತ ಹಾಗೂ ಸಂತೆಕಟ್ಟೆ ಕಲ್ಯಾಣಪುರದ ಕೋಟಿ ಚೆನ್ನಯ್ಯ ವ್ರತ್ತ ನಗರಸಭೆಯಿಂದ  ಪೂರ್ಣಗೊಳಿಸದೇ ಸಮಾಜಕ್ಕೆ ಮಾಡಿದ ಅವಮಾನವಾಗಿದೆ ಎಂದು ಅವರು ತಿಳಿಸಿದ್ದಾರೆ


Spread the love
Subscribe
Notify of

0 Comments
Inline Feedbacks
View all comments