ಮಂಗಳೂರು: ಅತ್ತಾವರ ಯುವಕನ ಮೇಲೆ ಹಲ್ಲೆ ಪ್ರಕರಣ; ಇನ್ನೋರ್ವ ಆರೋಪಿಯ ಬಂಧನ

ಮಂಗಳೂರು: ಅತ್ತಾವರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಂಡೇಶ್ವರ ಪೋಲಿಸರು ಭಾನುವಾರ ಇನ್ನೋರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಬಂಧಿತ ಯುವಕನನ್ನು ಅತ್ತಾವರ ವಿದ್ಯಾನಾಥ್ ನಗರದ  ಉದ್ದೇಶ್ (30) ಎಂದು ಗುರುತಿಸಲಾಗಿದೆ.

ಅಗೋಸ್ತ್ 24 ರಂದು ಬಲಪಂಥಿಯ ಸಂಘಟನೆಯ ಕಾರ್ಯಕರ್ತರು ಎನ್ನಲಾದ ಕೆಲವರು ಅತ್ತಾವರದ ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಶಾಖಿರ್ ಅವರನ್ನು ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ರಸ್ತೆಯಲ್ಲಿ ವಿದ್ಯುತ್ ಕಂಬಕ್ಕೆ ಕಟ್ಟಿ ಅರೆನಗ್ನಗೊಳಿಸಿ ಹಲ್ಲೆ ನಡೆಸಿದ್ದರು.

ಘಟನೆ ಕುರಿತಂತೆ ಪೊಲಿಸರು ಈಗಾಗಲೇ 14 ಮಂದಿಯನ್ನು ಬಂಧಿಸಿದ್ದು ಉದ್ದೇಶ್ ಅವರ ಬಂಧನದೊಂದಿಗೆ ಬಂಧಿತರ ಸಂಖ್ಯೆ 15 ಆಗಿದೆ,

Leave a Reply