ಮಂಗಳೂರು:ಶಾಸಕ ಬಿ ಎ ಮೊಯ್ದಿನ್ ಬಾವಾ ಕಾರು ಅಪಘಾತ; ಆಸ್ಪತ್ರೆಗೆ ದಾಖಲು

ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಬಿ ಎ ಮೊಯ್ದಿನ್ ಬಾವಾ ಅವರ ವಾಹನ ಬುಧವಾರ ಪಣಂಬೂರಿನಲ್ಲಿ ಅಫಘಾತಕ್ಕಿಡಾಗಿದ್ದು ಶಾಸಕರು ಚಿಕ್ಕಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಮಾಹಿತಿಗಳ ಪ್ರಕಾರ ಶಾಸಕ ಬಾವಾ ಅವರು ತಮ್ಮ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಮಂಗಳೂರು ಫರ್ಟಿಲೈಸರ್ಸ್ ಮತ್ತು ಕೆಮಿಕಲ್ಸ್ ಕಂಪೆನಿಯ ಬಳಿ ಅದರ ನೌಕರರು ರೈಲ್ವೆ ಗೇಟನ್ನು ಎಳೆಯುತ್ತಿದ್ದ ವೇಳೆ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಚಾಲಕ ಕಾರನ್ನು ಚರಂಡಿಗೆ ಇಳಿಸಿದ್ದು, ಇದರ ಪರಿಣಾಮ ಶಾಸಕ ಬಾವಾ ಅವರ ಎಡಗೈಗೆ ಸ್ಪಲ್ಪ ಗಾಯಗಳಾಗಿದ್ದು, ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರಿನ ಚಾಲಕ ಕೂಡ ಅಲ್ಪಸ್ವಲ್ಪ ಗಾಯಗೊಂಡಿದ್ದು, ಕಾರು ಜಖಂಗೊಂಡಿದೆ.

Leave a Reply