ಕುವೈತ್ ಕನ್ನಡ ಕೂಟ – ನೂತನ ಕಾರ್ಯಕಾರಿ ಸಮಿತಿ ಆಯ್ಕೆ

ಕುವೈತ್: ಕುವೈತ್ ಕನ್ನಡ ಕೂಟದ ವರ್ಷಾಂತ್ಯದ ಕಾರ್ಯಕ್ರಮದ ಅಂಗವಾಗಿ, ಇತ್ತೀಚೆಗೆ ಕಾರ್ಮೆಲ್ ಸ್ಕೂಲ್, ಖೈತಾನ್‍ನ ಸಭಾಂಗಣದಲ್ಲಿ ವಾರ್ಷಿಕ ಮಹಾಸಭೆಯು ಜರುಗಿತು. 2016 ರ ಸಾಲಿಗೆ ನೂತನ ಕಾರ್ಯಕಾರಿ ಸಮಿತಿಯನ್ನು ಆರಿಸಲಾಯಿತು. ನಿರ್ಗಮನ ಅಧ್ಯಕ್ಷರಾದ ಶ್ರೀ ಸುಧೀರ್ ಶೆಣೈಯವರು ಸದಸ್ಯರ ಸಹಕಾರಕ್ಕೆ ಸಂತಸ ವ್ಯಕ್ತಪಡಿಸಿ, ಕೃತಜ್ಞತೆ ಸಲ್ಲಿಸಿದರು.

ನೂತನ ಅಧ್ಯಕ್ಷರಾದ ಸಿ.ಎ. ಪ್ರಶಾಂತ ಶೆಟ್ಟಿಯವರು ಸರ್ವ ಸದಸ್ಯರ ಸಹಕಾರ, ಬೆಂಬಲ ಕೋರಿದರು. ಉಪಾಧ್ಯಕ್ಷರಾಗಿ ಶ್ರೀ ರಾಜೇಶ್ ವಿಠ್ಠಲ್ ಪಿಎಮ್‌ಪಿ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಪ್ರಭು ಆಚಾರ್, ಖಜಾಂಚಿಯಾಗಿ ಡಾ|ಶಶಿಕಿರಣ್ ಜಿ. ಪ್ರಭು ಸರ್ವಾನುಮತದಿಂದ ಆಯ್ಕೆಯಾದರು.

ನಂತರ ನೆಡೆದ ’ಸಂಧ್ಯಾರಾಗ’ ಕಾರ್ಯಕ್ರಮವು ಬೆಂಗಳೂರಿನಿಂದ ಆಗಮಿಸಿದ ತಂಡದಿಂದ ನೆಡೆದು ಸಂಗೀತ ರಸಸಂಜೆಯನ್ನು ಗಾನಪ್ರಿಯರು ಆಸ್ವಾದಿಸಿದರು. ನೂತನ ಕಾರ್ಯಕಾರಿ ಸಮಿತಿಗೆ ಶುಭ ಹಾರೈಸಲಾಯಿತು. ಧನ್ಯವಾದ ಸಮರ್ಪಣೆ ಹಾಗೂ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಬೆಳದಿಂಗಳ ಭೋಜನದೊಂದಿಗೆ ಹೊಸವರ್ಷದ ಆಚರಣೆಯನ್ನು ನೆಡೆಸಲಾಯಿತು.

Leave a Reply