ಭಾರೀ ಮಳೆ: ರಾಯಿ ನಿವಾಸಿ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ : ಎನ್ ಡಿ ಆರ್ ಆಫ್ ತಂಡದಿಂದ ಶೋಧ ಕಾರ್ಯ

Spread the love

ಭಾರೀ ಮಳೆ: ರಾಯಿ ನಿವಾಸಿ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ : ಎನ್ ಡಿ ಆರ್ ಆಫ್ ತಂಡದಿಂದ ಶೋಧ ಕಾರ್ಯ

ಬಂಟ್ವಾಳ: ಬಂಟ್ವಾಳ ತಾಲೂಕಿನ ರಾಯಿ ನಿವಾಸಿಯ ವ್ಯಕ್ತಿಯೊಬ್ಬರು ತೋಡು ದಾಟುವಾಗ ಕಾಲು ಜಾರಿ ತೋಡಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳೀಯರು ಹಾಗೂ ಪೊಲೀಸರು ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕಾಣೆಯಾದವರನ್ನು ಜೀವನ್ ಪಿಂಟೊ(48) ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಅವರು ತೋಡಿನ ಆಚೆ ಇರುವ ತಮ್ಮ ಮಾವನ ಮನೆಗೆ ತೆರಳಲು ತೋಡು ದಾಟುವ ವೇಳೆ ಜಾರಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ

ಘಟನಾ ಸ್ಥಳದಲ್ಲಿ ಜೀವನ್ ಪಿಂಟೊ ಅವರ ಚಪ್ಪಲಿ ಹಾಗೂ ಟಾರ್ಚ್ಲೈಟ್ ಪತ್ತೆಯಾಗಿದ್ದು, ಅವರು ತೋಡಿಗೆ ಬಿದ್ದಿರುವ ಅನುಮಾನ ಮತ್ತಷ್ಟು ಬಲಗೊಂಡಿದೆ. ಆದರೆ ಅವರು ತೋಡಿಗೆ ಬಿದ್ದಿರುವುದು ಅಥವಾ ಬೇರೆಡೆ ತೆರಳಿರುವುದು ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ಮಾಹಿತಿ ತಿಳಿಯುತ್ತಿದ್ದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನೀರಿನಲ್ಲಿ ವ್ಯಕ್ತಿ ಕೊಚ್ಚಿ ಹೋದ ವ್ಯಕ್ತಿಯ ಪತ್ತೆಗೆ ಎನ್ ಡಿ ಆರ್ ಆಫ್ ತಂಡದಿಂದ ಶೋಧ ಕಾರ್ಯ ನಡೆದಿದ್ದು ಸಂಜೆಯ ವರೆಗೂ ಪತ್ತೆಯಾಗದ ಕಾರಣ ಸೋಮವಾರ ಮತ್ತೆ ಶೋಧ ಕಾರ್ಯ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Spread the love
Subscribe
Notify of

0 Comments