ಬಳ್ಳಾರಿ: ನೀರು ಪೂರೈಕೆ ಹೊಣೆ ಜಲಮಂಡಳಿಗೆ ; ವಿನಯ್‌ಕುಮಾರ್ ಸೊರಕೆ

ಬಳ್ಳಾರಿ: ನಗರದಲ್ಲಿ ನೀರು ಪೂರೈಕೆ ವ್ಯವಸ್ಥೆಯನ್ನು ಕೂಡಲೇ ಪಾಲಿಕೆಯು ನಗರ ನೀರು ಸರಬರಾಜು ಒಳಚರಂಡಿ ಮಂಡಳಿಗೆ ಹಸ್ತಾಂತರಿಸುವಂತೆ ನಗರಾಭಿವೃದ್ಧಿ ಸಚಿವ ವಿನಯ್‌ಕುಮಾರ್ ಸೊರಕೆ ಸೂಚಿಸಿದರು. ಅವರು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಬರ ಗಾಲ ನಿರ್ವಹಣೆ ಸಲುವಾಗಿ ಪಾಲಿ ಕೆಯು ಮಂಡಳಿಗೆ ಜವಾಬ್ದಾರಿಯನ್ನು 3 ತಿಂಗಳ ಮಟ್ಟಿಗೆ ಹಸ್ತಾಂತರಿಸಬೇಕು ಎಂದರು.

vinay-kumar-sorake-meeting-bellary - 01 vinay-kumar-sorake-meeting-bellary-02

ನಗರದಲ್ಲಿ 12–13ದಿನಕ್ಕೊಮ್ಮೆ ನೀರು ಪೂರೈಸುವುದರಿಂದ ಜನರಿಗೆ ಹೆಚ್ಚು ತೊಂದರೆಯಾಗುತ್ತಿದೆ. ನೀರು ಪೂರೈಕೆ ಜವಾಬ್ದಾರಿಯನ್ನು ಮಂಡಳಿಗೆ ಹಸ್ತಾಂತರಿಸಲು ಪಾಲಿಕೆಯು ಈಗಾಗಲೇ ನಿರ್ಧರಿಸಿದೆ. ಆದರೆ ಇನ್ನೂ ಹಸ್ತಾಂತರಿ ಸಿಲ್ಲ. ಕೂಡಲೇ ಜವಾಬ್ದಾರಿ ಪಡೆದು ಕ್ರಮ ಕೈಗೊಳ್ಳಬೇಕು ಎಂದು ಅವರು ಮಂಡಳಿಯ ಮುಖ್ಯ ಎಂಜಿನಿಯರ್‌ ಕೃಷ್ಣಮೂರ್ತಿ ಅವರಿಗೆ ಸೂಚಿಸಿದರು.

ನಗರಕ್ಕೆ ಪ್ರತಿ ದಿನ ಬೇಕಾಗುವ ನೀರು ಮತ್ತು ಪೂರೈಕೆಯಾಗುವ ನೀರಿನ ಪ್ರಮಾಣದ ನಡುವೆ ವ್ಯತ್ಯಾಸವಿದ್ದರೂ, ಪೂರೈಕೆಯಾಗುವ ನೀರಿನ ಸರಿಯಾದ ವಿತರಣೆ ಆಗದಿರುವುದು ಸಮಸ್ಯೆ ಹೆಚ್ಚಾಗಲು ಕಾರಣ ಎಂದರು. ಪ್ರಸ್ತಾವ ಸಲ್ಲಿಸಿ: ನೀರಿನ ಸಮಸ್ಯೆ ಎದು ರಾದ ವೇಳೆ ಪ್ರಸ್ತಾವ ಸಲ್ಲಿಸಿದರೆ ಜನರಿಗೆ ಪ್ರಯೋಜನವಾಗುವುದಿಲ್ಲ. ಸಮಸ್ಯೆ ತಲೆ ದೋರುವ ಮುನ್ನವೇ ಕ್ರಿಯಾ ಯೋಜನೆಯನ್ನು ಸಲ್ಲಿಸಿ ಕೂಡಲೇ ಅನುಮೋದನೆ ಪಡೆದುಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿ. ನೀರು ಪೂರೈಕೆಗೆ ಸರ್ಕಾರದಲ್ಲಿ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬರ ಗಾಲ ಸಮಯದಲ್ಲಿ ಕೊರತೆ ನೀಗಿಸುವ ಸಲುವಾಗಿ ಜಲಾಶಯದಿಂದ ನೀರು ಪೂರೈಸುವ ಸಂಬಂಧ ಕ್ರಮ ಕೈಗೊಳ್ಳು ವಂತೆ ಸಣ್ಣ ನೀರಾವರಿ ಇಲಾಖೆ ಸಚಿವ ರನ್ನು ಕೋರಲಾಗುವುದು. ಅದಕ್ಕಾ ಗಿಯೇ ಪ್ರತ್ಯೇಕ ಸಭೆಯನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಡಿ ದರ್ಜೆ ನೌಕರರನ್ನು ನೇಮಿಸಲು ಜಿಲ್ಲಾಧಿಕಾರಿಗೇ ಅಧಿಕಾರ ನೀಡಲಾಗಿದೆ. ಹೊರಗುತ್ತಿಗೆ ಸಿಬ್ಬಂದಿ ಯನ್ನು ನೇಮಿಸಿ ಕೊಳ್ಳಬಹುದು ಎಂದು ಆದೇಶ ನೀಡ ಲಾಗಿದೆ. ಆದರೂ ಸಿಬ್ಬಂದಿ ನೇಮಿಸದೆ ಸಬೂಬು ಹೇಳುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲೂ ಅನುದಾನದ ಹಣವನ್ನು ಬಳಸಿಲ್ಲ ಎಂದು ಸಚಿವ ವಿನಯ್‌ಕುಮಾರ್‌ ಆಕ್ಷೇಪಿಸಿದರು.

ಶಾಸಕರಾದ ಕೆ.ಸಿ.ಕೊಂಡಯ್ಯ, ಎನ್‌.ವೈ. ಗೋಪಾಲಕೃಷ್ಣ, ಮೇಯರ್‌ ಬಿ.ನಾಗಮ್ಮ, ಉಪಮೇಯರ್‌ ಮಾಲ ನ್‌ಬಿ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಹುಮಾಯೂನ್‌ ನಾಸಿರ್‌ ಖಾನ್‌, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್‌.ಸಿದ್ದನಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ವಿಜಯ ನಗರ ಪ್ರದೇಶ ನಗರಾಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಚಿತ್ರಿಕಿ ಮಹಾಬಲೇಶ್ವರ ಉಪಸ್ಥಿತರಿದ್ದರು.

ಇದೇ ವೇಳೆ ಸಚಿವ ವಿನಯ್ ಕುಮಾರ್ ಸೊರಕೆ ಬಳ್ಳಾರಿಯ ಬಿಷಪ್ ಹೌಸಿಗೆ ಭೇಟಿ ನೀಡಿ ಬಿಷಪ್ ಡಾ ಹೆನ್ರಿ ಡಿ’ಸೋಜ ಅವರನ್ನು ಭೇಟಿಯಾಗಿ ಆಶೀರ್ವಾದವನ್ನು ಪಡೆದುಕೊಂಡರು.

Leave a Reply

Please enter your comment!
Please enter your name here