ಮಂಗಳೂರಿನಲ್ಲಿ ಮಹಿಳೆ ಕಾಣೆ: ಮಾಹಿತಿ ನೀಡುವಂತೆ ಪೊಲೀಸರ ವಿನಂತಿ
ಉಳ್ಳಾಲ ತಾಲೂಕು ಬೆಳ್ಳ ಗ್ರಾಮದ ದೇರಳಕಟ್ಟೆ ಬದ್ಧಾರು ನಿವಾಸಿ ಶೌಖತ್ ಅಲಿ ಅವರ ತಂಗಿ ಶ್ರೀಮತಿ ಜಮೀಲಾ (ವಯಸ್ಸು ಸುಮಾರು 35 ವರ್ಷ) ಕಾಣೆಯಾಗಿರುವ ಘಟನೆ ವರದಿಯಾಗಿದೆ.

ಮಂಗಳೂರು ತಾಲೂಕು ಮಂಜನಾಡಿ ಗ್ರಾಮದ ಕಲ್ಕಟ್ಟ ಸ್ಕೂಲ್ ಬಳಿ ವಾಸಿಸುತ್ತಿದ್ದ ಜಮೀಲಾ ಅವರು 2018ರ ಮೇ 25ರಂದು ಸಂಜೆ 4 ಗಂಟೆಯ ಸುಮಾರಿಗೆ “ಮಂಗಳೂರಿಗೆ ಹೋಗಿ ಬರುತ್ತೇನೆ” ಎಂದು ಮನೆಯಿಂದ ಹೊರಟು, ವಾಪಸಾಗದೆ ಕಾಣೆಯಾಗಿದ್ದಾರೆ ಎಂದು ಅವರ ಸಹೋದರ ಶೌಖತ್ ಅಲಿ ಅವರು ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳೆ ಕಾಣೆ ಪ್ರಕರಣ (ಮೊ.ನಂ.150/2018) ದಾಖಲಿಸಲಾಗಿದೆ.
ಕಾಣೆಯಾದವರ ವಿವರಗಳು:
- ಹೆಸರು: ಶ್ರೀಮತಿ ಜಮೀಲಾ
- ಪತಿ: ಶೇಖಬ್ಬ
- ವಯಸ್ಸು: ಸುಮಾರು 35 ವರ್ಷ
- ಎತ್ತರ: 5 ಅಡಿ 6 ಇಂಚು
- ಮೈಬಣ್ಣ: ಗೋಧಿ
- ವಿದ್ಯಾಭ್ಯಾಸ: 7ನೇ ತರಗತಿ
- ಚಹರೆ: ಕೋಲು ಮುಖ, ಸಾಧಾರಣ ಮೈಕಟ್ಟು
- ಧರಿಸಿದ್ದ ಬಟ್ಟೆ: ಕಪ್ಪು ಬುರ್ಖಾ
- ಮಾತನಾಡುವ ಭಾಷೆಗಳು: ತುಳು, ಕನ್ನಡ, ಮಲಯಾಳಿ, ಬ್ಯಾರಿ, ಹಿಂದಿ
ಯಾರಾದರೂ ಶ್ರೀಮತಿ ಜಮೀಲಾ ಅವರ ಬಗ್ಗೆ ಮಾಹಿತಿ ಹೊಂದಿದ್ದರೆ, ದಯವಿಟ್ಟು ಮಂಗಳೂರು ನಗರದ ಪೊಲೀಸ್ ಆಯುಕ್ತರ ಕಚೇರಿಯ ನಿಯಂತ್ರಣ ಕೊಠಡಿ (ದೂರವಾಣಿ: 0824-2220800) ಅಥವಾ ಕೊಣಾಜೆ ಪೊಲೀಸ್ ಠಾಣೆ (0824-2220536 / 9480802350) ಗೆ ತಕ್ಷಣ ಸಂಪರ್ಕಿಸಬೇಕೆಂದು ಪೊಲೀಸರು ವಿನಂತಿಸಿದ್ದಾರೆ.












