ಫೇಸ್ ಬುಕ್ನಲ್ಲಿ ಅವಹೇಳನ, ಬೆದರಿಕೆ, ಆತ್ಮಹತ್ಯೆಗೆ ಯತ್ನಿಸಿದ ಯುವಕ

ಫೇಸ್ ಬುಕ್ನಲ್ಲಿ ಅವಹೇಳನ, ಬೆದರಿಕೆ, ಆತ್ಮಹತ್ಯೆಗೆ ಯತ್ನಿಸಿದ ಯುವಕ

ಮಂಗಳೂರು: ಫೇಸ್ ಬುಕ್ ಖಾತೆಯಲ್ಲಿ ಕೆಟ್ಟ ಭಾಷೆಯಲ್ಲಿ ಅವಹೇಳನ ಮಾಡುವುದರೊಂದಿಗೆ ಜೀವ ಬೆದರಿಕೆ ಕರೆಗೆ ಹೆದರಿ ಜೆಪ್ಪು ನಿವಾಸಿ ನಿಜಾಮ್ (24) ಎಂಬ ಯುವಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ಸಂಭವಿಸಿದೆ.

image004nizam-suicide-20160808-004 image003nizam-suicide-20160808-003 image002nizam-suicide-20160808-002 image001nizam-suicide-20160808-001

ಜೆಪ್ಪುವಿನ ನಿಜಾಮುದ್ದೀನ್ ಬಂದರಿನಲ್ಲಿ ಟೆಂಪೋ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ರವಿವಾರ ವಿದೇಶದಿಂದ ಗೆಳೆಯರೊಬ್ಬರು ಕರೆ ಮಾಡಿ ಫೆಸ್ ಬುಕ್ಕಿನಲ್ಲಿ ನಿಜಾಮ್ ಕುರಿತು ಜಬ್ಬಾರ್ – ಬದ್ರದಳ ಬೆಂಗ್ರೆ ಘಟಕ ಎನ್ನುವ ಹೆಸರಿನಲ್ಲಿ ಕೆಟ್ಟ ಬಾಷೆಯಲ್ಲಿ ಬರೆದಿದ್ದಾರೆ ಎಂದು ಗಮನಕ್ಕೆ ತಂದಿದ್ದರು. ಇದನ್ನು ಕೇಳಿದ ನಿಜಾಮ್ ಅವರು ಫೆಸ್ ಬುಕ್ಕಿನಲ್ಲಿ ಹುಡುಕಿದಾಗ ಯಾವುದೇ ವಿಚಾರ ಸಿಗಲಿಲ್ಲ. ಮತ್ತೆ ಗೆಳೆಯ ಶಫೀಕ್ ಅವರಿಗೆ ನಿಜಾಮ್ ಈ ವಿಚಾರ ತಿಳಿಸಿದ್ದು ನಂತರ ಹುಡುಕಿದಾಗ ಕೆಟ್ಟದಾಗಿ ಬರೆದಿರುವ ವಿಚಾರ ತಿಳಿದಿದೆ.

ಇದಕ್ಕೆ ಪೂರಕ ಎಂಬಂತೆ ವಿದೇಶದಿಂದ ಕರೆಯೊಂದು ಬಂದಿದ್ದು, ಜೀವಬೆದರಿಕೆ ಒಡ್ಡಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ನಿಜಾಮ್ ಅವರು ರಾತ್ರಿ ಎಲ್ಲರೂ ಮಲಗಿದ್ದ ಸಂದರ್ಭದಲ್ಲಿ ಮನೆಯಲ್ಲಿದ್ದ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಫಿನಾಯಿಲ್ ಕುಡಿದು ವಿಪರೀತ ವಾಂತಿ ಮಾಡುತ್ತಿದ್ದ ನಿಜಾಮ್ ಅವರನ್ನು ಗಮನಿಸಿದ ಅವರ ಸಹೋದರ ನಗರದ ಆಸ್ಪತ್ರೆಗೆ ದಾಖಲಿಸಿದ್ದು ರಾತ್ರಿ ಐಸಿಯುನಲ್ಲಿ ಚಿಕಿತ್ಸೆ ಪಡೆದು ಸೋಮವಾರ ವಾರ್ಡಿಗೆ ಸ್ಥಳಾಂತರಿಸಿದ್ದಾರೆ.

ಪ್ರಕರಣ ಕುರಿತು ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Please enter your comment!
Please enter your name here