ಮೇ 22: ದಕ ಜಿಲ್ಲೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರವಾಸ

Spread the love

ಮೇ 22: ದಕ ಜಿಲ್ಲೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರವಾಸ

ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮೇ 22 ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ.

ಅಂದು ಬೆಳಿಗ್ಗೆ 8:15 ಮಂಗಳೂರು ವಿಮಾನ ನಿಲ್ದಾಣ ಆಗಮನ, 10- ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಯೋಜನಾ ಸಮಿತಿ ಸಭೆ,10:45 – ಕದ್ರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಸ್ಟೆಲ್ ಉದ್ಘಾಟನೆ, 11:15 – ಪುರಭವನದಲ್ಲಿ 15ನೇ ಹಣಕಾಸು ಯೋಜನೆಯಡಿ ರೂ.44.00 ಕೋಟಿಗಳ ಅನುದಾನದಲ್ಲಿ 68 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಕಾಮಗಾರಿಗೆ ಶಿಲಾನ್ಯಾಸ, PM-AHIM ಯೋಜನೆಯಡಿ ರೂ.21.00 ಕೋಟಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಕಾಮಗಾರಿಗೆ ಶಿಲಾನ್ಯಾಸ, ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ MRPL ನ CSR ಅನುದಾನದಲ್ಲಿ ಮೆಡಿಸಿನ್ ಬ್ಲಾಕ್ನ 4ನೇ & 5ನೇ ಮಹಡಿ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ, ರೂ.35.00 ಕೋಟಿಗಳಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಮೊದಲನೇ ಹಂತದ ಹೊಸ ಒಪಿಡಿ ಬ್ಲಾಕ್ ಕಾಮಗಾರಿಗೆ ಶಿಲಾನ್ಯಾಸ, ರೂ.2.00 ಕೋಟಿಗಳ ವೆಚ್ಚದಲ್ಲಿ 500 KLD ಸಾಮಥ್ರ್ಯದ STP ಘಟಕ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ, ತೆಂಕ ಕಜೆಕಾರು ಮತ್ತು ಮಾಂಟ್ರಾಡಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಉದ್ಘಾಟನೆ, ಮಧ್ಯಾಹ್ನ 2:50- ಜೋಕಟ್ಟೆಯಲ್ಲಿ ಕೆ.ಬಿ.ಎಸ್. ರೈಲ್ವೆ ಗೇಟ್ ಬಳಿಯಿಂದ -ಎಂ.ಎಸ್.ಇ.ಝೆಡ್.ಎಲ್- ಹೆಚ್.ಪಿ.ಸಿ.ಎಲ್ ಮುಖಾಂತರ ಹಳೇ ಮಸೀದಿ ಬಳಿಯ ರೈಲ್ವೆ ಗೇಟ್ವರೆಗಿನ ರಸ್ತೆ ಕಾಂಕ್ರೀಟೀಕರಣ ಉದ್ಘಾಟನೆ, ಸಂಜೆ 6:30 ಗಂಟೆಗೆ ಸಚಿವರು ಮಂಗಳೂರಿನಿಂದ ಬೆಂಗಳೂರಿಗೆ ತೆರಳಲಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments