ತುಳು ಅಕಾಡೆಮಿ  ಗೌರವ ಪ್ರಶಸ್ತಿ ಪ್ರದಾನ 

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ತುಳುಭವನ ಉರ್ವಸ್ಟೋರ್, ಮಂಗಳೂರು ಇಲ್ಲಿನ ‘ಸಿರಿಚಾವಡಿ’ಯಲ್ಲಿ ಡಿ.19 ರಂದು ಮಧ್ಯಾಹ್ನ 3 ಕ್ಕೆ ಗೌರವ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಹುಮಾನ ಸಮಾರಂಭ-2014 ಕಾರ್ಯಕ್ರಮ ನಡೆಯಲಿರುವುದು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಶಾಸಕ ಜೆ.ಆರ್. ಲೋಬೋ ವಹಿಸಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ  ಆಶೀರ್ವಚನ ನೀಡಲಿದ್ದಾರೆ.  ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ  ಗೌರವ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.   ವಿಶ್ರಾಂತ ಕುಲಪತಿಗಳಾದ  ಡಾ.ಬಿ.ಎ.ವಿವೇಕ ರೈ ಇವರು ಆಶಯ ಭಾಷಣ ಮಾಡಲಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ ಖಾದರ್, ಯುವಜನ ಸಬಲೀಕರಣ, ಕ್ರೀಡೆ ಮತ್ತು ಮೀನುಗಾರಿಕಾ ಸಚಿವರಾದ ಕೆ. ಅಭಯಚಂದ್ರ ಜೈನ್,  ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಶಕುಂತಳಾ ಟಿ.ಶೆಟ್ಟಿ, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನ ಅಧ್ಯಕ್ಷರಾದ   ಆಶಾ ತಿಮ್ಮಪ್ಪ ಗೌಡ, ಲೋಕ ಸಭಾ ಸದಸ್ಯರಾದ ನಳಿನ್‍ಕುಮಾರ್ ಕಟೀಲ್, ಶಾಸಕರಾದ ಬಿ.ಎ ಮೊೈದಿನ್ ಬಾವಾ, ಐವನ್ ಡಿ’ಸೋಜ, ಮಂಗಳೂರು ಮಹಾನಗರಪಾಲಿಕೆಯ ಮಹಾಪೌರರಾದ   ಜೆಸಿಂತಾ ವಿಜಯ ಆಲ್ಫ್ರೆಡ್, ಸದಸ್ಯರಾದ ರಾಧಾಕೃಷ್ಣ ಇವರು ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಡಾ.ಕನರಾಡಿ ವಾದಿರಾಜ ಭಟ್ (ಸಾಹಿತ್ಯ ಕ್ಷೇತ್ರ), ಯಮ್.ಕೆ ಸೀತಾರಾಮ್ ಕುಲಾಲ್ (ನಾಟಕ ಕ್ಷೇತ್ರ),  ರಾಮ್ ಶೆಟ್ಟಿ (ಸಿನಿಮಾ ಕ್ಷೇತ್ರ) ಇವರು 2014 ನೇ ಸಾಲಿನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ  ಗೌರವ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ, ಹಾಗೂ 2014 ನೇ ಸಾಲಿನ ಪುಸ್ತಕ ಬಹುಮಾನವನ್ನು  ಶಾರದಾ ಎ.ಅಂಚನ್ ಪಡೆಯಲಿದ್ದಾರೆ.

ಮಧ್ಯಾಹ್ನ 2.30 ರಿಂದ 3 ರವರೆಗೆ ಅಂತರಾಷ್ಟ್ರೀಯ  ಖ್ಯಾತಿಯ ಸಿಂಧೂ ಭೈರವಿ ಮತ್ತು ಮಚ್ಚೇಂದ್ರನಾಥರವರಿಂದ ಸ್ಯಾಕ್ಸೋಫೋನ್ ವಾದನ ಹಾಗೂ ಸಂ: 5 ರಿಂದ 5.30 ರವರೆಗೆ ರಾಜ್ಯ ಪ್ರಶಸ್ತಿ ವಿಜೇತ, ಸಸಿಹಿತ್ಲು ಯುವಕ ಮಂಡಲದವರಿಂದ ‘ಜನಪದ ನಲಿಕೆ’ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿರುವುದೆಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಣೆ ತಿಳಿಸಿದೆ.

Leave a Reply

Please enter your comment!
Please enter your name here