ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅದ್ಯತೆ: ಜೆ. ಆರ್. ಲೋಬೊ

ಮಂಗಳೂರು: ಸುಮಾರು 32 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಗೊಂಡ 49ನೇಯ ವಾರ್ಡಿನ ಕಪಿತಾನಿಯೊ ತೆಂಡೆಲ್‍ತೋಟ ಪರಿಸರದಲ್ಲಿ ಇತ್ತೀಚಿಗೆ ಕಾಮಗಾರಿಗೊಂಡ ಕಾಂಕ್ರೀಟ್ ರಸ್ತೆಯನ್ನು ನಗರದ ಶಾಸಕ ಜೆ. ಆರ್. ಲೋಬೊರವರು ಅದಿತ್ಯವಾರ ಉದ್ಘಾಟಿಸಿದರು.

1

ಬಳಿಕ ಮತಾನಾಡಿದ ಶಾಸಕರು ಮುಖ್ಯ ರಸ್ತೆಯ ಕಾಂಕ್ರಿಟೀಕರಣದ ಜೊತೆಜೊತೆಗೆ ಒಳ ರಸ್ತೆ ಅಭಿವೃದ್ಧಿಗೆ ಹೆಚ್ಚು ಅದ್ಯತೆ ನೀಡುವುದರಿಂದ ಅ ಪ್ರದೇಶವು ಶೀಘ್ರವಾಗಿ ಬೆಳಯಲು ಸಾಧ್ಯ ಈ ನಿಟ್ಟಿನಲ್ಲಿ ಈಗಾಗಲೇ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಿದ್ದು, ನಗರದ ಹಾಗು ಗ್ರಾಮೀಣ ಪ್ರದೇಶದಲ್ಲಿರುವ ಹಲವು ಡಾಮರ್ ಹಾಗು ಮಣ್ಣು ರಸ್ತೆಗಳನ್ನು ಕಾಂಕ್ರಿಟಿಕರಣಗೊಳಿಸಲಾಗಿದೆ. ಇದರ ಜೊತೆಗೆ ನಗರದ ಸಮಗ್ರ ಅಭಿವೃದ್ದಿಯ ದೃಷ್ಟಿಕೋನವನ್ನು ಇಟ್ಟುಕೊಂಡು ಮಾರುಕಟ್ಟೆ ಹಾಗು ಉತ್ತಮ ಸೌಲಭ್ಯವುಳ್ಳ ಬಸ್ ಸ್ಟ್ಯಾಂಡ್ ನಿರ್ಮಾಣವು ಹಂತ ಹಂತದಲ್ಲಿ ಅದ್ಯತೆಯ ಮೇರೆಗೆ ಮಾಡಲಾಗುವುದು ಎಂದು ತೀಳಿಸಿದರು.

ಸ್ಥಳೀಯ ಕಾರ್ಪೋರೇಟರ್ ಪ್ರವೀಣ್ ಚಂದ್ರ ಆಳ್ವ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಅದ್ಯತೆಯನ್ನು ನೀಡಲು ಶಾಸಕರು ಕಾರ್ಯಕ್ರಮದಲ್ಲಿ ಕೋರಿದರು.

ಮಹಾಲಿಂಗೆಶ್ವರ ದೇವಸ್ಥಾನದ ಮೋಕ್ತೇಸರದ ಕೆ. ದೇವೇಂದ್ರ, ರೇಡ್ ಕ್ರಾಸ್‍ನ ಮುಖ್ಯಸ್ಥ ಬಿ. ಪ್ರಬಕರ್ ಶ್ರೀಯಾನ್, ಎ.ವಿ. ಭಟ್, ವಕೀಲರಾದ ಪÀದ್ಮರಾಜ್, ಗುತ್ತಿಗೆದಾರ ಶರೀಫ್, ಶಶಿಧರ್ ಕೊಟ್ಟರಿ, ಕೃತೀನ್ ಕುಮಾರ್, ಉಮೇಶ್ ದೇವಾಡಿಗ, ದಿಕ್ಷಿತ್, ನಾಗೇಂದ್ರ ಮುತಾಂದವರು ಉಪಸ್ಥಿತರಿದ್ದರು.

Leave a Reply