ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಪೂರ್ಣ ಪ್ರಮಾಣದ ಸಭೆ

Spread the love

 ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಪೂರ್ಣ ಪ್ರಮಾಣದ ಸಭೆ

ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಪೂರ್ಣ ಪ್ರಮಾಣದ ಸಭೆಯು ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋರವರ ಅಧ್ಯಕ್ಷತೆಯಲ್ಲಿ ಇಂದು ನಗರದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.70ಕ್ಕೂ ಮಿಕ್ಕಿದ ಸದಸ್ಯರು ಸ್ವಯಂಸ್ಪೂರ್ತಿಯಿಂದ ಭಾಗವಹಿಸಿರುವುದು ಕಾರ್ಯಕ್ರಮದ ಹುಮ್ಮಸ್ಸನ್ನು ಹೆಚ್ಚಿಸಿದೆ.

ಕಾರ್ಯಕ್ರಮದ ವರ್ಣರಂಜಿತ ಕರಪತ್ರವನ್ನು ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋರವರು ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸ್ಟಾನಿ ಆಲ್ವಾರೀಸ್ ರವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು.ಸೆಪ್ಟೆಂಬರ್ 11ರ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಬಗ್ಗೆ ಹಲವರು ಸಭೆಯಲ್ಲಿ ಮಾತನಾಡುವ ಮೂಲಕ ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿದರು. ವೇದಿಕೆಯಲ್ಲಿ ಕೆಥೋಲಿಕ್ ಸಭಾದ ಅಧ್ಯಕ್ಷರಾದ ಸಂತೋಷ್ ಡಿಸೋಜ ಬಜಪೆ,ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ನಾಯಕರಾದ ಲಕ್ಷ್ಮಣ್, ಯೆನಪೋಯ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಜೀವನ್ ರಾಜ್ ಕುತ್ತಾರ್,ಸಂತ ಅಲೋಶಿಯಸ್ ಕಾಲೇಜ್ ನ ಪ್ರಾಧ್ಯಾಪಕರಾದ ಫ್ಲೋರಾ ಕ್ಯಾಸ್ಟಲಿನೋ, ಸಾಮರಸ್ಯ ಮಂಗಳೂರು ಅಧ್ಯಕ್ಷರಾದ ಮಂಜುಳಾ ನಾಯಕ್,ಮಹಿಳಾ ಮುಖಂಡರಾದ ಸುಮತಿ ಎಸ್ ಹೆಗ್ಡೆ, ವೇದಿಕೆಯ ಪ್ರಮುಖರಾದ ಡೋಲ್ಫಿ ಡಿಸೋಜರವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವೇದಿಕೆಯ ಪ್ರಮುಖರಾದ ಸ್ಟಾನಿ ಲೋಬೋ, ಡಾ ಕ್ರಷ್ಣಪ್ಪ ಕೊಂಚಾಡಿ, ಶೆಟ್ಟಿ, ಡಾ.ವಸಂತ ಕುಮಾರ್, ಕೆ ಕರಿಯ,ಎರಿಕ್ ಲೋಬೋ, ಫ್ಲೇವಿಕ್ರಾಸ್ತಾ ಅತ್ತಾವರ,ಮರ್ಲಿನ್ ರೇಗೋ,ಬಿ ಎನ್ ದೇವಾಡಿಗ, ಮಿಥುನ್ ರಾಜ್ ಕುತ್ತಾರ್, ಅಶೋಕನ್ ಬೋಳಾರ, ಸಂತೋಷ್ ಡಿಸೋಜ ಪಂಜಿಮೊಗರು, ಸಮರ್ಥ್ ಭಟ್, ಗ್ರೆಟ್ಟಾ ಟೀಚರ್,ಎಸ್ ಎಲ್ ಪಿಂಟೋ,ಆಲ್ವಿನ್ ಡಿಸೋಜ, ಅಸುಂತ ಡಿಸೋಜ, ವಿದ್ಯಾ ಶೆಣೈ, ಜೆ ಇಬ್ರಾಹಿಂ ಜೆಪ್ಪು,ಹೆಝಲ್ ಟೀಚರ್,ಕ್ವೀನಿ‌ ಪರ್ಸಿ ಆನಂದ್, ಪುರುಷೋತ್ತಮ ಪೂಜಾರಿ, ಫ್ಲೋರಿನ್ ಡಿಸೋಜ, ಅರುಣ್ ಡಿಸೋಜ ಶಕ್ತಿನಗರ, ಸಂತೋಷ್ ಬಜಾಲ್, ಯೋಗೀಶ್ ಜಪ್ಪಿನಮೊಗರು,ಟೋನಿ ಪಿಂಟೊ, ಚರಣ್ ಶೆಟ್ಟಿ, ನವೀನ್ ಕೊಂಚಾಡಿ, ಫೆಲಿಕ್ಸ್ ಡಿಸೋಜ, ರಾಕೇಶ್ ಕುಂದರ್,ಓಸ್ವಾಲ್ಡ್ ಪುರ್ತಾಡೋ,ಜೇಮ್ಸ್ ಪ್ರವೀಣ್, ಕಮಲಾಕ್ಷ ಜಲ್ಲಿಗುಡ್ಡ,ರವೀಂದ್ರ ವಾಮಂಜೂರು, ಕ್ರಿಸ್ಟನ್ ಮೆನೇಜಸ್,ಶೇಖರ್ ವಾಮಂಜೂರು,ನಿತಿನ್ ಬಂಗೇರ ಯೆಯ್ಯಾಡಿ,ತಯ್ಯುಬ್ ಬೆಂಗರೆ,ರೆಹಮಾನ್ ಖಾನ್ ಕುಂಜತ್ತಬೈಲ್,ಜ್ಯೋತಿ, ಮಹಮ್ಮದ್ ಆಯೂಬ್ ಷಾ, ನೀತಾ ಡಿಸೋಜ, ಶೈಲಜಾ ರಾಜೇಶ್,ಕ್ರಷ್ಣ ಇನ್ನಾ ಮುಂತಾದವರು ಹಾಜರಿದ್ದರು


Spread the love
Subscribe
Notify of

0 Comments
Inline Feedbacks
View all comments