ಶೈಕ್ಷಣಿಕವಾಗಿ ಹಿಂದುಳಿದ ಮುಸ್ಲಿಂ ಸಮುದಾಯ ಜೈಲಿನಲ್ಲಿ ಹೆಚ್ಚಿರುವುದು ದುರಂತ : ಅಬ್ದುಸ್ಸಲಾಂ ಪುತ್ತಿಗೆ

Spread the love

ಶೈಕ್ಷಣಿಕವಾಗಿ ಹಿಂದುಳಿದ ಮುಸ್ಲಿಂ ಸಮುದಾಯ ಜೈಲಿನಲ್ಲಿ ಹೆಚ್ಚಿರುವುದು ದುರಂತ : ಅಬ್ದುಸ್ಸಲಾಂ ಪುತ್ತಿಗೆ

ಮಂಗಳೂರು : ಮುಸ್ಲಿಂ ಸಮುದಾಯದ ಜನ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಸಾಕಷ್ಟು ಹಿಂದೆ ಉಳಿದಿದ್ದಾರೆ, ಸಂಸತ್ತಿನಲ್ಲಿ ಮುಸ್ಲಿಂರ ಪಾರತಿನಿಧ್ಯ ಕೇವಲ ಶೇಕಡಾ 4, ಸಾಕ್ಷರರ ಸಂಖ್ಯೆ ಶೇಕಾ 42, ಆದರೆ ಜೈಲುಗಳಲ್ಲಿ ಮಾತ್ರ ಜಾಸ್ತಿ ಇದ್ದಾರೆಂಬುದು ದುರಂತ ಎಂದು ವಾರ್ತಾ ಭಾರತಿ ದೈನಿಕದ ಪ್ರಧಾನ ಸಂಪಾದಕರಾದ ಅಬ್ದುಸ್ಸಲಾಂ ಪುತ್ತಿಗೆ ಹೇಳಿದರು.

ಮಂಗಳೂರಿನ ಬಲ್ಮಠದ ಶಾಂತಿನಿಲಯದ ಸಭಾಂಗಣದಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಸನ್ (ಡಿವೈಎಫ್‍ಐ) ಆಯೋಜಿಸಿರುವ ಎರಡು ದಿನಗಳ ಮುಸ್ಲಿಂ ಯುವ ಸಮಾವೇಶದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ದೇಶದ ಭಿಕ್ಷಾಟನರಯಲ್ಲಿ ಕೂಡ ಮುಸ್ಲಿಮರು ಮುಂದಿರುವುದು ಆ ಸಮುದಾಯದ ದಯನೀಯ ಸ್ಥಿತಿಗೆ ಹಿಡಿದ ಕನ್ನಡಿ, ಮುಸ್ಲಿಂರ ಈ ಸಂಖ್ಯೆಗೆ ದಲಿತರ ಆದಿವಾಸಿಗಳ ಪ್ರಮಾಣವನ್ನು ಸೇರಿಸಿದರೆ ಅದು ಶೇಕಡಾ 40ನ್ನು ದಾಟುತ್ತದೆ ಎಂದರು. ದೇಶದ ಜೈಲುಗಳಲ್ಲಿರುವ ಒಟ್ಟು ಖೈದಿಗಳ ಪೈಕಿ ಶೇಕಡಾ 14 ರಷ್ಟು ಶಿಕ್ಷೆಗೊಳಗಾದ ಖೈದಿಗಳು, ಶೇಕಡಾ25 ರಷ್ಟು ವಿಚಾರಣಾಧೀನ ಖೈದಿಗಳು ಹೀಗಾಗಿ ನಮ್ಮ ಸಮಸ್ಯೆಗಳೇನು ಎಂದು ಪಟ್ಟಿ ಮಾಡಬೇಕಿದೆ ಎಂದು ಅಬ್ದುಸ್ಸಲಾಂ ಪುತ್ತಿಗೆ ಅಭಿಪ್ರಾಯ ಪಟ್ಟರು.

ಬಾಬರಿ ಮಸೀದಿ ಧ್ವಂಸ ಸಮಸ್ಯೆ ನಮ್ಮನ್ನು ಬಹಳ ಕಾಲ ಕಾಡಿತು, ಈಗ ಮೈಕ್‍ನ ಸಮಸ್ಯೆ, ಟ್ರಿಪಲ್ ತಲಾಕ್ ಸಮಸ್ಯೆ ಹೀಗೆ ಇಂತಹ ಸಮಸ್ಯೆಗಳ ಬಗ್ಗೆ ಜೀವಮಾನವಿಡೀ ನಾವು ಮಾತನಾಡುತ್ತಲೇ ಇರುತ್ತೇವೆ, ಮೈಕ್‍ನ ಸಮಸ್ಯೆಗೆ ನಾವು ಜೀವ ಕೊಡಲು ತಯಾರಿದ್ದೇವೆ ಎನ್ನುತ್ತಾರೆ. ಅಂದರೆ ನಾವು ನಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸುವುದರಲ್ಲಿಯೇ ಸಮಯ ಕಳೆಯುತ್ತಿದ್ದೇವೆ. ಯಾವ ಸಮಸ್ಯೆಯನ್ನು ಚರ್ಚಿಸಬೇಕು? ಯಾವ ಸಮಸ್ಯೆಗೆ ನಾವು ತ್ಯಾಗ ಬಲಿದಾನಕ್ಕೆ ತಯಾರಿರಬೇಕು? ಎಂಬುದನ್ನು ಯೋಚಿಸಬೇಕು ಎಂದು ಪುತ್ತಿಗೆ ಹೇಳಿದರು.

ಈ ದೇಶದಲ್ಲಿ ರಣಹೇಡಿಗಳ ಒಂದು ಪೆ ಇದೆ, ಅವರು ತಮಗಿಂತ ಕಿಮೆ ಇರುವ ವರ್ಗದ ಮೇಲೆಯೇ ದಾಳಿ ಮಾಡೋದು, ದಲಿತರ ಸಮಸ್ಯೆ ಹಿಂದೆ ಮುಸ್ಲಿಮರಿಗೆ ನೆರೆಹೊರೆ ಯರ ಸಮಸ್ಯೆ ಆಗಿತ್ತು ಆದರೆ ಈಗ ನಮ್ಮ ಮನೆ ಬಾಗಿಲಿಗೆ ಸಮಸ್ಯೆ ಬಂದಿದೆ. ಅದನ್ನು ಹೇಗೆ ಪರಿಸಹರಿಸಿಕೊಳ್ಳಬೇಕು? ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳಬೇಕು ಎಂದು ಪುತ್ತಿಗೆ ಖಚಿತವಾಗಿ ಹೇಳಿದರು.

ನನ್ನ ರಕ್ಷಣೆಗೆ ನಾನು ಪಿಸ್ತೂಲು ಇಟ್ಟುಕೊಂಡರೆ ವರ್ಷಾನುಗಟ್ಟಲೇ ಜೈಲಿನಲ್ಲಿ ಕೊಳೆಯಬೇಕಾದಂತಹ ಪರಿಸ್ಥಿತಿ ಇದೆ ಎಂದ ಅಬ್ದುಸ್ಸಲಾಮ್ ಪುತ್ತಿಗೆ ಕೋಮುವಾದ ನಮ್ಮ ಅತಿ ದೊಡ್ಡ ಸಮಸ್ಯೆ ಆದರೆ ಈ ಸಮಸ್ಯೆಯನ್ನು ಪರಿಹರಿಸಲು ಯಾವುದೇ ಜಾತ್ಯಾತೀತ ಪಕ್ಷಗಳು ಅಥವಾ ನೇರವಾಗಿ ಹೇಳುವುದಾದರೆ ಕಾಂಗ್ರೆಸ್ ಯಾವತ್ತೂ ತನ್ನ ಸಮಸ್ಯೆ ಅಂದುಕೊಳ್ಳಲೇ ಇಲ್ಲ. ಅದನ್ನು ಒಂದು ಸಮಸ್ಯೆ ಎಂದು ಪರಿಗಣಿಸಲೇ ಇಲ್ಲ ಹೀಗಾಗಿ ನಮ್ಮ ಸಮಸ್ಯೆಗೆ ನಾವೇ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.

ಯಾರನ್ನಾದರೂ ಕೊಲ್ಲುವುದಾದರೆ ಕೋಮು ಗಲಭೆ ಸೃಷ್ಟಿಸಿದರೆ ಸಾಕು, ಅವರನ್ನು ಸುಲಭವಾಗಿ ಕೊಲ್ಲಬಹುದು ಎಂಬಂತಹ ಸ್ಥಿತಿ ಇದೆ. ಜಗತ್ತಿನಲ್ಲಿ ಎಲ್ಲರೂ ಮೂರ್ಖರಲ್ಲ ಭಾರತೀಯರು ಸತ್ಯವನ್ನು ಪ್ರೀತಿಸುವವರು ಎಂಬುದನ್ನು ನಾವು ಮರೆಯಬಾರದೆಂದು ಪುತ್ತಿಗೆ ಹೇಳಿದರು.

ಮುಸ್ಲಿಓರನ್ನು ಅನ್ಯರೆಂದು ಬಿಂಬಿಸುವ ಕೆಲಸ ನಡೆದಿದೆ, ಹಾಗೆ ಬಿಂಬಿಸುವುದು ಒಂದು ಕೆಟ್ಟ ಮನಃಸ್ಥಿತಿ, ಆದರೆ ನಾವು ಎಷ್ಟು ಪ್ರಮಾಣದಲ್ಲಿ ಎಲ್ಲರೊಳಗೊಂದಾಗುವ ಪ್ರಯತ್ನ ಮಾಡಿದ್ದೇವೆ? ಎಂಬುದನ್ನೂ ಕೇಳಿಕೊಳ್ಳಬೇಕು. ದೇಶದ ವಿವಿಧ ಕ್ಷೇತ್ರಗಳಲ್ಲಿ ನಮ್ಮ ಪ್ರಾತಿನಿಧ್ಯ ಎಷ್ಟು? ಆದರೆ ಇಂತಹ ಹಿನ್ನಡೆಯ ಬಗ್ಗೆ ಮಾತಾಡಿದಾಗ ಮೀಸಲಾತಿಯ ಬಗ್ಗೆ ಪ್ರಸ್ತಾಪ ಮಾಡಲಾಡಗುತ್ತದೆ, ಆದರೆ ದಲಿತರಿಗೆ ಮೀಸಲಾತಿ ಇದೆ ಆದರೆ ಅವರು ಎಷ್ಟು ಜನ ಉನ್ನತ ಹುದ್ದೆಗಳನ್ನು ಪಡೆದಿದ್ದಾರೆ? ಅದಾನಿ ಅಂಬಾನಿ ಕಂಪನಿಗಳಲ್ಲಿ ದಲಿತ ಎಂಬ ಕಾರಣಕ್ಕೇ ಕೆಲಸ ಕೊಡುವುದಿಲ್ಲ ಎಂದು ಅಬ್ದುಸ್ಸಲಾಂ ಪುತ್ತಿಗೆ ವಿಷಾದ ವ್ಯಕ್ತಪಡಿಸಿದರು.

ಈ ಎಲ್ಲ ಕಾರಣಗಳಿಂದಾಗಿ ಮುಸ್ಲಿಮರು ಇಂದು ಸಾಮಾಜಿಕವಾಗಿ ದ್ವೀಪಗಳಾಗುತ್ತಿದ್ದಾರೆ, ಬದಲಾಗುತ್ತಿರುವ ಸಂದರ್ಭಕ್ಕನುಗುಣವಾಗಿ ನಾವು ಬದಲಾಗುವುದು ಅನಿವಾರ್ಯ ಎಂದು ಹೇಳಿದ ಅಬ್ದುಸ್ಸಲಾಂ ಪುತ್ತಿಗೆ ನಮ್ಮಲ್ಲೂ ಸಾಧಕರಿದ್ದಾರೆ, ಬರಹಗಾರರಿದ್ದಾರೆ ಅವರನ್ನೇಕೆ ಪರಿಚಯಿಸಬಾರದು? ನಮ್ಮ ನಡುವೆ ಕಟ್ಟಿದ ಗೋಎಗಳನ್ನು ನಾವು ಬೀಳಿಸಬೇಕು ಎಂದರು. ನಮ್ಮಲ್ಲಿ ಸಾಕಷ್ಟು ಸಂಘಟನೆಗಳು ಪಕ್ಷಗಳು ಇವೆ ಆದರೆ ಭಾರತದಂತೆ ಸಂಕೀರ್ಣ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಯಾರೂ ಸಫಲರಾಗಲಿಲ್ಲ ಹೀಗಾಗಿ ಸಂಘಟಿತ ಹೋರಾಟಗಳ ಈಗಿನ ತುರ್ತು ಎಂದರು.

ಮುಸ್ಲಿಂರಲ್ಲಿ ಸಮುದಾಯದಲ್ಲಿ ಸುಧಾರಣೆಯಾಗಬೇಕಿರುವುದು ಮುಸ್ಲಿಮರಿಂದಲೇ, ಆದರೆ ಈಗ ಪರಿಸ್ಥಿತಿಯೂ ಮೊದಲಿನಂತಿಲ್ಲ, ಸಮುದಾಯದಲ್ಲಿ ಸಾಕಷ್ಟು ಬದಲಾವಣೆ ಆಗಿದೆ, ಇಂದಿನ ಸ್ಥಿತಿಯಲ್ಲಿ ಮುಸ್ಲಿಮರಿಗೆ ಅಪಾಯ ಇರುವುದು ಧರ್ಮದ ತಿರುಳನ್ನು ಬಿಟ್ಟು ಅಕ್ಷರ ಹಿಡಿದು ಅರ್ಥ ಹುಡುಕುವುದರಲ್ಲಿ ಎಂದು ಪುತ್ತಿಗೆ ಹೇಳಿದರು.

ಪ್ರಜಾವಾಣಿ ದೈನಿಕದ ಸಹಾಯಕ ಸಂಪಾದಕ ಎನ್‍ಎಎಮ್ ಇಸ್ಮಾಯಿಲ್ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಸಕ್ರಿಯವಾಗಿ ಒಳಗೊಳ್ಳುವ ಮೂಲಕ ಕಲಿಕೆ ಶಿಕ್ಷಣದ ಮುಖ್ಯ ಭಾಗವಾಗಬೇಕು ಎಂದು ಹೇಳಿದರು.
ಇಬ್ಬರ ಮಾತುಗಳ ನಂತರ ಸಭಿಕರೊಡನೆ ಪ್ರಶ್ನೋತ್ತರ ಸಂವಾದ ನಡೆಯಿತು.


Spread the love

1 Comment

  1. Finally we have someone who is not afraid to admit the reality and challenge his own community. One doesn’t have to be a genius to figure out the crime issue he has pointed out. Our media and stenographers are a bigger joke than our clueless politicians. Muslim community is the victim and they have suffered enough in the hands of certain political parties and lazy media. It’s important that our society encourages everyone to come forward and progress in life.

Comments are closed.