ಶಿರ್ವ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಸಭೆ
ಶಿರ್ವ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಸಭೆ ಶುಕ್ರವಾರ ಹೆನ್ರಿ ಅಲ್ಮೇಡ ಅವರ ಮನೆಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಶಿರ್ವ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಮೆಲ್ವಿನ್ ಡಿಸೋಜ ವಹಿಸಿದ್ದರು.
ಇತ್ತೀಚಿಗೆ ನಿಧನ ಹೊಂದಿದ ಹಿರಿಯ ಕಾಂಗ್ರೆಸ್ ನಾಯಕಿ ಲೀನಾ ಮತಾಯಸ್ ರವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು…ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರು ಮಾತನಾಡಿ ಲೀನಾ ಮತಾಯಸ್ ರವರು ಪಕ್ಷಕ್ಕಾಗಿ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.
ಪಕ್ಷದ ಕಾರ್ಯಕರ್ತರಿಗೆ ವಿವಿಧ ಹುದ್ದೆಗಳನ್ನು ನೀಡಿ ಅವರನ್ನು ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು ಹಾಗೂ ಪಕ್ಷದ ಸಭೆಯಲ್ಲಿ ಗೈರು ಹಾಜರಾಗಿದ್ದ ಪಂಚಾಯತ್ ಅಧ್ಯಕ್ಷರು ಮತ್ತು ಪಕ್ಷದ ಸಭೆಗಳಲ್ಲಿ ಭಾಗವಹಿಸದ ನಾಯಕರ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದರು, ಮೇ 27ರಂದು ಇನ್ನಂಜೆಯಲ್ಲಿ ನಡೆಯುವ ಗಾಂಧಿ ಭಾರತ ಸಂವಿಧಾನ ಜಾಗೃತಿ ಕಾರ್ಯಕ್ರಮದಲ್ಲಿ ಎಲ್ಲಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು ಹಾಗೂ ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಸಭೆಗೆ ಪರಿಚಯಿಸಿದರು
ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡ ಶ್ರೀ ವೈ ಸುಕುಮಾರ್ ರವರನ್ನು ಶಿರ್ವ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಅಭಿನಂದಿಸಲಾಯಿತು
ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮಾತನಾಡಿ ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಗೆ ಒತ್ತು ನೀಡಿ ನಮ್ಮಲ್ಲಿರುವ ಸಮಸ್ಯೆಗಳನ್ನು ಸರಿಪಡಿಸಿ ಪಕ್ಷವನ್ನು ಮುನ್ನಡೆಸುವುದಾಗಿ ತಿಳಿಸಿ ಎಲ್ಲರ ಸಹಕಾರ ಕೋರಿದರು… ಕಾಪು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಮಹಮ್ಮದ್ ನಿಯಾಜ್, ಉಪಾಧ್ಯಕ್ಷರಾಗಿ ನೇಮಕಗೊಂಡ ಶ್ರೀ ಅಬ್ದುಲ್ ಲತೀಫ್, ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ನೇಮಕಗೊಂಡ ಶ್ರೀ ಹಸನಬ್ಬ ಶೇಕ್, ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಶ್ರೀಮತಿ ಗೀತಾ ವಾಗ್ಳೆ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾಗಿ ನೇಮಕಗೊಂಡ ಲೂಕಾಸ್ ಡಿಸೋಜ, ಗ್ಲ್ಯಾಡಿಸ್ ಅಲ್ಮೇಡ, ಕ್ರಿಶ್ಚಿಯನ್ ಅಭಿವೃದ್ಧಿ ಮಂಡಳಿ ನಿರ್ದೇಶಕರಾಗಿ ನೇಮಕಗೊಂಡ ಶಿರ್ವ ಗ್ರಾಮೀಣ ಕಾಂಗ್ರೆಸ್ ಉಸ್ತುವಾರಿ ಶ್ರೀ ಪ್ರಶಾಂತ್ ಜತ್ತನ್ನ ರವರನ್ನು ಪಕ್ಷದ ವತಿಯಿಂದ ಅಭಿನಂದಿಸಲಾಯಿತು…. ಪಕ್ಷದ ಸಭೆಗೆ ಕುರ್ಚಿ ಖರೀದಿಸಲು ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು. ಸಭೆಯನ್ನು ಅವರ ಮನೆಯಲ್ಲಿ ನಡೆಸಲು ಅವಕಾಶ ನೀಡಿದ ಶ್ರೀ ಹೆನ್ರಿ ಅಲ್ಮೇಡ ರವರಿಗೆ ಶ್ರೀ ವಿನಯ್ ಕುಮಾರ್ ಸೊರಕೆ ಅವರು ಶಾಲು ಹೊದಿಸಿ ಧನ್ಯವಾದ ಸಲ್ಲಿಸಿದರು…
ಸಭೆಯಲ್ಲಿ ಮೊದಲು ಬಂದು ಭಾಗವಹಿಸಿದ ಶೈಲ ನಜ್ರತ್, ಗ್ಲಾಡಿಸ್ ಅಲ್ಮೆಡ, ಗ್ರೇಟ್ಟ ರೋಡ್ರಿಗಸ್, ಸುರೇಶ್ ಪೂಜಾರಿ, ಹೆಕ್ಟರ್ ಅಲ್ಮೇಡ ಹಾಗೂ ಅದೃಷ್ಟದ ವ್ಯಕ್ತಿಯಾಗಿ ಆಯ್ಕೆಯಾದ ಲಾರೆನ್ಸ್ ಡಿಸೋಜ ಮತ್ತು ಸುಜಾತ ಪೂಜಾರ್ತಿ ರವರಿಗೆ ಬಹುಮಾನ ನೀಡಲಾಯಿತು…. ಸಭೆಯಲ್ಲಿ ಶ್ರೀ ವಿಲ್ಸನ್ ರೋಡ್ರಿಗಸ್, ರತನ್ ಶೆಟ್ಟಿ, ಸ್ಟಾನ್ಲಿ ಡಯಾಸ್, ಪ್ರೀತಿ ಸಾಲಿನ್ಸ್, ಕೀರ್ತನ್ ಪೂಜಾರಿ, ವಿಲಿಯಂ ಮಚಾದೊ, ಲಕ್ಷ್ಮಣ್ ಪೂಜಾರಿ, ಗೋಡ್ವಿನ್ ಕ್ವಾಡ್ರಸ್, ಮೆಗೇಶ್ ಪೂಜಾರಿ, ಜೈನುದ್ದೀನ್, ಗಿಲ್ಬರ್ಟ್ ಕೋರ್ಡ, ವಿನ್ಸೆಂಟ್ ನಜ್ರತ್, ಪ್ಲಾವಿಯಾ ಡಿಸೋಜ, ಪಂಚಾಯತ್ ಸದಸ್ಯರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು…. ಶ್ರೀ ಮೆಲ್ವಿನ್ ಡಿಸೋಜ ಸ್ವಾಗತಿಸಿ ವಂದಿಸಿದರು.