ವಿಳಂಭಿಸದೆ ಫಾರಂ ಹಿಂದಿರುಗಿಸಿ: ಮತದಾರರಿಗೆ ಡಿ.ಸಿ. ಸೂಚನೆ

Spread the love

ವಿಳಂಭಿಸದೆ ಫಾರಂ ಹಿಂದಿರುಗಿಸಿ: ಮತದಾರರಿಗೆ ಡಿ.ಸಿ. ಸೂಚನೆ

ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ 18,03,766 ಮತದಾರರ ಪೈಕಿ 17,86,112 ಅಂದರೆ ಶೇ. 99.02% ಮತದಾರರಿಗೆ ಎನ್ಯುಮರೇಶನ್ ಫಾರ್ಮ್ಗಳನ್ನು ತಲುಪಿಸಲಾಗಿರುತ್ತದೆ.

ಜುಲೈ 29 ಎನ್ಯುಮರೇಶನ್ ಫಾರ್ಮ್ಗಳ ಡಿಜಿಟೈಸೇಶನ್ಗೆ ಕೊನೆಯ ದಿನವಾಗಿರುವುದರಿಂದ ಮತದಾರರು ಆದಷ್ಟು ಬೇಗ ಎನ್ಯುಮರೇಶನ್ ಫಾರ್ಮ್ಗಳನ್ನು ಭರ್ತಿ ಮಾಡಿ ಬಿ.ಎಲ್.ಒ ರವರು ಮನೆಗೆ ಬಂದಾಗ ವಿಳಂಬ ಮಾಡದೇ ನೀಡಬೇಕು.

ಬಿ.ಎಲ್.ಒ ರವರು ಮತದಾರರಿಂದ ಸ್ವೀಕೃತವಾಗುವ ಎನ್ಯುಮರೇಶನ್ ಫಾರ್ಮ್ಗಳನ್ನು ಬಿ.ಎಲ್.ಒ ಆ್ಯಪ್ನಲ್ಲಿ ಡಿಜಿಟೈಸೇಶನ್ ಮಾಡಲು ಕನಿಷ್ಠ 2 ರಿಂದ 4 ನಿಮಿಷಗಳ ಸಮಯ ತಗಲುತ್ತದೆ. ಕೊನೆಯ ಹಂತದಲ್ಲಿ ಅಂದರೆ ಜುಲೈ 25 ರ ನಂತರ ಹೆಚ್ಚಿನ ಎನ್ಯುಮರೇಶನ್ ಫಾರ್ಮ್ಗಳು ಸ್ವೀಕೃತವಾದರೆ ಡಿಜಿಟೈಸೇಶನ್ ಮಾಡುವುದು ಕಷ್ಟವಾಗಬಹುದು.

ಜಿಲ್ಲೆಯಲ್ಲಿ ಇದುವರೆಗೆ ಶೇಕಡಾ 19.92ರಷ್ಟು ಮತದಾರರ ಎನ್ಯುಮರೇಶನ್ ಫಾರ್ಮ್ಗಳನ್ನು ಡಿಜಿಟೈಸ್ ಮಾಡಲಾಗಿರುತ್ತದೆ. ಡಿಜಿಟೈಸೇಶನ್ ಮಾಡಿದ ಎನ್ಯುಮರೇಶನ್ ಫಾರ್ಮ್ಗಳಲ್ಲಿರುವ ಮತದಾರರು ಮಾತ್ರ ಆಗಸ್ಟ್ 5 ರಂದು ಪ್ರಕಟವಾಗುವ ಕರಡು ಮತದಾರರ ಪಟ್ಟಿಯಲ್ಲಿರುತ್ತಾರೆ. ಆದುದರಿಂದ ಜಿಲ್ಲೆಯ ಎಲ್ಲಾ ಮತದಾರರು ಈ ಒಂದು ವಾರದಲ್ಲಿ ಎನ್ಯುಮರೇಶನ್ ಫಾರ್ಮ್ಗಳನ್ನು ಭರ್ತಿ ಮಾಡಿ ಬಿ.ಎಲ್.ಒ ರವರಿಗೆ ನೀಡಿ ಸಹಕರಿಸಲು ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
3.80 ಲಕ್ಷ ಫಾರಂ ಡಿಜಿಟೈಸ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (SIಖ)ಯು ಪ್ರಗತಿಯಲ್ಲಿದ್ದು, 18,03,766 ಮತದಾರರ ಪೈಕಿ ಜುಲೈ 14 ರವರೆಗೆ 17,86,883 ಎನ್ಯುಮರೇಶನ್ ಫಾರ್ಮ್ ಹಂಚಿಕೆ ಮಾಡಲಾಗಿದೆ. 3,80,568 ಫಾರ್ಮ್ಗಳನ್ನು ಡಿಜಿಟೈಸ್ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಧಾನಸಭಾ ಕ್ಷೇತ್ರವಾರು ನಮೂನೆ ಡಿಜಿಟೈಸ್ ಮಾಡಿದ ವಿವರ:
ಬೆಳ್ತಂಗಡಿ-45153 ಮೂಡಬಿದ್ರೆ-41229, ಮಂಗಳೂರು ನಗರ ಉತ್ತರ-41055, ಮಂಗಳೂರು ನಗರ ದಕ್ಷಿಣ-49036, ಮಂಗಳೂರು-63549, ಬಂಟ್ವಾಳ-43966, ಪುತ್ತೂರು-38969, ಸುಳ್ಯ-57611.


Spread the love
Subscribe
Notify of

0 Comments