ಮಂಗಳೂರು: ಅಂಬೇಡ್ಕರ್ ವೃತ್ತದ ವಿನ್ಯಾಸ ಅನಾವರಣ
ಮಂಗಳೂರು: ಮಹಾನಗರ ಪಾಲಿಕೆ ವತಿಯಿಂದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಗೊಳ್ಳಲಿರುವ ಅಂಬೇಡ್ಕರ್ ವೃತ್ತದ ವಿನ್ಯಾಸವನ್ನು ಬುಧವಾರ ಅನಾವರಣಗೊಳಿಸಲಾಯಿತು.
ಹಳೆಯ ಜ್ಯೋತಿ ಟಾಕೀಸ್ ಬಳಿಯಲ್ಲಿ ವೃತ್ತ ನಿರ್ಮಾಣದ ಸ್ಥಳದಲ್ಲಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕಿ ಮಣಿಮೇಘಲೈ ಅವರು ಶಾಸಕ ವೇದವ್ಯಾಸ್ ಕಾಮತ್ ಮತ್ತು ಮಹಾನಗರ ಪಾಲಿಕೆ ನಿರ್ಗಮನ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಉಪಸ್ಥಿತಿಯಲ್ಲಿ ಅನಾವರಣಗೊಳಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, ಬಹಳ ವರ್ಷದಿಂದ ಬಾಕಿಯಾಗಿದ್ದ ಸಂವಿಧಾನಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವೃತ್ತ ಹಾಗೂ ಪುತ್ಥಳಿ ನಿರ್ಮಾಣ ಕಾಮಗಾರಿ ಶೀಘ್ರವೇ ಆರಂಭಗೊಳ್ಳಲಿದ್ದು, ಅತ್ಯಂತ ತ್ವರಿತವಾಗಿ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ ಎಂದರು.
ಮೇಯರ್ ಸುಧೀರ್ ಶೆಟ್ಟಿ ಮಾತನಾಡಿ, ಇದು ನನ್ನ ಜೀವನದ ಐತಿಹಾಸಿಕ ದಿನ. ನನ್ನ ಮೇಯರ್ ಅವಧಿಯ ಕೊನೆ ದಿನ ಸಂವಿಧಾನಶಿಲ್ಪಿಯ ಪ್ರತಿಮೆ ಸ್ಥಾಪನೆ ಹಾಗೂ ವೃತ್ತ ರಚನೆಗೆ ರಾಷ್ಟ್ರೀಕೃತ ಬ್ಯಾಂಕ್ ಮುಂದೆ ಬಂದಿರುವುದು ಶ್ಲಾಘನೀಯ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆಗೊಳ್ಳುವಂತಾಗಲಿ ಎಂದರು.
ಉಪಮೇಯರ್ ಸುನೀತಾ, ವಿರೋಧ ಪಕ್ಷದ ನಾಯಕ ಪ್ರವೀಣ್ ಚಂದ್ರ ಆಳ್ವ, ಮಾಜಿ ಶಾಸಕ ಜೆ.ಆರ್.ಲೋಬೋ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ನಗರಸಭಾ ಸದಸ್ಯರಾದ ಗಣೇಶ್, ಭರತ್ ಕುಮಾರ್, ಎ.ಸಿ.ವಿನಯರಾಜ್, ಅನಿಲ್ ಕಂಕನಾಡಿ, ಮನೋಜ್, ಪಾರಿಶ್ವ ಪರಿಷ, ಪರಿಗಣ ಹಾಗೂ ಪಂಗಡಗಳ ಸಂಘದವರು ಉಪಸ್ಥಿತರಿದ್ದರು ಒಕ್ಕೂಟದ ಅಧ್ಯಕ್ಷ ಲೋಲಾಕ್ಷ, ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್ ಕುಮಾರ್ ಜೆಪ್ಪು, ಮೋಹನಾಂಗಯ್ಯ ಸ್ವಾಮಿ, ರಘು ಎಕ್ಕಾರು, ಲಕ್ಷ್ಮಣ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು.













