ಬ್ರಹ್ಮಾವರ: ರಸ್ತೆ ಅಫಘಾತದಲ್ಲಿ ನಿವೃತ್ತ ಡಿವೈಎಸ್ಪಿ ಬಿ ಜೆ ಭಂಡಾರಿ ಸಾವು

ಬ್ರಹ್ಮಾವರ: ನಿವೃತ್ತ ಪೋಲಿಸ್ ಅಧಿಕಾರಿಯೋರ್ವರು ರಸ್ತೆ ಅಫಘಾತದಲ್ಲಿ ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ 66 ಬ್ರಹ್ಮಾವರದಲ್ಲಿ ಜರುಗಿದೆ.

ಮೃತಪಟ್ಟವರನ್ನು ನಿವೃತ್ತ ಡಿವೈಎಸ್ಪಿ ಮಂಗಳೂರು ನಾಗೋರಿ ನಿವಾಸಿ ಬಿ ಜೆ ಭಂಡಾರಿ (62) ಎಂದು ಗುರುತಿಸಲಾಗಿದೆ.

police

ಮೃತ ಭಂಡಾರಿಯವರು ಸೋಮವಾರ ಬ್ರಹ್ಮಾವರದಲ್ಲಿ ತಮ್ಮ ಸಂಬಂಧಿಗಳ ಮದುವೆ ಸಮಾರಂಭಕ್ಕಾಗಿ ಆಗಮಿಸಿದ್ದು, ಸಮಾರಂಭ ಮುಗಿಸಿ ಮಹೇಶ್ ಆಸ್ಪತ್ರೆಯ ಬಳಿ ರಸ್ತೆ ದಾಟುತ್ತಿದ್ದ ವೇಳೆ ಉಡುಪಿಯಿಂದ ಕುಂದಾಪುರಕ್ಕೆ ವೇಗವಾಗಿ ತೆರಳುತ್ತಿದ್ದ ವ್ಯಾಗನರ್ ಕಾರು ಡಿಕ್ಕಿ ಹೊಡೆದಿದ್ದು ತೀವ್ರವಾಗಿ ಗಾಯಗೊಂಡ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಂಜೆಯ ವೇಳೆ ಕೊನೆಯುಸಿರೆಳೆದಿದ್ದಾರೆ.

ಬ್ರಹ್ಮಾವರ ಠಾಣೆಯಲ್ಲಿ ಕೇಸು ದಾಖಲಾಗಿದೆ.

Leave a Reply