ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನ ಆರೋಪದಲ್ಲಿ ಮೂವರ ಬಂಧನ

Spread the love

ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನ ಆರೋಪದಲ್ಲಿ ಮೂವರ ಬಂಧನ

ಮಂಗಳೂರು: ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಎರುಂಬು ರಸ್ತೆ ಎಂಬಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದಲ್ಲಿ ಮೂವರನ್ನು ವಿಟ್ಲ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ವಿಟ್ಲದ ಮಂಗಳಪದವು ನಿವಾಸಿ ಸನತ್ ಕುಮಾರ್, (23) , ವಿಟ್ಲ ಕಸಬಾ ಗ್ರಾಮದ ರಾಝಿಕ್ (23)ಮತ್ತು ಮಂಗಳಪದವು ನಿವಾಸಿ ಚೇತನ್ (23) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಂದ 6.27 ಗ್ರಾಂ ಗಾಂಜಾ, 3 ಮೊಬೈಲ್ ಗಳು ಸಣ್ಣ ಚೂರಿ, ದ್ವಿಚಕ್ರ ವಾಹನ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಆರೋಪಿಗಳು ರಸ್ತೆ ಬದಿಯಲ್ಲಿ ಅನುಮಾನಸ್ಪಾದವಾಗಿ ರಸ್ತೆ ಬದಿಯಲ್ಲಿ ನಿಂತಿದ್ದಾಗ ಅವರನ್ನು ವಿಟ್ಲ ಪಿಎಸ್‌ಐ ರಾಮಕೃಷ್ಣ ಅವರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಆರೋಪಿಗಳು ನಿಷೇಧಿತ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟಕ್ಕೆ ಯತ್ನ ನಡೆಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ಪ್ರಕರಣದಲ್ಲಿ ಇನ್ನೊಬ್ಬ ಆರೋಪಿಯಾದ ಎರ್ಮೆಮಜಲು ನಿವಾಸಿ ಧ್ಯಾನ್ ಕರ್ಕೆರ (23) ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments