ಮೂಡಬಿದ್ರಿ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ – ಆಳ್ವಾಸ್ ಪ್ರಗತಿ 2015ಜೂನ್ 20 ಹಾಗೂ 21 ರಂದು

Spread the love

ಮೂಡಬಿದ್ರಿ: ‘ಆಳ್ವಾಸ್ ಪ್ರಗತಿ-2015’ ವಾರ್ಷಿಕ ಬೃಹತ್ ಉದ್ಯೋಗ ಮೇಳವನ್ನು ವಿದ್ಯಾಗಿರಿಯ ಕ್ಯಾಂಪಸ್‍ನಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯು ದಿನಾಂಕ 20 ಹಾಗೂ 21 ಜೂನ್ ರಂದು ಆಯೋಜಿಸುತ್ತಿದೆ.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉತ್ತಮ ಉದ್ಯೋಗವಕಾಶಗಳಿಂದ ವಂಚಿತರಾಗಿ ಸೀಮಿತವಾದ ಅವಕಾಶಗಳನ್ನು ಪಡೆಯುವಲ್ಲಿ ಮಾತ್ರ ಸಫಲರಾಗುತ್ತಿದ್ದಾರೆ. ಇದನ್ನು ಗಮನಿಸಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಗ್ರಾಮೀಣ ಉದ್ಯೋಗಾಕಾಂಕ್ಷಿಗಳಿಗೆ ವಿಪುಲವಾದ ಮತ್ತು ಉತ್ತಮ ಕಂಪೆನಿಗಳಲ್ಲಿ ಅವಕಾಶಗಳನ್ನು ದೊರಕಿಸಿಕೊಡಲು ಬದ್ಧವಾಗಿದೆ.

ಆಳ್ವಾಸ್ ಪ್ರಗತಿಯ 6ನೆ ಆವೃತ್ತಿಯಲ್ಲಿ 250ಕ್ಕೂ ಅಧಿಕ ಕಂಪನಿಗಳು/ಉದ್ದಿಮೆಗಳು ಭಾಗವಹಿಸುವ ನಿರೀಕ್ಷೆ ಇದೆ.

ಪ್ರಮುಖ ಉದ್ದಿಮೆಗಳಾದ, Oracle, EY, IBM, TCS, Amazon, Biocon, Adani group, Flipkart,
Tech Mahindra, Godrej, Titan, ITC,  Taj Group, ICICI Bank, Wipro, TVS,  Allcargo,
   Standard Chartered Bank, Axis Bank, Kirloskar Electric, Himalaya, Idea,  ಮುಂತಾದವುಗಳು, ಭಾಗವಹಿಸಲಿವೆ. ಈಗಾಗಲೇ 210ಕ್ಕೂ ಹೆಚ್ಚು ಉದ್ದಿಮೆಗಳು ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆಯು 250ನ್ನು ದಾಟುವ ನಿರೀಕ್ಷೆ ಇದೆ.

ಈ ಉದ್ಯೋಗ ಮೇಳದ ಪ್ರಮುಖ ಉದ್ದೇಶವೆಂದರೆ, ಗ್ರಾಮೀಣ ಪ್ರದೇಶಗಳು ಉದ್ಯೋಗಗಳ ಕುರಿತ ಮಾಹಿತಿ ಮತ್ತು ಅವಕಾಶಗಳ ಕೊರತೆಯನ್ನು ಹೊಂದಿದೆ. ಈ ವೇದಿಕೆಯನ್ನು ಮೂಲಭೂತವಾಗಿ ಇಂತಹ ಉದ್ದೇಶಗಳನ್ನು ಈಡೇರಿಸುವ ಸಲುವಾಗಿ 6 ವರ್ಷಗಳ ಹಿಂದೆ ಸ್ಥಾಪಿಸಲಾಗಿದೆ.

ಆಳ್ವಾಸ್ ಪ್ರಗತಿಯು ತನ್ನ ಮೊದಲನೆಯ ಆವೃತ್ತಿಯನ್ನು 38 ಉದ್ದಿಮೆಗಳ ಭಾಗವಹಿಸುವಿಕೆಯ ಮೂಲಕ ಪ್ರಾರಂಭಿಸಿತು. ಕಳೆದ ವರ್ಷ ಆಳ್ವಾಸ್ ಪ್ರಗತಿಯು 216 ಉದ್ದಿಮೆಗಳು ಹಾಗೂ 18,000 ಉದ್ಯೋಗಾಕಾಂಕ್ಷಿಗಳ ಭಾಗವಹಿಸುವಿಕೆಗೆ ಸಾಕ್ಷ್ಯವಾಯಿತು. ಹಾಗೂ 3,764 ಅಭ್ಯರ್ಥಿಗಳು ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದರು.

ಪ್ರಸಕ್ತ ವರ್ಷದಲ್ಲಿ ವಿವಿಧ ರೀತಿಯ ಉದ್ದಿಮೆಗಳು ಆಳ್ವಾಸ್ ಪ್ರಗತಿಯನ್ನು ಪ್ರತಿನಿಧಿಸಲಿವೆ, ಅವುಗಳೆಂದರೆ, Manufacturing, IT, ITeS, Telecom, BFSI, Sales & Retail, Pharma, Hospitality, Healthcare.

  1. ಬಿ.ಎಸ್ಸಿ. ಪದವೀಧರÀರಿಗೆ ಹೆಚ್ಚಿನ ಅವಕಾಶಗಳು: ಬಿ.ಎಸ್ಸಿ ಪದವೀಧರರಿಗೆ ಹೆಚ್ಚಿನ ಅವಕಾಶ ಈ ಬಾರಿ ಆಳ್ವಾಸ್ ಪ್ರಗತಿಯಲ್ಲಿದ್ದು, Oracle, TCS, Biocon, Himalaya, Wipro ದಂತಹ ಬೃಹತ್ ಕಂಪನಿಗಳು ಬಿ.ಎಸ್ಸಿ ಅಭ್ಯರ್ಥಿಗಳಿಗಾಗಿಯೇ ಆಗಮಿಸುತ್ತಿವೆ.
  2. ವಿವಿಧ ಕ್ಷೇತ್ರಗಳಲ್ಲಿ ಪದವಿ ವಿದ್ಯಾರ್ಥಿಗಳಿಗೆ ಅವಕಾಶ: ವಿವಿಧ ವಿಭಾಗಗಳಿಂದÀ ಸ್ನಾತಕ ಪದವಿಯನ್ನು ಪಡೆದ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಿದ್ದು, BIAL, Telecom companies, Standard Chartered, Axis Bank, ICICI Bank, ಅಂತಹ banking ಉದ್ದಿಮೆಗಳು ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವೀಧರರನ್ನು ಆಯ್ಕೆ ಮಾಡಿಕೊಳ್ಳಲಿವೆ.
  3. ಐ.ಟಿ. ಉದ್ದಿಮೆಗಳ ಭಾಗವಹಿಸುವಿಕೆ: ಬೃಹತ್ ಐ.ಟಿ. ಉದ್ಯಮಗಳಾದ, TCS, Oracle, EY, Amazon,
    Tech Mahindra, Flipkart,
    ಇತ್ಯಾದಿ, ಉದ್ದಿಮೆಗಳು ಭಾಗವಹಿಸಲಿವೆ.
  4. ತಯಾರಿಕಾ ಘಟಕದ ಉದ್ದಿಮೆಗಳ ಭಾಗವಹಿಸುವಿಕೆ: ಐ.ಟಿ.ಐ ಹಾಗೂ ಡಿಪ್ಲೊಮಾ ಅಭ್ಯರ್ಥಿಗಳಿಗೆ ಅವಕಾಶವನ್ನು ಕಲ್ಪಿಸುವ ಸಲುವಾಗಿ ಹಲವಾರು ತಯಾರಿಕಾ ಘಟಕ (ಮ್ಯಾನುಫ್ಯಾಕ್ಚರಿಂಗ್) ಉದ್ಯಮಗಳು ಭಾಗವಹಿಸಲಿವೆ. Titan, ITC, Videocon, Biocon, Toyota, SSS, Kirloskar Electric, SKF, ಇತ್ಯಾದಿ ಕಂಪನಿಗಳು ಆಳ್ವಾಸ್ ಪ್ರಗತಿ-2015 ರಲ್ಲಿ ಭಾಗವಹಿಸಲಿವೆ.
  5. ನರ್ಸಿಂಗ್ ಪದವೀಧರರಿಗೆ ಉತ್ತಮ ಅವಕಾಶಗಳು: ಎನ್.ಎಮ್.ಸಿ, ಐಫಾನ್ ಗ್ಲೋಬಲ್, ತುಂಗಾ ಹಾಸ್ಪಿಟಲ್ಸ್, ಎ.ಜೆ.ಹಾಸ್ಪಿಟಲ್, ಇತ್ಯಾದಿ,. ಉದ್ದಿಮೆಗಳು ನರ್ಸಿಂಗ್ ಅಭ್ಯರ್ಥಿಗಳಿಗೆ ಒಳ್ಳೆಯ ಅವಕಾಶಗಳು ಒದಗಿಸಲಿವೆ.
  6. ನಿರ್ಮಾಣ (Construction companies) ಉದ್ದಿಮೆಗಳು ಬಿ.ಇ (ಇಂಜಿನಿಯರಿಂಗ್) ಹಾಗೂ ಐ.ಟಿ.ಐ/ಡಿಪ್ಲೊಮಾ ಅಭ್ಯರ್ಥಿಗಳಿಗೆ ಉತ್ತಮ ಅವಕಾಶಗಳನ್ನು ಒದಗಿಸಲಿವೆ. ಪೂರ್ವಾಂಕರ ಗ್ರೂಪ್ಸ್, ವಿಜಯನಾಥ್ ಸಲೂಶನ್ಸ್ ಇನ್ನೂ ಮುಂತಾದ ಉದ್ಯಮಗಳು ಭಾಗವಹಿಸಲಿವೆ.
  7. ಫಾರ್ಮಾಸಿಟಿಕಲ್ ವಿದ್ಯಾರ್ಥಿಗಳಿಗೂ ಅವಕಾಶ: ಹಲವಾರು ಉತ್ತಮ ಆಸ್ಪತ್ರೆಗಳು, ಹಾಗೂ ಫಾರ್ಮಾ ಕಂಪೆನಿಗಳು ಫಾರ್ಮಾಸಿಟಿಕಲ್ ಅಭ್ಯರ್ಥಿಗಳಿಗೆ ಒಳ್ಳೆಯ ಉದ್ಯೋಗವಕಾಶಗಳನ್ನು ನೀಡುವ ಉದ್ದೇಶದಿಂದ ಆಳ್ವಾಸ್ ಪ್ರಗತಿಯಲ್ಲಿ ಭಾಗವಹಿಸಲಿವೆ.
  8. ವಿದೇಶಗಳಲ್ಲಿ ಉದ್ಯೋಗ ಪಡೆಯಲು ಇಚ್ಚಿಸುವವರಿಗೆ UAE Exchange, NMC ಮತ್ತು Ifan Global ಉದ್ದಿಮೆಗಳು ವಿದೇಶದಲ್ಲಿ ಉದ್ಯೋಗವಕಾಶಗಳನ್ನು ಒದಗಿಸಲಿವೆ.
  9. ಟೆಲಿಕಾಂ ಉದ್ಯಮಗಳಾದ Idea Cellular, Airtel, Vodafone, Reliance Communications ಗಳು ಭಾಗವಹಿಸಲಿವೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಉದ್ಯೋಗ (ಪ್ಲೇಸ್‍ಮೆಂಟ್) ವಿಭಾಗವು ವರ್ಷಪೂರ್ತಿ ಹಲವಾರು ಕಂಪೆನಿಗಳನ್ನು ಕಾಲೇಜುಗಳಿಗೆ ಆಹ್ವಾನಿಸುವ ಮೂಲಕ ಕಂಪೆನಿಯ ಹಾಗೂ ವಿದ್ಯಾರ್ಥಿಗಳ ಅವಶ್ಯಕತೆಗಳನ್ನು ಪೂರೈಸುವಲ್ಲಿ ಶ್ರಮಿಸುತ್ತಿದೆ.

ಆಳ್ವಾಸ್ ಪ್ರಗತಿ-2015ರ ಪ್ರಮುಖ ಅಂಶಗಳು:

  1. ಉಚಿತ ನೊಂದಣಿ: ಕಂಪೆನಿಗಳಿಗೆ ಹಾಗೂ ಅಭ್ಯರ್ಥಿಗಳಿಗೆ ಉಚಿತವಾದ ನೊಂದಣಿ ವ್ಯವಸ್ಥೆ ಇದ್ದು, ಆನ್ ಲೈನ್ ನೊಂದಣಿಯನ್ನು ಈ ಮುಂದಿನ ಜಾಲತಾಣದಲ್ಲಿ ಮಾಡಿಕೊಳ್ಳಬೇಕಾಗುತ್ತದೆ. www.alvaspragati.com
  2. ವಿವಿಧ ಬಣ್ಣಗಳ ಕಾರ್ಡಗಳನ್ನು ಅಭ್ಯರ್ಥಿಗಳಿಗೆ ನೀಡಲಾಗುತ್ತದೆ. ಅದರ ಮೂಲಕ ಅಭ್ಯರ್ಥಿಯು ತನ್ನ ವಿದ್ಯಾರ್ಹತೆಗನುಗುಣವಾಗಿ ಸೂಕ್ತವಾದ ಕಂಪನಿಯೊಂದಿಗೆ ಸಂಪರ್ಕಿಸಲು ಸಹಾಯವಾಗುತ್ತದೆ.
  3. ಉದ್ಯೋಗ ಮಾಹಿತಿ ಕೇಂದ್ರ: ಮಾನವ ಸಂಪನ್ಮೂಲ ಪ್ರತಿನಿಧಿಗಳು, ತರಭೇತುದಾರರು ಹಾಗು ಶಿಕ್ಷಕರುಗಳಿಂದ ಕೂಡಿದ ಮಾಹಿತಿ ಕೇಂದ್ರವು ವಿದ್ಯಾರ್ಥಿಗಳಿಗೆ ಸರಿಯಾದ ಕಂಪೆನಿಗಳನ್ನು ಆಯ್ಕೆ ಮಾಡುವುದರಿಂದ ಹಿಡಿದು ಸಂದರ್ಶನದವರೆಗೆ ಅಗತ್ಯವಿರುವ ಸಲಹೆ ಸೂಚನೆಗಳನ್ನು ನೀಡಲಾಗುವುದು.
  4. ಕ್ಲ್ಯಾರಿಟಿ ವಾಲ್: ಇದರಲ್ಲಿ ಯಾವ ಕಂಪೆನಿಗಳಲ್ಲಿ ಎಷ್ಟು ಉದ್ಯೋಗವಕಾಶಗಳಿವೆ ಎಂಬುದನ್ನು ಕಂಪನಿಯ ವಿವರಣೆಗಳೊಂದಿಗೆ ಸ್ಪಷ್ಟವಾಗಿ ಪ್ರದರ್ಶಿಸಲಾಗುವುದು.
  5. ದೂರ ಪ್ರದೇಶಗಳಿಂದ ಆಗಮಿಸುವ ಅಭ್ಯರ್ಥಿಗಳಿಗೆ ವಸತಿ ಸೌಕರ್ಯವನ್ನು ಒದಗಿಸಲಾಗುವುದು
  6. ಐ.ಟಿ.ಐ ವಿದ್ಯಾರ್ಥಿಗಳಿಗೆ ಬಸ್ಸಿನ ಸೌಲಭ್ಯ: ಐ.ಟಿ.ಐ ವಿದ್ಯಾರ್ಥಿಗಳಿಗಾಗಿ ಅವರವರ ಸಂಸ್ಥೆಗಳಿಂದ ಬರಲು ಅನುಕೂಲವಾಗುವಂತೆ ಎರಡು ದಿನವೂ ಬಸ್ಸಿನ ಸೌಲಭ್ಯವನ್ನು ಒದಗಿಸಲಾಗುವುದು. ತಮ್ಮ ವಿದ್ಯಾರ್ಥಿಗಳನ್ನು ಕಳುಹಿಸುವ ಸಂಸ್ಥೆಗಳು ವಿದ್ಯಾರ್ಥಿಗಳ ಸಂಖ್ಯೆಯನ್ನು ಮೊದಲೇ ಆಯೋಜಕರಲ್ಲಿ ತಿಳಿಸಬೇಕಾಗುತ್ತದೆ.
  7. ಹಲವಾರು ಕಂಪೆನಿಗಳಲ್ಲಿ ಹಳೆಯ ವಿದ್ಯಾರ್ಥಿಗಳಿಗೂ ಉದ್ಯೋಗವಕಾಶಗಳಿರುತ್ತವೆ.

ವಿ.ಸೂ. ಆಳ್ವಾಸ್ ಪ್ರಗತಿ 2015 ಕ್ಕೆ ಆಗಮಿಸಲು ಇಚ್ಚಿಸುವ ಅಭ್ಯರ್ಥಿಗಳು ಈ ಕೆಳಕಾಣಿಸಿದ ದಾಖಲೆಗಳನ್ನು ಕಡ್ಡಾಯವಾಗಿ ತರಬೇಕಾಗುತ್ತದೆ.

  1. 5 ರಿಂದ 10 ಪಾಸ್ ಪೋರ್ಟ್ ಸೈಜ್ ಭಾವಚಿತ್ರ, ಹಾಗೂ ಸ್ವವಿವರಗಳನ್ನು ಒಳಗೊಂಡ ರೆಸ್ಯೂಮ್.
  2. ಎಲ್ಲಾ ಅಂಕಪಟ್ಟಿಗಳ ನಕಲು ಪ್ರತಿಗಳು
  3. ಆನ್ ಲೈನ್ ನೊಂದಣಿ ಸಂಖ್ಯೆ/ಐಡಿ.
  4. ಭಾಗವಹಿಸುವ ಅಭ್ಯರ್ಥಿಗಳು ವಿದ್ಯಾಗಿರಿಯ ಕ್ಯಾಂಪಸ್ ನಲ್ಲಿ ದಿನಾಂಕ 20 ಹಾಗೂ 21 ಜೂನ್ ರಂದು ಸರಿಯಾಗಿ ಬೆಳಗ್ಗೆ 8.30ಕ್ಕೆ ಹಾಜರಾಗಬೇಕು.

Spread the love