ಮಂಗಳೂರು: ದೇರಳಕಟ್ಟೆಯಲ್ಲಿ ಮೇಲ್ತೆನೆ ಬ್ಯಾರಿ ಭಾಷಾ ದಿನಾಚರಣೆ

Spread the love

ಮಂಗಳೂರು : ಬ್ಯಾರಿ ಲೇಖಕರು-ಕಲಾವಿದರನ್ನು ಒಳಗೊಂಡ “ಮೇಲ್ತನೆ” ಸಂಘಟನೆ ವತಿಯಿಂದ ಶನಿವಾರ ದೇರಳಕಟ್ಟೆಯಲ್ಲಿ “ಬ್ಯಾರಿ ಭಾಷಾ ದಿನ” ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆಂಗ್ಲಭಾಷೆಯ ಪ್ರಭಾವದಿಂದ ಬ್ಯಾರಿ ಭಾಷೆಯ ಅಸ್ತಿತ್ವಕ್ಕೆ ಧಕ್ಕೆಯಾಗಿದ್ದರೂ, ಇದೀಗ ಅಲ್ಲಲ್ಲಿ ನಡೆಯುವ ಬ್ಯಾರಿ ಭಾಷಾ ಆಂದೋಲನದ ಮೂಲಕ ಭಾಷೆಯ ಸತ್ವ ಉಳಿಸಬಹುದಾಗಿದೆ. ಈ ನಿಟ್ಟಿನಲ್ಲಿ ಮತ್ತಷ್ಟು ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದು “ಮೇಲ್ತೆನೆ”ಯ ಸದಸ್ಯ ಮುಹಮ್ಮದ್ ಮಾಸ್ಟರ್ ಮಲಾರ್ ಹೇಳಿದರು.

ಭಾಷಾ ದಿನಾಚರಣೆಯ ಮಹತ್ವದ ಕುರಿತು ವಿಚಾರ ಮಂಡಿಸಿದ “ಮೇಲ್ತನೆ”ಯ ಉಪಾಧ್ಯಕ್ಷ ಟಿ.ಇಸ್ಮಾಯೀಲ್ ಮಾಸ್ಟರ್, ಹಿಂದೆ ಮನೆಗಳಲ್ಲಿ ಶುಭ ಕಾರ್ಯ ನಡೆಯುತ್ತಿದ್ದ ಸಂದರ್ಭ ಭಾಷೆ, ಸಂಸ್ಕøತಿ, ಸಂಸ್ಕಾರ ಮೇಲೈಸುತ್ತಿತ್ತು. ಆದರೆ ಇಂದು ಎಲ್ಲಾ ಶುಭಕಾರ್ಯಗಳು ನಗರದ ಪ್ರದೇಶದಲ್ಲಿರುವ ಸಭಾಂಗಣದಲ್ಲಿ ನಡೆಯುತ್ತಿರುವುದರಿಂದ ಎಲ್ಲವೂ ನಶಿಸುತ್ತಿದೆ. ಇಂದು ಮೂಲ: ಬ್ಯಾರಿ ಭಾಷೆ ಕಣ್ಮರೆಯಾಗುತ್ತಿದ್ದು, ಬಹುಭಾಷಾ ಸಂಗಮದ ನಾಡಾಗಿರುವ ಕರಾವಳಿಯಲ್ಲಿ ಬ್ಯಾರಿ ಭಾಷೆ ಉಳಿವಿಗಾಗಿ ದೊಡ್ಡ ಮಟ್ಟದ ಆಂದೋಲನ ರೂಪಿಸಬೇಕಾಗಿದೆ ಎಂದು ತಿಳಿಸಿದರು.

ಬ್ಯಾರಿ ಭಾಷೆಯಲ್ಲಿ ಮೂಲ ಹೆಸರುಗಳ ಬಗ್ಗೆ ಇಂದಿನ ಮಕ್ಕಳಿಗೆ ಕನಿಷ್ಟ ಜ್ಞಾನವೂ ಇಲ್ಲ. ಪ್ರತಿಯೊಂದು ವಸ್ತುಗಳಿಗಿದ್ದ ಹೆಸರುಗಳೂ ಆಂಗ್ಲ ಭಾಷಾ ಮಯವಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಭಾಷೆ, ಸಂಸ್ಕøತಿ ಉಳಿಸುವ ನಿಟ್ಟಿನಲ್ಲಿ ಮಕ್ಕಳಲ್ಲೇ ಅರಿವು ಮೂಡಿಸಬೇಕಿದೆ ಎಂದು ಟಿ.ಇಸ್ಮಾಯೀಲ್ ಮಾಸ್ಟರ್ ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ “ಮೇಲ್ತೆನೆ” ಅಧ್ಯಕ್ಷ ಆಲಿಕುಂಞÂ ಪಾರೆ ಒಂದು ಕಾಲದಲ್ಲಿ ಬ್ಯಾರಿ ಎಂದರೆ ಅಸಹನೆ ಪಡುತ್ತಿದ್ದವರು ಇಂದು ಭಾಷಾ ಚಳವಳಿಯಿಂದಾಗಿ ಹೆಮ್ಮೆ ಪಡುವಂತಾಗಿದೆ ಎಂದರು.

ಉದ್ಯಮಿ ಏಷಿಯನ್ ಬಾವ ಹಾಜಿ ಮುಖ್ಯ ಅತಿಥಿ ಭಾಷಣ ಮಾಡಿದರು. “ಮೇಲ್ತೆನೆ” ಸದಸ್ಯ ಮುಹಮ್ಮದ್ ಮಾಸ್ಟರ್ ಕಲ್ಕಟ್ಟ, ಸಂಚಾಲಕ ಹಂಝ ಮಲಾರ್, ಸದಸ್ಯರಾದ ಎಂ.ಎಚ್.ಮಲಾರ್, ಮಜೀದ್ ಮಾಸ್ಟರ್ ಮಲಾರ್, , ಸಂಘಟನಾ ಕಾರ್ಯದರ್ಶಿ ಆರೀಫ್ ಕಲ್ಕಟ್ಟ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಅನ್ಸಾರ್ ಇನೋಳಿ ಸ್ವಾಗತಿಸಿದರು. ಸದಸ್ಯ ಬಶೀರ್ ಕಿನ್ಯ ಕವನ ವಾಚಿಸಿದರು. ಕೋಶಾಧಿಕಾರಿ ಅಬ್ಬಾಸ್ ಕಿನ್ಯ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಇಸ್ಮತ್ ಪಜೀರ್ ಕಾರ್ಯಕ್ರಮ ನಿರೂಪಿಸಿದರು.


Spread the love