ಹೆಮ್ಮಾಡಿಯಲ್ಲಿ ‘ಕೈ’ ಹಿಡಿದ ‘ಕಮಲ’ ಕಾರ್ಯಕರ್ತರು!

Spread the love

ಹೆಮ್ಮಾಡಿಯಲ್ಲಿ ‘ಕೈ’ ಹಿಡಿದ ‘ಕಮಲ’ ಕಾರ್ಯಕರ್ತರು!

ಕುಂದಾಪುರ: ಶನಿವಾರ ನಡೆದ ಸಭೆಯೊಂದರಲ್ಲಿ ಬಿಜೆಪಿ ಕಾರ್ಯಕರ್ತರನ್ನು ಕೈ ತೆಕ್ಕೆಗೆ ಸೇರಿಸಿಕೊಳ್ಳುವ ಹೇಳಿಕೆ ನೀಡಿದ್ದ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಸವಾಲು ನಿಜಮಾಡಿದ್ದು ಭಾನುವಾರ 50ಕ್ಕೂ ಅಧಿಕ ಕಮಲ ಪಕ್ಷದ ಯುವ ಕಾರ್ಯಕರ್ತರು ‘ಕೈ’ ಹಿಡಿಯುವ ಮೂಲಕ ಬೈಂದೂರು ಬಿಜೆಪಿಗೆ ಬಹುದೊಡ್ಡ ಆಘಾತ ನೀಡಿದ್ದಾರೆ.

ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಕಟ್ ಬೆಲ್ತೂರು ನಿವಾಸದಲ್ಲಿ ಕಟ್ ಬೆಲ್ತೂರು, ಹೆಮ್ಮಾಡಿ ಗ್ರಾ.ಪಂ ವ್ಯಾಪ್ತಿಯ ಬಿಜೆಪಿ ಯುವ ಕಾರ್ಯಕರ್ತರು ಭಾನುವಾರ ಕಾಂಗ್ರೆಸ್ ಗೆ ಅಧಿಕೃತವಾಗಿ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಸುಕುಮಾರ್ ಶೆಟ್ಟಿಯವರು ಕಾಂಗ್ರೆಸ್ ಕಾರ್ಯಕರ್ತರನ್ನು ತಮ್ಮ ಪಕ್ಷಕ್ಕೆ ಬರುವಂತೆ ಹೇಳುವ ಬಗ್ಗೆ ಪ್ರತಿಕ್ರಿಯಿಸಿ ಕಾಂಗ್ರೆಸ್ ಕೂಡ ಬಿಜೆಪಿಗರನ್ನು ಪಕ್ಷಕ್ಕೆ ಸೆಳೆಯುತ್ತದೆ ಎನ್ನುವ ಬಗ್ಗೆ ಶನಿವಾರ ನಡೆದ ಸಭೆಯಲ್ಲಿ ಹೇಳಿಕೆ ನೀಡಿದ್ದು ಅದಕ್ಕೆ ಪೂರಕವಾಗಿ ಹೆಮ್ಮಾಡಿ ಹಾಗೂ ಕಟ್ ಬೆಲ್ತೂರು ಗ್ರಾ.ಪಂ ವ್ಯಾಪ್ತಿಯ ಬಿಜೆಪಿ ಯುವ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಲಾಗಿದೆ‌. ಇದು ಸಾಂಕೇತಿಕವಾಗಿ ಪ್ರಾರಂಭಗೊಂಡಿದ್ದು ಮುಂದಿನ ದಿನಗಳಲ್ಲಿ ಕರಾವಳಿಯಿಂದ ಮೊದಲ್ಗೊಂಡು ಮಲೆನಾಡು ತನಕವೂ ಬಿಜೆಪಿಗರನ್ನು ಕೈ ಪಾಳಯಕ್ಕೆ ಕರೆತರುವ ಕಾರ್ಯ ನಿರಂತರವಾಗಿ ನಡೆಯಲಿದೆ ಎಂದರು.

ಕಟ್ ಬೆಲ್ತೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಮಾತನಾಡಿ, ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದ ಹೆಮ್ಮಾಡಿ, ಕಟ್ ಬೆಲ್ತೂರು ಗ್ರಾ.ಪಂ ವ್ಯಾಪ್ತಿಯ ಯುವಕರ ತಂಡ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿಯವರ ಮೇಲೆ ವಿಶ್ವಾಸವಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಮುಂದಿನ ಗ್ರಾ.ಪಂ ಚುನಾವಣೆಯಲ್ಲಿ ಹೆಮ್ಮಾಡಿ ಹಾಗೂ ಕಟ್ ಬೆಲ್ತೂರು ಗ್ರಾಮಪಂಚಾಯತಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವ ಪಣತೊಟ್ಟಿದ್ದು ಎರಡು ಪಂಚಾಯತಿಯಲ್ಲಿ ನಮ್ಮದೆ ಗೆಲುವು ಎಂದರು

ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಸತ್ಯನಾರಾಯಣ್ ಹೆಮ್ಮಾಡಿ (ನಾಣಿ), ಮುಖಂಡರಾದ ಕೃಷ್ಣಮೂರ್ತಿ ಹೆಮ್ಮಾಡಿ, ಪ್ರಶಾಂತ್ ಪೂಜಾರಿ ಕರ್ಕಿ, ರಾಜು ಪೂಜಾರಿ ಹೆಮ್ಮಾಡಿ, ಯಾಸಿನ್ ಹೆಮ್ಮಾಡಿ, ಸಂತೋಷ್ ಕುಮಾರ್ ತೋಟಬೈಲು, ರಾಘವೇಂದ್ರ ಹೆಮ್ಮಾಡಿ, ಸುಧಾಕರ ಕಟ್ಟು, ಸಚ್ಚೀಂದ್ರ ಜಾಲಾಡಿ ನೇತೃತ್ವದಲ್ಲಿ ಯುವಕರ ಸೇರ್ಪಡೆ ಕಾರ್ಯ ನಡೆಯಿತು.


Spread the love