ಮಂಗಳೂರು: ಗಾಂಜಾ ಮಾರಾಟ ಯತ್ನ; ಮೂರು ಆರೋಪಿಗಳ ಬಂಧನ

ಮಂಗಳೂರು: ಗಾಂಜಾ ಮಾರಾಟ ಯತ್ನಕ್ಕೆ ಸಂಬಂಧಿಸಿ ಪಾಂಡೇಶ್ವರ ಪೋಲಿಸರು ಮೂರು ಮಂದಿ ಯುವಕರನ್ನು ಮೊರ್ಗನ್ ಗೆಟ್ ಬಳಿ ಬುಧವಾರ ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಗಳನ್ನು ಜೆಪ್ಪು ಬಪ್ಪಾಲ್ ನಿವಾಸಿಗಳಾದ ಸುರೇಶ್ ಎಮ್ (20), ಸಚಿನ್ (23), ರಿತೇಶ್ (21) ಎಂದು ಗುರುತಿಸಲಾಗಿದೆ.

Suresh-Sachin-Ritesh-07102015

ವ್ಯವಸ್ಥಿತ ಮಾಹಿತಿಗಳನ್ನು ಪಡೆದ ಪೋಲಿಸರು ಮೂರು ಮಂದಿ ಯುವಕರನ್ನು ಬಂಧಿಸಿ ಅವರಿಂದ ಸುಮಾರು ರೂ 32.350 ಮೌಲ್ಯದ 1.045 ಕೆಜಿ ಗಾಂಜಾ ಹಾಗೂ ಒಂದು ದ್ವಿಚಕ್ರ ವಾಹನವನ್ನು ಬಂಧಿತರಿಂದ ವಶಪಡಿಸಲಾಗಿದ್ದು, ಬಂಧಿತರನ್ನು ನ್ಯಾಯಾಲಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳಗೆ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ. ಅಲ್ಲದೆ ಇವರ ಪ್ರಮುಖ ಇಬ್ಬರು ಆರೋಪಿಗಳ ಹುಡುಕಾಟ ನಡೆಸಲಾಗುತ್ತಿದೆ.

ನಗರ ಪೋಲಿಸ್ ಕಮಿಶನರ್ ಮುರುಗನ್ ನಿರ್ದೇಶನದಂತೆ ಡಿಸಿಪಿ ಕಾನೂನು ಸುವ್ಯಸ್ಥೆ ಕೆ ಎಂ ಕಾಂತರಾಜ್ ಡಿಸಿಪಿ ಕ್ರೈ ಡಾ ಸಂಜೀವ್ ಪಾಟೀಲ್ ಮತ್ತು ಎಸಿಪಿ ಕಲ್ಯಾಣ್ ಶೆಟ್ಟಿ ಮಾರ್ಗದರ್ಶನದಲ್ಲಿ ಪಾಂಡೇಶ್ವರ ಪೋಲಿಸ್ ಅಧಿಕಾರಿ ದಿನಕರ ಶೆಟ್ಠಿ, ಅನಂತ ಮುರ್ಡೇಶ್ವರ್ ಇನ್ನಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸದ್ದರು.

Leave a Reply