ಸೋನಂ ವಾಂಗ್ಚುಕ್- ಸಿಜೆಪಿ ಹೋರಾಟಕ್ಕೆ ಬೆಂಬಲಿಸಿ ನಿವೃತ್ತ ಪತ್ರಕರ್ತನಿಂದ 48 ಗಂಟೆಗಳ ಉಪವಾಸ

Spread the love

ಸೋನಂ ವಾಂಗ್ಚುಕ್- ಸಿಜೆಪಿ ಹೋರಾಟಕ್ಕೆ ಬೆಂಬಲಿಸಿ ನಿವೃತ್ತ ಪತ್ರಕರ್ತನಿಂದ 48 ಗಂಟೆಗಳ ಉಪವಾಸ

ಮಂಗಳೂರು: ನಿವೃತ್ತ ಪತ್ರಕರ್ತ ಹಾಗೂ ಶೈಕ್ಷಣಿಕ ಕಾರ್ಯಕರ್ತರಾಗಿರುವ ಶ್ರೀನಿವಾಸನ್ ನಂದಗೋಪಾಲ್ ಅವರು, ಹೊಸದಿಲ್ಲಿಯಲ್ಲಿ ಸಿಜೆಪಿಯಿಂದ ನಡೆಯ್ತಿರುವ ಪ್ರತಿಭಟನೆ ಹಾಗೂ ಸಾಮಾಜಿಕ ಹೋರಟಾಗರ ಸೋನಂ ವಾಂಗ್ಚುಕ್ ಅವರನ್ನು ಬೆಂಬಲಿಸಿ 48 ಗಂಟೆಗಳ ಉಪವಾಸ ಸತ್ಯಾಗ್ರಹದ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

ರವಿವಾರ ಬೆಳಗ್ಗೆ ಉಪವಾಸ ಸತ್ಯಾಗ್ರಹ ಆರಂಭಿಸಿರುವ ನಂದಗೋಪಾಲ್ ಅವರು ಮಂಗಳವಾರ ಬೆಳಗ್ಗಿನವರೆಗೆ ಮುಂದುವರಿಸಲು ನಿರ್ಧರಿಸಿದ್ದಾರೆ.

ಅನಿರ್ದಿಷ್ಟಾವಧಿ ಮುಸ್ಕರದಲ್ಲಿರುವ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಹಾಗೂ ಇತರ ಪ್ರತಿಭಟನಾಕಾರರ ನೋವು ಮತ್ತು ಸಂಕಲ್ಪವನ್ನು ಅನುಭವಿಸುವ ನಿಟ್ಟಿನಲ್ಲಿ ತಾವು ಉಪವಾಸ ಕೈಗೊಂಡಿರುವುದಾಗಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ನಂದಗೋಪಾಲ್, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ಅವರು ರಾಜೀನಾಮೆ ನೀಡಬೇಕು ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿನ ಬದ್ಧತೆಗಾಗಿ ರಾಷ್ಟ್ರವ್ಯಾಪಿಯಾಗಿ ಕೇಳಿ ಬಂದಿರುವ ಬೇಡಿಕೆಯನ್ನು ಸಮರ್ಥಿಸುವುದಾಗಿ ತಿಳಿಸಿದ್ದಾರೆ.

ನಂದಗೋಪಾಲ್ ಅವರು ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್‌ನ ಸಹ ಸಂಸ್ಥಾಪಕರು. ಈ ಸಂಸ್ಥೆ ಮಕ್ಕಳು ಮತ್ತು ಯುವಕರೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಶಿಕ್ಷಣವ್ಯವಸ್ಥೆಗೆ ವೌಲ್ಯವನ್ನು ಒದಗಿಸುವ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಇತ್ತೀಚೆಗೆ ‘ಡ್ರೀಮ್ಸ್ ಆನ್ ವೀಲ್ಸ್’ ಎಂಬ ಬೈಕ ಅಭಿಯಾನವನ್ನೂ ನಂದಗೋಪಾಲ್ ಅವರು ಪೂರೈಸಿದ್ದಾರೆ. ಈ ಬೈಕ್ ರ್ಯಾಲಿ ಮೂಲಕ ಅವರು 6500 ಕಿ.ಮೀ. ಪ್ರಯಾಣ ಬೆಳೆಸಿ 5000ಕ್ಕೂ ಅಧಿಕ ಸರಕಾರಿ ಶಾಲಾ ಮಕ್ಕಳೊಂದಿಗೆ ಪರೀಕ್ಷಾ ಸಿದ್ಧತೆ ಮತ್ತು ವೃತ್ತಿ ದೃಷ್ಟಿಕೋನದ ಬಗ್ಗೆ ಸಂವಾದ ನಡೆಸಿದ್ದರು.

‘ಶಿಕ್ಷಣಕ್ಕೆ ಪರ್ಯಾಯ ವಿಧಾನಗಳ ಕ್ಷೇತ್ರದಲ್ಲಿ ನಾನು ಕಾರ್ಯ ನಿರ್ವಹಿಸುತ್ತಿರುವುದರಿಂದ ನಮ್ಮ ವ್ಯವಸ್ಥೆಯ ಪ್ರಸಕ್ತ ಸ್ಥಿತಿ ಮತ್ತು ಪರೀಕ್ಷೆಗೆ ಸಂಬಂಧಿಸಿದ ಮೋಸಗಳು ನಿರಂತರವಾಗಿ ನಡೆಯುತ್ತಿರುವುದು ನಿರಾಶದಾಯಕವಾಗಿದೆ. ಹಾಗಾಗಿ ಈಗ ಯಾರಾದರೂ ಬೆಕ್ಕಿಗೆ ಗಂಟೆ ಕಟ್ಟುವ ಸಮಯ ಬಂದಿದೆ’ ಎಂದು ನಂದಗೋಪಾಲ್ ಪ್ರತಿಕ್ರಿಯಿಸಿದ್ದಾರೆ.


Spread the love
Subscribe
Notify of

0 Comments