ಮಂಗಳೂರು :15ರಂದು ಡುಂಡಿರಾಜ್ ಅವರ ಹನಿಗವನಗಳ ಯಕ್ಷಗಾಯನ ಕಾರ್ಯಕ್ರಮ

ಮಂಗಳೂರು: ಕೇದಿಗೆ ಪ್ರತಿಷ್ಠಾನ, ಮಂಗಳೂರು ಇವರ ವಾರ್ಷಿಕ ಕಾರ್ಯಕ್ರಮ ಭಾಸ್ಕರ ಸಂಸ್ಮರಣೆ ಹಾಗೂ ಲಕ್ಷ್ಮೀ ಭಾಸ್ಕರ ಸೇವಾ ನಿಷ್ಠ ಪ್ರಶಸ್ತಿ ಪ್ರದಾನ ಸಮಾರಂಭವು, ಇದೇ ಜುಲೈ 17ರಂದು ನಗರದ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ.
ಲಕ್ಷ್ಮೀ ಭಾಸ್ಕರ ದೇಶ ಸೇವಾ ನಿಷ್ಠ ಪ್ರಶಸ್ತಿಯನ್ನು ಲೆಫ್ಟಿನೆಂಟ್ ಕರ್ನಲ್ ಜಾನ್ ಎಸ್ ಸೆರಾವೋ ಅವರಿಗೆ ಹಾಗೂ ಉದಯೋನ್ಮುಖ ಯಕ್ಷಗಾನ ಮಹಿಳಾ ಭಾಗವತರಾದ ಭವ್ಯಶ್ರೀ ಮಂಡೆಕೋಲು ಇವರಿಗೆ ಲಕ್ಷ್ಮೀ ಭಾಸ್ಕರ ಯಕ್ಷಸೇವಾ ನಿಷ್ಠ ಪ್ರಶಸ್ತಿಯನ್ನಿತ್ತು ಸನ್ಮಾನಿಸಲಾಗುವುದು ಎಂದು ಕೇದಿಗೆ ಪ್ರತಿಷ್ಠಾನದ ಅಧ್ಯಕ್ಷ ಡಾ.ಕೇದಿಗೆ ಅರವಿಂದ ರಾವ್ ಹೇಳಿದ್ದಾರೆ. ಸಂಜೆ 5.00ಕ್ಕೆ ಆರಂಭವಾಗುವ ಕಾರ್ಯಕ್ರಮದಲ್ಲಿ ಸುಧಾಕರ ರಾವ್ ಪೇಜಾವರ ಅವರು ಅತಿಥಿಯಾಗಿ ಭಾಗವಹಿಸಲಿದ್ದು ಕೇದಿಗೆ ಅರವಿಂದ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದ ನಂತರ ಖ್ಯಾತ ಕವಿ ಹೆಚ್ ಡುಂಡಿರಾಜ್ ಅವರ ಹನಿ ಗವನಗಳ ಯಕ್ಷಗಾಯನ ರೂಪಾಂತರದ ಕಾರ್ಯಕ್ರಮವೂ ಇದ್ದು, ಪೂರ್ಣೇಶ್ ಆಚಾರ್ಯ ಮಂಗಳೂರು, ರಾಕೇಶ್ ಹೊಸಬೆಟ್ಟು, ಸುಬ್ರಮಣ್ಯ ಚಿತ್ರಾಪುರ ಅವರು ಭಾಗವಹಿಸಲಿದ್ದಾರೆ. ಕವಿ ಹೆಚ್ ಡುಂಡಿರಾಜ್ ಅವರ ಪ್ರಧಾನ ಉಪಸ್ಥಿತಿ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

Please enter your comment!
Please enter your name here