ಕುಂದಾಫುರ: ಶಾಲಾ ಅಭಿವೃದ್ಧಿ ಹಣ ದುರುಪಯೋಗ ; ಶಿಕ್ಷಕಿ ವಿರುದ್ದ ಪ್ರಕರಣ ದಾಖಲು

ಕುಂದಾಫುರ: ಶಾಲಾ ಅಭಿವೃದ್ದಿಯ ಹಣವನ್ನು ದುರುಪಯೋಗಪಡಿಸಿಕೊಂಡ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕಿಯೋರ್ವರ ವಿರುದ್ದ ಶುಕ್ರವಾರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ ಘಟನೆ ನಡೆದಿದೆ.

ಕುಂಭಾಶಿ ನಿವಾಸಿ ಖುರ್ಷಿದಾ ಬೇಗಂ, 10-04-2006 ರಿಂದ 20-03-2014 ರವರೆಗೆ ಕುಂದಾಪುರ ತಾಲೂಕು ಹಂಗಳೂರು ಗ್ರಾಮದ ಬಡಾಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ಸರಕಾರದ ನೀತಿ ನಿಯಮ ಪಾಲಿಸದೇ ಶಾಲೆಯ ಅಭಿವೃದ್ದಿಗೆ ವಿನಿಯೋಗಿಸಬೇಕಾಗಿದ್ದ ಸರಕಾರಿ ಹಣ ಹಾಗೂ ದಾನಿಗಳಿಂದ ಸಂಗ್ರಹಿಸಿದ ಹಣದ ಒಟ್ಟು ರೂಪಾಯಿ 4,39,597/- ಅನ್ನು ದುರುಪಯೋಗಪಡಿಸಿಕೊಂಡಿದ್ದು, ಈ ಕುರಿತು ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಹೆಚ್‌. ಶೋಭಾ ಶೆಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕುಂದಾಪುರ ವಲಯ ಕುಂದಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

Leave a Reply