ರಸ್ತೆ ಕಾಮಗಾರಿಗೆ ಸಚಿವ ಮಧ್ವರಾಜ್ ಶಂಕು ಸ್ಥಾಪನೆ

ರಸ್ತೆ ಕಾಮಗಾರಿಗೆ ಸಚಿವ ಮಧ್ವರಾಜ್ ಶಂಕು ಸ್ಥಾಪನೆ

ಉಡುಪಿ: ಉಡುಪಿ ತಾಲೂಕಿನ ಅಂಬಾಗಿಲು-ಮಣಿಪಾಲ-ಉದ್ಯಾವರ-ಮಲ್ಪೆ ರಸ್ತೆ ಅಭಿವೃದ್ಧಿಯ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್‍ರವರು ಇಂದು ಮಣಿಪಾಲದಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.

manipal-pramod-guddali-pooja-road-20160715

440.00 ಲಕ್ಷ ರೂ ಗಳ ಚತುಷ್ಪಥ ರಸ್ತೆ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ವೇಳೆ ನಗರಸಭಾ ಅಧ್ಯಕ್ಷರಾದ ಮೀನಾಕ್ಷಿ ಮಾಧವ ಬನ್ನಂಜೆ, ನಗರಸಭಾ ಸದಸ್ಯರಾದ ಸೆಲಿನಾ ಕರ್ಕೆಡಾ, ಪ್ರಶಾಂತ್ ಭಟ್, ರಮೇಶ್ ಕಾಂಚನ್, ಸಾಬೂನು ಮತ್ತು ಮಾರ್ಜಕ ಮಂಡಳಿಯ ವೆರೋನಿಕಾ ಕರ್ನೆಲಿಯೋ, ಜಿಲ್ಲಾ ಪಂಚಾಯತ್ ಸದಸ್ಯರಾದ ಜನಾರ್ಧನ ತೋನ್ಸೆ ಮತ್ತಿತರರು ಉಪಸ್ಥಿತರಿದ್ದರು.

Leave a Reply