ಬಾಂಗ್ಲಾದೇಶದ ಹಿಂದೂಗಳ ಮೇಲಿನ ಕ್ರೂರ ಹಿಂಸೆ: ಶಿವಸೇನಾ ಖಂಡನೆ

Spread the love

ಬಾಂಗ್ಲಾದೇಶದ ಹಿಂದೂಗಳ ಮೇಲಿನ ಕ್ರೂರ ಹಿಂಸೆ: ಶಿವಸೇನಾ ಖಂಡನೆ

ಮಂಗಳೂರು: ಬಾಂಗ್ಲಾದೇಶ ದಲ್ಲಿ ನಿರಂತರ ನಡೆಯುತ್ತಿರುವ ಹಿಂದೂಗಳ ಹತ್ಯೆಯನ್ನು ಶಿವಸೇನಾ ಕರ್ನಾಟಕ ಉಗ್ರವಾಗಿ ಖಂಡಿಸುತ್ತದೆ.ಈ ರೀತಿಯ ಕ್ರೂರತ್ವ ಹಾಗೂ ಹಿಂಸೆ ಇಡೀ ಮನುಕುಲಕ್ಕೆ ಅಪಾಯಕಾರಿ,ಈ ರೀತಿ ಜನರು ದಂಗೆಯೆದ್ದು ಒಂದು ನಿರ್ದಿಷ್ಟ ಕೋಮಿನ ವಿರುದ್ದ ಹಿಂಸಾಕೃತ್ಯ ವಿಷಯಗಳಿಗೆ ಇಳಿದಿದ್ದಾರೆ ಅಂದ್ರೆ ಇದರ ನಡುವೆ ಐ ಎಸ್ ಐ ಕೈವಾಡ ಎದ್ದು ಕಾಣುತ್ತಿದೆ. ರಾಜರೋಷವಾಗಿ ಒಬ್ಬ ಹಿಂದೂವನ್ನು ಕಂಬಕ್ಕೆ ನೇತು ಹಾಕಿ ಹಿಂಸೆಗೆ ಒಳಪಟ್ಟಿದ್ದನ್ನು ಗಮನಿಸಿದ್ರೆ ಅಲ್ಲಿ ಸರ್ಕಾರ ಇದೆಯೋ ಇಲ್ಲವೋ ಎಂದು ತಿಳಿಯುತ್ತಿಲ್ಲ.ಇಂತಹ ನೀಚ ಕೃತ್ಯಗಳ ವಿರುದ್ದ ಇಡೀ ಜಗತ್ತು ಒಂದಾಗಬೇಕಾಗಿದೆ ಯಾವುದೋ ನೆಪದಿಂದ ಹಿಂದೂಗಳ ವಿರುದ್ದ ಹಿಂಸೆಗೆ ಇಳಿದ ಅಲ್ಲಿನ ಜನರ ಮನಸ್ಥಿತಿ ಯನ್ನು ಅರ್ಥ ಮಾಡಿಕೊಳ್ಲಬೇಕಾಗಿದೆ ಯಾವುದೇ ಕಾರಣಕ್ಕೂ ಇವರನ್ನು ಕ್ಷಮಿಸಕೂಡದು ಈ ವಿಚಾರದಲ್ಲಿ ನಮ್ಮ ದೇಶದ ಪ್ರಧಾನಿಯವರು ಮಧ್ಯ ಪ್ರವೇಶಿಸಿ ಹಿಂದೂಗಳ ಮೇಲಿನ ದೌರ್ಜ್ಯನ್ಯವನ್ನು ಮೊದಲು ತಡೆಗಟ್ಟಬೇಕು ಎಂದು ಶಿವಸೇನಾ ರಾಜ್ಯ ಉಪಾಧ್ಯಕ್ಷ ಆನಂದ್ ಶೆಟ್ಟಿ ಅಡ್ಯಾರ್ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments